Kangana Ranaut Welcomes 2022: ಕಡಿಮೆ FIR, ಜಾಸ್ತಿ ಲವ್ ಸಿಗ್ಲಿ, ಮಂದಿರದಲ್ಲಿ ಕಂಗನಾ ಪ್ರಾರ್ಥನೆ
ಕಳೆದ ವರ್ಷ ಅಂದರೆ 2021 ಕಂಗನಾ ರಣಾವತ್‌ಗೆ (Kangana Ranaut) ವಿಶೇಷವಾಗಿರಲಿಲ್ಲ. ಹಲವು ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು ಮತ್ತು ಹಲವು ವಿವಾದಗಳನ್ನೂ ಹುಟ್ಟು ಹಾಕಿದ್ದಾರೆ. ಈ ಕಾರಣಗಳಿಂದ ಕಂಗನಾ ಅವರನ್ನು ಟ್ವಿಟರ್ ಕೂಡ ಬ್ಯಾನ್ ಮಾಡಿತ್ತು. ಆದರೆ 2022 ರ ಹೊಸ ವರ್ಷದಲ್ಲಿ (New Year) ಅವರು ತಿರುಪತಿ ಬಾಲಾಜಿ ಬಳಿಯ ರಾಹು-ಕೇತು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ದೇವಸ್ಥಾನದ ಭೇಟಿಗೆ ಸಂಬಂಧಿಸಿದ ಕೆಲವು ಫೋಟೋಗಳನ್ನೂ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
2022 ರ ಹೊಸ ವರ್ಷದಲ್ಲಿ ಕಂಗನಾ ರಣಾವತ್ ಅವರು ತಿರುಪತಿ ಬಾಲಾಜಿ ಬಳಿಯ ರಾಹು-ಕೇತು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ದೇವಸ್ಥಾನದ ಭೇಟಿಗೆ ಸಂಬಂಧಿಸಿದ ಕೆಲವು ಫೋಟೋಗಳನ್ನೂ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಕಂಗನಾ ದೀಪಗಳ ಬಳಿ ಕುಳಿತು ಪೂಜೆ ಸಲ್ಲಿಸುತ್ತಿರುವುದನ್ನು ಈ ಫೋಟೋಗಳಲ್ಲಿ ಕಾಣಬಹುದು. ಈ ವೇಳೆ ಅವರು ಕ್ರೀಮ್ ಕಲರ್ ಸೀರೆ ಉಟ್ಟಿದ್ದರು. ಕೂದಲನ್ನು ಬಿಗಿಯಾಗಿ ಕಟ್ಟಿಕೊಂಡು, ಹಣೆಗೆ ಬಿಂದಿಯನ್ನು ಧರಿಸಿದ್ದ ಸಿಂಪಲ್ ಲುಕ್ ನಲ್ಲಿ ಕಂಗನಾ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಹಾಗೇ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಅವರು ಕೆಂಪು ಸೀರೆ ಮತ್ತು ಭಾರವಾದ ಆಭರಣಗಳನ್ನು ಧರಿಸಿರುವುದನ್ನು ಕಾಣಬಹುದು.'ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.ತಿರುಪತಿ ಬಾಲಾಜಿಯ ಆಶೀರ್ವಾದದೊಂದಿಗೆ ಈ ವರ್ಷವನ್ನು ಪ್ರಾರಂಭಿಸುತ್ತಿದ್ದೇನೆ. ಇದು ಸ್ಮರಣೀಯವಾಗಲಿ ಎಂದು ಭಾವಿಸುತ್ತೇನೆ' ಎಂದು ಫೋಟೋದ ಜೊತೆ ಬರೆದಿದ್ದಾರೆ.
ರಾಹು-ಕೇತು ದೇವಸ್ಥಾನದಿಂದ ಕಂಗನಾ ಹಂಚಿಕೊಂಡ ಫೋಟೋವೊಂದರಲ್ಲಿ, ಅವರು ಹಸುವಿಗೆ ಮೇವನ್ನು ತಿನ್ನಿಸುವುದನ್ನು ಸಹ ಕಾಣಬಹುದು. ತಿರುಪತಿ ಬಾಲಾಜಿ ಬಳಿ ಇರುವ ಈ ದೇವಸ್ಥಾನದಲ್ಲಿ ಕಂಗನಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
Kangana Ranaut perform rituls in new year 2022 at Rahu Ketu temple near Tirupati Balaji
'ಪ್ರಪಂಚದಲ್ಲಿ ಒಂದೇ ರಾಹು ಕೇತು ದೇವಾಲಯವಿದೆ, ಅದು ತಿರುಪತಿ ಬಾಲಾಜಿಗೆ ಬಹಳ ಹತ್ತಿರದಲ್ಲಿದೆ, ಅಲ್ಲಿ ಕೆಲವು ಆಚರಣೆಗಳನ್ನು ಮಾಡಲಾಗಿದೆ. ಐದು ಪಂಚಭೂತ್ ಲಿಂಗಗಳಲ್ಲಿ ಒಂದಾದ ವಾಯು ಲಿಂಗ ಇಲ್ಲಿ ನೆಲೆಗೊಂಡಿದೆ. ಸಾಕಷ್ಟು ಗಮನಾರ್ಹವಾದ ಸ್ಥಳ. ನನ್ನ ಆತ್ಮೀಯ ಶತ್ರುಗಳ ಕರುಣೆಗಾಗಿ ನಾನು ಇಲ್ಲಿಗೆ ಹೋಗಿದ್ದೇನೆ, ಈ ವರ್ಷ ನನಗೆ ಕಡಿಮೆ ಪೊಲೀಸ್ ದೂರು/ಎಫ್‌ಐಆರ್ ಮತ್ತು ಹೆಚ್ಚಿನ ಪ್ರೇಮ ಪತ್ರಗಳು ಬೇಕು. ಜೈ ರಾಹು ಕೇತು' ಎಂದು ಅವರು ಬರೆದಿದ್ದಾರೆ.
ಭಿಕ್ಷಾಟನೆಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕಂಗನಾ ರಣಾವತ್ ಹೇಳಿಕೆಗೆ ಗೀತರಚನೆಕಾರ ಜಾವೇದ್ ಅಖ್ತರ್ ವ್ಯಂಗ್ಯವಾಡಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ ಕಂಗನಾ ಹೆಸರನ್ನು ಬರೆಯಲಿಲ್ಲ. ಆದರೆ ನಟಿಯನ್ನು ಗುರಿಯಾಗಿಸಿದ್ದಾರೆ. 'ಇದು ಸಂಪೂರ್ಣವಾಗಿ ಅರ್ಥವಾಗುತ್ತದೆ. ಸ್ವಾತಂತ್ರ್ಯ ಚಳವಳಿಗೆ ಸಂಬಂಧವೇ ಇಲ್ಲದ ಜನರು ದೇಶದ ಸ್ವಾತಂತ್ರ್ಯವನ್ನು ಕೇವಲ ‘ಭಿಕ್ಷೆ ಎಂದು ಹೇಳುತ್ತಿದ್ದಾರೆ' ಎಂದು ಜಾವೇದ್ ಅಖ್ತರ್ ಟ್ವೀಟ್ ಮಾಡಿದ್ದರು.
'1947 ರಲ್ಲಿ ಸಿಕ್ಕ ಸ್ವಾತಂತ್ರ್ಯ ಮತ್ತು ಹಿಂಸೆಯನ್ನು ಉಲ್ಲೇಖಿಸುವಾಗ ಕಂಗನಾ, ಇದು ಸ್ವಾತಂತ್ರ್ಯವಲ್ಲ, ಭಿಕ್ಷೆ. ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅದು 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ಸಿಕ್ಕಿತು'ಎಂದು ಕಂಗನಾ ನೀಡಿದ ಹೇಳಿಕೆ ವಿವಾದಗಳಿಗೆ ಕಾರಣವಾಯಿತು.
ಕಂಗನಾ ಪ್ರಸ್ತುತ ತಮ್ಮ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲಂಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ ಟಿಕು ವೆಡ್ಸ್ ಶೇರು ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಂಗನಾ ಇತ್ತೀಚೆಗೆ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಅದರಲ್ಲಿ ಅವರು ನಿರ್ದೇಶಕರ ಕುರ್ಚಿಯ ಮೇಲೆ ಕುಳಿತಿದ್ದಾರೆ. ಭಾರತೀಯ ಚಿತ್ರರಂಗದ ಸುವರ್ಣ ಯುಗದಿಂದ ನನಗೆ ಅಪರೂಪದ ರತ್ನ (ಹೊಸ ಕ್ಯಾಮೆರಾ) ಸಿಕ್ಕಿದೆ. ಇದು ತನಗೆ ವರದಾನಕ್ಕಿಂತ ಕಡಿಮೆಯಿಲ್ಲ. ಈ ಅಮೂಲ್ಯ ರತ್ನಕ್ಕಾಗಿ ಅವರು ಪ್ರಸಿದ್ಧ ನಿರ್ದೇಶಕ ಬಿಮಲ್ ರಾಯ್ ಮತ್ತು ಅವರ ಕುಟುಂಬಕ್ಕೆ ಧನ್ಯವಾದ ಎಂದು ಕಂಗನಾ ಹೇಳಿದ್ದಾರೆ.