Nayanthara Skincare Brand: 'ದಿ ಲಿಪ್ ಬಾಮ್ ಕಂಪೆನಿ' ತೆರೆದ ನಟಿ ನಯನತಾರಾ!
ನಿರ್ಮಾಪಕಿ ಆಯ್ತು ಇದೀಗ ಉದ್ಯಮಿಗಳ ಸಾಲಿಗೆ ಸೇರಿಕೊಂಡ ನಟಿ ನಯನತಾರಾ. ಹೊಸ ಬ್ರ್ಯಾಂಡ್ ನೋಡಿ ನೆಟ್ಟಿಗರು ಶಾಕ್...
ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್, ತಲೈವಿ ನಯನತಾರಾ (Nayanthara) ಏನೇ ಮಾಡಿದ್ದರೂ ದೊಡ್ಡ ಸುದ್ದಿ ಆಗುತ್ತದೆ. ಸಿನಿಮಾ ಒಪ್ಪಿಕೊಂಡರೂ ಸುದ್ದಿ ಒಪ್ಪದಿದ್ದರೂ ಸುದ್ದಿ, ಪರ್ಸನಲ್ ಲೈಫ್ ಗಾಸಿಪ್ (Gossip) ಇಲ್ಲವೇ ಇಲ್ಲ, ನಿರ್ಮಾಪಕಿಯಾಗಿ ಏನೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಳ್ಳುತ್ತಾರೆ. ಹೀಗೆ ಲೈಫ್ ಬಗ್ಗೆ ಅಪ್ಡೇಟ್ ಆಗಿರುವ ನಯನತಾರಾ ಇದೀಗ ಕತ್ರಿನಾ ಕೈಫ್ (Katrina Kaif) ರೀತಿ ಉದ್ಯಮಿ ಆಗಲು ನಿರ್ಧರಿಸಿದ್ದಾರೆ, ತಮ್ಮ ಹೊಸ ಬ್ರ್ಯಾಂಡ್ ಕೂಡ ಲಾಂಚ್ ಮಾಡಿದ್ದಾರೆ.
ಹಿಂದೆಲ್ಲಾ ನಟಿಯರು ಅಂದ್ಮೇಲೆ ಸಿನಿಮಾ ಮಾತ್ರ ಮೀಸಲು ಎನ್ನುವ ಮನೋಭಾವವಿತ್ತು ಆದರೀಗ ಅವರು ಕೂಡಾ ಯಾವ ನಟ ಯಾವ ಉದ್ಯಮಿಗೂ ಕಡಿಮೆ ಇಲ್ಲ ಎಂದು ದಿನೇ ದಿನೇ ಸಾಭೀತು ಮಾಡುತ್ತಿದ್ದಾರೆ. ರಾಜಕೀಯ (Politics), ರಿಯಲ್ ಎಸ್ಟೆಟ್ (Real estate), ಫೈನಾನ್ಸ್ (Finance), ಸಲೂನ್ (Saloon), ಡಿಸೈನರ್ ಉಡುಪು (Designer wear) ಹೀಗೆ ಒಂದೊಂದು ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಟಿ ಕಮ್ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ನಯನತಾರಾ ಇದೀಗ ಸ್ಕಿನ್‌ಕೇರ್ (Skincare) ಬ್ರ್ಯಾಂಡ್ ಶುರು ಮಾಡಿದ್ದಾರೆ. ಅದೇ ಅಚ್ಚರಿಯ ವಿಚಾರ...
Nayantara Buys a new home: ಚೆನ್ನೈನ ದುಬಾರಿ ಏರಿಯಾದಲ್ಲಿ 4BHK ಮನೆ ಖರೀದಿಸಿದ ನಟಿಹೌದು! ನಟಿ ನಯನತಾರಾ ಸೌಂದರ್ಯವರ್ಧಕ ' ದಿ ಲಿಪ್ ಬಾಮ್ ಕಂಪೆನಿ' ಹೆಸರಿನಲ್ಲಿ ಲಿಪ್ ಬಾಮ್ (Lip Balm) ತೆರೆದಿದ್ದಾರೆ. ಸೌಂದರ್ಯ ತಜ್ಞೆ (Dermotologist) ರೆನಿತಾ ರಾಜನ್ ಅವರೊಟ್ಟಿಗೆ ಸೇರಿಕೊಂಡು ಈ ಸಂಸ್ಥೆ ಪ್ರಾರಂಭಿಸಿದ್ದಾರೆ. ತಮ್ಮ ಕಂಪನಿ ಲೋಗೋ ಹೇಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಯನತಾರಾ ಹಂಚಿಕೊಂಡಿದ್ದಾರೆ. 'ನಾನು ಸದಾ ನಂಬುವ ಒಂದು ವಿಚಾರ, ಸ್ಕಿನ್ ಕೇರ್ ಮತ್ತು ನಾವು ಬಳಸುವ ಬ್ರ್ಯಾಂಡ್‌ಗಳ ಬಗ್ಗೆ ಯಾವತ್ತೂ ಕಾಂಪ್ರಮೈಸ್ ಆಗಬಾರದು. ನಾನು ಮುಖ್ಯವಾಗಿ ಅದು ನನ್ನ ಪರ್ಸನಲ್ ಕೇರ್‌ಗೆ ಬಳುವ ಪ್ರಾಡೆಕ್ಟ್ ಆಗಿದ್ದು ಹೆಚ್ಚಿನ ಪರ್ಫಾರ್ಮೆನ್ಸ್ ಮತ್ತು ಸುರಕ್ಷತೆ ಇರಬೇಕು. ಇದೇ Valuesನ ನಾನು ನಮ್ಮ ದಿ ಲಿಪ್ ಬಾಮ್ ಕಂಪನಿಗೆ ಸಂಯೋಜಿಸಲಾಗಿದೆ' ಎಂದು ನಯನತಾರಾ ಹೇಳಿದ್ದಾರೆ.
' ವೆರೈಟಿ ಆಫ್ ಲಿಪ್ ಬಾಮ್ ಕ್ರಿಯೇಟ್ ಮಾಡುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ. ಸದಾ Extraordinary ಹುಡುಕುವ ವ್ಯಕ್ತಿಗಳನ್ನು ಪ್ರತಿಧ್ವನಿಸುತ್ತದೆ. ಜಸ್ಟ್ ಲೈಮ್ ನಾನು ಮಾಡುವ ರೀತಿ' ಎಂದಿದ್ದಾರೆ ನಯನತಾರಾ.
ನಯನತಾರಾ ತ್ವಚ್ಛೆ ಆರೈಕೆ ಬಗ್ಗೆ ನೆಟ್ಟಿಗರು ಸದಾ ಪ್ರಶ್ನೆ ಮಾಡುತ್ತಿದ್ದರು. ಈವರೆಗೂ ಯಾವ ಬ್ರ್ಯಾಂಡ್ ಪ್ರಮೋಟ್ ಮಾಡದ ಕಾರಣ ಯಾರಿಗೂ ಇದರ ಬಗ್ಗೆ ಮಾಹಿತಿ ಇರಲಿಲ್ಲ ಆದರೆ ಇದೀಗ ಲಿಪ್ ಬಾಮ್ ಹಿಂದಿನ ರಹಸ್ಯ ರಿವೀಲ್ ಆಗಿದೆ ಎನ್ನುತ್ತಾರೆ ನೆಟ್ಟಿಗರು. ಬಾಲಿವುಡ್ ಕ್ಯಾಟ್ ಕತ್ರಿನಾ ಕೈಫ್ ಈ ಹಿಂದೆ ಸ್ಕಿನ್ ಕೇರ್ ಬ್ರ್ಯಾಂಡ್ ತೆರೆದಾಗಲ್ಲೂ ನಟಿ ನಯನತಾರಾನೇ ಪ್ರಚಾರ ಮಾಡಿದ್ದರು. ಇದು ಪ್ರಚಾರ ಎಂದು ತಿಳಿದ ಅಭಿಮಾನಿಗಳು ಹೆಚ್ಚಾಗಿ ಖರೀದಿಸಲಿಲ್ಲ ಆದರೆ ಈ ಲಿಪ್ ಬಾಮ್‌ನ ನಯನತಾರಾ ಬಳಸುತ್ತಿದ್ದಾರೆ ಎಂದು ತಿಳಿದ ಕೋಡಲೇ ವೆಬ್‌ಸೈಟ್ ಕ್ರ್ಯಾಶ್ ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
Nayantara: ಸಂಭಾವನೆ ಹೆಚ್ಚಿಸ್ಕೊಂಡ್ರಾ ಸೌತ್ ನಟಿ, ಸೈಡ್ ರೋಲ್ ಮಾಡಿದ್ರು ಕೋಟಿ ಕೋಟಿ ಪೇಮೆಂಟ್ಇನ್ನು ತಮ್ಮ ಹುಟ್ಟುಹಬ್ಬದ ದಿನ ನಯನತಾರಾ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಿದ್ದರು. ಪತಿ ವಿಘ್ನೇಶ್ (Director Vignesh) ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದ್ದು ಲುಕ್ ಲುಕ್ ಮಾತ್ರ ರಿವೀಲ್ ಮಾಡಿದ್ದಾರೆ. ನಯನತಾರಾ ಮಾತ್ರವಲ್ಲದೆ ನಟಿ ಕತ್ರಿನಾ ಕೈಫ್ ಸೌಂದರ್ಯವರ್ಧಕ ಬ್ರ್ಯಾಂಡ್ ಹೊಂದಿದ್ದಾರೆ, ನಟ ರಿತೇಶ್ (Ritesh Deshkum) ಮತ್ತು ಜೆನಿಲಿಯಾ ಸಸ್ಯಜನ್ಯ ಮಾಂಸ ಖಾದ್ಯಗಳನ್ನು ಹೊಂದಿದ್ದಾರೆ, ಅನುಷ್ಕಾ ಶರ್ಮಾ (Anushka sharma) ಮತ್ತು ವಿರಾಟ್ ಅವರ ಒನ್ ಬಟ್ಟೆ ಬ್ಯಾಂಡ್ ಮತ್ತು ಇನ್ ಎಲೆಕ್ರಾನಿಕ್ ಗ್ಯಾಜೆಟ್ ಸಂಸ್ಥೆ ಹೊಂದಿದ್ದಾರೆ.