Nayantara Buys a new home: ಚೆನ್ನೈನ ದುಬಾರಿ ಏರಿಯಾದಲ್ಲಿ 4BHK ಮನೆ ಖರೀದಿಸಿದ ನಟಿ
ಇತ್ತೀಚೆಗಷ್ಟೇ ನಯನತಾರಾ(Nayantara) ಸಂಭಾವನೆ ಕುರಿತು ಸುದ್ದಿಯಾಗಿತ್ತು. ಈಗ ನಟಿ(Actress) ಚೆನ್ನೈನ(Chennai) ದುಬಾರಿ ಏರಿಯಾದಲ್ಲಿ ಮನೆ ಖರೀದಿಸಿದ್ದಾರೆ. ಈ ಮೂಲಕ ತಾವು ಚೆನ್ನೈನಲ್ಲಿ ಸೆಟಲ್ ಆಗೋ ಹಿಂಟ್ ಕೊಟ್ಟಿದ್ದಾರೆ ನಟಿ.
ನಯನತಾರಾ ಇತ್ತೀಚೆಗೆ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ನಾಲ್ಕು ಬೆಡ್‌ರೂಂ ಮನೆಯನ್ನು ಖರೀದಿಸಿದ್ದಾರೆ. ನಟಿ ಶೀಘ್ರದಲ್ಲೇ ತನ್ನ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಅವರೊಂದಿಗೆ ಹೊಸ ಮನೆಗೆ ಹೋಗಲಿದ್ದಾರೆ.
ಪೋಯಸ್ ಗಾರ್ಡನ್ ಚೆನ್ನೈನ ಐಷಾರಾಮಿ ಸ್ಥಳಗಳಲ್ಲಿ ಒಂದಾಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಮತ್ತು ನಟ ಸೂಪರ್‌ಸ್ಟಾರ್ ರಜನಿಕಾಂತ್ ಪೋಯಸ್ ಗಾರ್ಡನ್‌ನಲ್ಲಿ ತಮ್ಮ ನಿವಾಸಗಳನ್ನು ಹೊಂದಿದ್ದಾರೆ.
ಪೋಯಸ್ ಗಾರ್ಡನ್‌ನಲ್ಲಿರುವ ರಜನಿಕಾಂತ್ ಅವರ ಮನೆಯ ಪಕ್ಕದಲ್ಲಿ ಧನುಷ್ ಕೂಡ ತಮ್ಮ ಕನಸಿನ ಮನೆಯನ್ನು ನಿರ್ಮಿಸುತ್ತಿದ್ದಾರೆ.
ನಯನತಾರಾ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ನಯನತಾರಾ ಇತ್ತೀಚೆಗೆ 37 ನೇ ಬರ್ತ್‌ಡೇ ಆಚರಿಸಿಕೊಂಡಿದ್ದರು. ಕಾತುವಾಕುಲ ರಂಡ್ ಕಾದಲ್ ಸೆಟ್‌ನಲ್ಲಿ ತನ್ನ ಗೆಳೆಯ ವಿಘ್ನೇಶ್ ಶಿವನ್ ಅವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ವರದಿಗಳ ಪ್ರಕಾರ ನಯನತಾರಾ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ಹೊಸ ಮನೆಯನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಅವರು ಅದೇ ಪ್ರದೇಶದಲ್ಲಿ ಇನ್ನೂ ಒಂದು ಮನೆಯನ್ನು ಖರೀದಿಸಲು ಯೋಜಿಸಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಮಾಡಿಲ್ಲ.
2022 ರಲ್ಲಿ ನಯನತಾರಾ - ವಿಘ್ನೇಶ್ ಶಿವನ್ ಮದುವೆ ?
ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ವರ್ಷದ ಆರಂಭದಲ್ಲಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಿಂಪಲ್ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಟಿ ಇತ್ತೀಚಿನ ಸಂದರ್ಶನವೊಂದರಲ್ಲಿ ಇದನ್ನು ಖಚಿತಪಡಿಸಿದ್ದಾರೆ. ಅವರು ಮದುವೆಯಾದಾಗ ತಮ್ಮ ಅಭಿಮಾನಿಗಳಿಗೆ ತಿಳಿಸುವುದಾಗಿ ಹೇಳಿದ್ದಾರೆ.
ನಟಿ ತನ್ನ ಪ್ರಸ್ತುತ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿದ ನಂತರ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಲಿದ್ದಾರೆ. ಕೆಲಸದ ವಿಚಾರವಾಗಿ ವಿಘ್ನೇಶ್ ಶಿವನ್ ನಿರ್ದೇಶನದ ಕಾತುವಾಕುಲ ರಂಡ್ ಕಾದಲ್‌ನಲ್ಲಿ ನಯನತಾರಾ ಮುಂದೆ ಕಾಣಿಸಿಕೊಳ್ಳಲಿದ್ದಾರೆ.