ಪಬ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸಿದ್ ಶ್ರೀರಾಮ್‌ಗೆ ಅವಮಾನ. ಪೊಲೀಸರಿಂದ ಕಠಿಣ ತನಿಖೆ... 

ದಕ್ಷಿಣ ಭಾರತದ ಖ್ಯಾತ ಗಾಯ ಸಿದ್ ಶ್ರೀರಾಮ್ ಅವರನ್ನು ಹೈದರಾಬಾದ್‌ನ ಜೂಬ್ಲಿ ಹಿಲ್ಸ್ ರಸ್ತೆಯಲ್ಲಿರುವ ಪಬ್‌ವೊಂದರದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಆಹ್ವಾನಿಸಲಾಗಿತ್ತು. ಒಂದು ಟಿಕೆಟ್‌ಗೆ 1500 ರೂ. ಬೆಲೆ ನೀಡಿ ಸುಮಾರು 500 ಟಿಕೆಟ್ ಮಾರಾಟ ಮಾಡಲಾಗಿತ್ತು. ಆದರೆ ಟಿಕೆಟ್ ಖರೀದಿ ಮಾಡದೇ, ನಿಗದಿಗಿಂತಲೂ ದುಪ್ಪಟ್ಟು ಮಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು ಎನ್ನಲಾಗಿದೆ.

ಮಹಾ ಶಿವರಾತ್ರಿ ಆಚರಿಸಿದ ತೈಮೂರ್ ಅಲಿ ಖಾನ್: ಪುಟ್ಟ ಶಿವನ ಲುಕ್ ನೋಡಿ 

ತಮ್ಮ ವಿಭಿನ್ನ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿರುವ ಸಿದ್ ಹಾಡುತ್ತಿದ್ದಂತೆ, ಕಾರ್ಯಕ್ರಮಕ್ಕೆ ಆಗಮಿಸಿದ ಕೆಲವು ಪುಂಡರು ತೀವ್ರ ಅವಮಾನ ಮಾಡಿದ್ದಾರೆ. ಬಾಟಲಿಯಿಂದ ನೀರು ಹಾಗೂ ಸೇವಿಸುತ್ತಿದ್ದ ಮದ್ಯವೆಸೆದು ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ ಎನ್ನಲಾಗಿದೆ. 'ನನ್ನಂಥ ಗಾಯಕನಿಗೆ ಹೀಗೆಲ್ಲಾ ಅವಮಾನ ಮಾಡಬಾರದು,' ಎಂದು ಸಿದ್ ವೇದಿಕೆ ಮೇಲೆ ನಿಂತು ಕೇಳಿ ಕೊಂಡರೂ ಸುಮ್ಮನಿರದೆ ಬಾಟಲ್ ಎಸೆದು ರಂಪಾಟ ಮಾಡಿದ್ದಾರೆ. 

ವೇದಿಕೆ ಮೇಲೆ ಪುಂಡರ ಕಾಟ ಹೆಚ್ಚಾಗುತ್ತಿದ್ದಂತೆ, ಸಿದ್ ಸ್ಥಳದಿಂದ ಹೊರ ಹೋಗಿದ್ದಾರೆ. ಆಯೋಜಕರು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಪೊಲೀಸರು ಬಂದ ಕೂಡಲೇ ಪುಂಡರು ಪರಾರಿ ಅಗಿದ್ದಾರೆ. ಗಾಯಕರಿಗೆ ಈ ರೀತಿ ಎಂದು ಅವಮಾನ ಆಗಬಾರದು ಎಂದು ಇಂಥ ದುಷ್ಕರ್ಮಿಗಳಿಗೆ ಶಿಕ್ಷೆ ನೀಡಬೇಕು ಎಂದು ಅನೇಕ ಗಾಯಕರು ಸಿದ್ ಪರ ಧ್ವನಿ ಎತ್ತಿದ್ದಾರೆ.

ಐಶ್ವರ್ಯಾರನ್ನು ಟ್ರೋಲ್ ಮಾಡಿ, ಹೊಸ ಫೋನ್ ಖರೀದಿಸಲು ಫ್ಯಾನ್ಸ್ ಸಲಹೆ‌!

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ತೆರೆ ಕಂಡ ಗೀತಾ ಗೋವಿಂದಂ ಚಿತ್ರಕ್ಕೆ 'ಇಂಕೇಮ್ ಇಂಕೇಮ್ ಕಾವಾಲೆ' ಚಿತ್ರಕ್ಕೆ ಈ ಸಿದ್ ಹಾಡಿದ್ದಾರೆ. '96' ಹಾಗೂ 'ಕಡಲ್' ಚಿತ್ರಕ್ಕೂ ತಮ್ಮ ಅಮೋಘ ಕಂಠದಿಂದ ಹಾಡಿರುವುದು ಇವರ ವಿಶೇಷ. ಇತ್ತೀಚಿಗೆ ಅವರ ಯೂಟ್ಯೂಬ್‌ನಲ್ಲಿ ಹಾಡಿದ ನಟರಂಗ ಚಿತ್ರದ ಅಪ್ಸರಾ ಆಲಿ ಹಾಡು ಸಖತ್ ವೈರಲ್‌ ಆಗಿದೆ.