South Actresses ನಿಜವಾದ ಹೆಸ್ರು ಕೇಳಿದ್ರೆ ಶಾಕ್ ಆಗ್ತೀರಿ!
ಹೆಸರು ಬದಲಾವಣೆ ಸಿನಿ ಕ್ಷೇತ್ರಕ್ಕೆ ಹೊಸತಲ್ಲ. ಕೆಲವೊಬ್ಬ ನಟಿಯರು ಹೆಸರು ಬದಲಾಯಿಸಿಕೊಂಡು ಯಶಸ್ಸಿನ ಉತ್ತುಂಗ ಏರಿದ್ದಾರೆ. ಅವರು ಯಾರ್ಯಾರು?
ಹುಟ್ಟಿದಾಗ ಇಟ್ಟ ಹೆಸರನ್ನು ಬದಲಾವಣೆ ಮಾಡಿಕೊಳ್ಳುವ ಟ್ರೆಂಡ್ (trend) ಇತ್ತೀಚಿಗೆ ತುಂಬಾ ಹೆಚ್ಚಾಗಿದೆ. ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಹೆಸರಿನ ಬದಲಾವಣೆ ನಡೆಯುತ್ತಲೇ ಇರುತ್ತದೆ. ಇಂಗ್ಲಿಷ್ ಸ್ಪೆಲ್ಲಿಂಗ್ನಲ್ಲಿ ಒಂದು ಅಕ್ಷರವನ್ನು ಹೆಚ್ಚಿಗೆ ಹಾಕುವುದು, ಒಂದು ಅಕ್ಷರ ತೆಗೆಯುವುದು ಇವೆಲ್ಲವೂ ಮಾಮೂಲೇ. ಆದರೆ ಹೆಸರನ್ನೇ ಬದಲಿಸಿಕೊಳ್ಳುವವರೂ ಇದ್ದಾರೆ. ಇದು ದೊಡ್ಡದೊಡ್ಡ ಉದ್ಯಮಿಗಳು, ರಾಜಕಾರಣಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈ ಟ್ರೆಂಡ್ (trend) ಹೆಚ್ಚಿರುವುದು ಸಿನಿಮಾ ಕ್ಷೇತ್ರದಲ್ಲಿ ಎನ್ನುವುದು ಹೊಸ ವಿಷಯವೇನಲ್ಲ. ನಟ ನಟಿಯರು ಹೆಸರನ್ನು ಬದಲಾಯಿಸಿಕೊಳ್ಳುವುದು ಮಾಮೂಲು. ಕೆಲವೊಮ್ಮೆ ಚಿತ್ರವೊಂದು ಯಶಸ್ವಿಯಾದರೆ ಅದರಲ್ಲಿ ಅವರಿಗೆ ಇರುವ ಹೆಸರೇ ಕಾಯಂ (Permanent) ಆಗಿ ನಂತರ ಹೆಸರು ಬದಲಾಯಿಸಿಕೊಂಡರೆ, ಇನ್ನು ಕೆಲವೊಮ್ಮೆ ಜನ್ಮಜಾತ ಹೆಸರು ಕ್ಲಿಕ್ (click)ಆಗಿಲ್ಲವೆಂದರೆ ಹೆಸರು ಬದಲಾಯಿಸಿಕೊಳ್ಳುವವರೂ ಇದ್ದಾರೆ. ಕುತೂಹಲದ ಸಂಗತಿಯೆಂದರೆ ಹೆಸರು ಬದಲಾಯಿಸಿಕೊಂಡ ನಂತರ ಕಾಕತಾಳಿಯವೋ ಎನ್ನುವಂತೆ ಯಶಸ್ಸಿನ ಹಾದಿಯನ್ನೂ ಹಿಡಿದಿವರೂ ಇದ್ದಾರೆ. ಇದು ಹೆಚ್ಚಾಗಿ ನಟರಿಗಿಂತಲೂ ನಟಿಯರಲ್ಲಿಯೇ (Actresses) ಕಾಣಸಿಗುತ್ತದೆ. ಇಲ್ಲಿ ಅಂಥ ಕೆಲವು ನಟಿಯರ ಬಗ್ಗೆ ವಿವರಣೆ ನೀಡಲಾಗಿದೆ.
ಅನುಷ್ಕಾ ಶೆಟ್ಟಿ (Anushka Shetty)
ತಮಿಳು ಮತ್ತು ತೆಲುಗು ಚಿತ್ರರಂಗದ ಯಶಸ್ವಿ ತಾರೆಯಾಗಿರುವ ಮುದ್ದುಮೊಗದ ಸುಂದರಿ ಅನುಷ್ಕಾ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ? ಬಾಹುಬಲಿ 2 ಇವರಿಗೆ ಬ್ರೇಕ್ ಕೊಟ್ಟ ಚಿತ್ರ. ಇದಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಬಾಹುಬಲಿ 2 ನಂತರ ಇವರ ದೇವಸೇನಾ ಪಾತ್ರಕ್ಕೆ ಮನಸೋಲದವರೇ ಇಲ್ಲ. ಅಂದಹಾಗೆ ಇವರ ನಿಜವಾದ ಹೆಸರು ಅನುಷ್ಕಾ ಅಲ್ಲ, ಬದಲಿಗೆ ಸ್ವೀಟಿ ಶೆಟ್ಟಿ. ಸ್ವೀಟಿ (Sweety Shetty) ಎನ್ನುವುದು ತೀರಾ ಬಾಲಿಶ ಎನ್ನಿಸುತ್ತದೆ ಎನ್ನುವ ಕಾರಣಕ್ಕೆ ಅನುಷ್ಕಾ ಎಂದು ಬದಲಾಯಿಸಿಕೊಂಡರು. ಆ ನಂತರ ಅವರ ಅದೃಷ್ಟ ಖುಲಾಯಿಸಿದೆ.
ಮದ್ವೆಯಾಗಿ ಏಕಾಏಕಿ ಶಾಕ್ ಕೊಟ್ಟ ನಟಿ Swara Bhasker- ಯಾರೀ 'ನಿಗೂಢ' ಗಂಡ?
ನಯನತಾರಾ (Nayanatara)
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ನಯನತಾರಾ. ಟಾಲಿವುಡ್ ಮತ್ತು ಮಾಲಿವುಡ್ನಲ್ಲಿ ಹೆಸರು ಮಾಡಿರುವ ಇವರು ಚಲನಚಿತ್ರ ನಿರ್ಮಾಪಕರೂ ಆಗಿದ್ದಾರೆ. ಜೊತೆಗೆ ಪತಿ ವಿಘ್ನೇಶ್ ಶಿವನ್ ಅವರ ಜೊತೆಗೆ ಪ್ರೊಡಕ್ಷನ್ ಹೌಸ್ ಅನ್ನೂ ನೋಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಇವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್ (Diana Mariam Kurian)
ಟಬು (Tabu)
ಇನ್ನು ಎವರ್ಗ್ರೀನ್ ತಾರೆ ಟಬು. ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಖ್ಯಾತಿ ಗಳಿಸಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಟಬು ಅವರ ನಿಜವಾದ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ (tabassum Fatima hashmi). ಆದರೆ ತಮ್ಮ ನೈಜ ಹೆಸರನ್ನು ಮರೆಮಾಚಿರುವ ಅವರು ಟಬು ಎಂದು ಬದಲಾಯಿಸಿಕೊಂಡಿದ್ದಾರೆ. ಆನಂತರ ಅವರಿಗೆ ಯಶಸ್ಸು ಬೆನ್ನಹತ್ತಿದೆ. ಮಹಿಳೆಯರಿಗೆ ಸಂಬಂಧಿಸಿದ ಸ್ಟೀರಿಯೊಟೈಪ್‌ಗಳನ್ನು (Stereotype) ಬ್ರೇಕ್ ಮಾಡಿದ ತಬಸ್ಸುಮ್ ಫಾತಿಮಾ ಹಶ್ಮಿಯ ಅಭಿಮಾನಿಗಳ ಸಂಖ್ಯೆ ಇಂದಿಗೂ ಏರುತ್ತಲೇ ಇದೆ.
ಅಪ್ಪ-ಮಗ ಇಬ್ರನ್ನೂ ತಬ್ಬಿ ರೊಮಾನ್ಸ್ ಮಾಡಿರೋ ಬಾಲಿವುಡ್ ಬೆಡಗಿಯರಿವರು
ಭೂಮಿಕಾ ಚಾವ್ಲಾ (Boomika Chawla)
ತೇರೆ ನಾಮ್ ಬಾಲಿವುಡ್ ಚಿತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟಿ ಭೂಮಿಕಾ ಚಾವ್ಲಾ ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿಯೂ ಸಕತ್ ಫೇಮಸ್. ಇವರ ನಿಜವಾದ ಹೆಸರು ರಚನಾ ಚಾವ್ಲಾ. ಭೂಮಿಕಾ ಎಂದು ಹೆಸರು ಬದಲಾಯಿಸಿದ ಮೇಲೆ ಇವರ ಅದೃಷ್ಟ ಖುಲಾಯಿಸಿದೆ.
ತಮನ್ನಾ ಭಾಟಿಯಾ (Tamannaah Bhatia)
ಇನ್ನು ತಮನ್ನಾ ಭಾಟಿಯಾ. ಇವರು ತಮ್ಮ ಹೆಸರನ್ನು ಬದಲಾಯಿಸದಿದ್ದರೂ ಸಂಖ್ಯಾಶಾಸ್ತ್ರವನ್ನು ಅನುಸರಿಸಿ ತಮ್ಮ ಹೆಸರಿನ ಸ್ಪೆಲ್ಲಿಂಗ್ ಬದಲಾಯಿಸಿ ಯಶಸ್ಸಿನ ಉತ್ತುಂಗ ಏರಿದ್ದಾರೆ. ತಮ್ಮ ಹೆಸರಿಗೆ ಒಂದು ಎ ಮತ್ತು ಎಚ್ ಸೇರಿಸಿಕೊಂಡಿದ್ದಾರೆ. ಈ ಮೊದಲು Tamanna ಆಗಿದ್ದರು. ಈಗ Tamannaah Bhatia ಆಗಿದ್ದಾರೆ.