Asianet Suvarna News Asianet Suvarna News

ಮನ್ಸೂರ್ ಥರದವರು ಮನುಕುಲಕ್ಕೇ ಕೆಟ್ಟ ಹೆಸರು : ನಟಿ ತ್ರಿಶಾ ಕೆಂಡಾಮಂಡಲ

ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮತ್ತು ಕೆಟ್ಟದಾಗಿ ಮಾತನಾಡಿರುವ ವೀಡಿಯೊವನ್ನು ನಾನು ನೋಡಿದ್ದೇನೆ. ನಾನು ಎಂದಿಗೂ ಆ ನೀಚ ವ್ಯಕ್ತಿಯೊಂದಿಗೆ ತೆರೆ ಹಂಚಿಕೊಳ್ಳುವುದಿಲ್ಲ. ಅವರಂಥವರು ಮನುಕುಲಕ್ಕೇ ಕೆಟ್ಟ ಹೆಸರು' ಎಂದು ರೋಷದ ನುಡಿಗಳನ್ನು ಸ್ಟಾರ್‌ ನಟಿ ತ್ರಿಶಾ ಆಡಿದ್ದಾರೆ.

South indian actress trisha reacts over Mansoors valgar statement bni
Author
First Published Nov 20, 2023, 11:13 AM IST

ತ್ರಿಶಾ ಜೊತೆಗೆ ಅತ್ಯಾಚಾರದ ಸೀನ್ ಸಿಗಲಿಲ್ಲ ಎಂದು ಕೆಟ್ಟದಾಗಿ ಮಾತನಾಡಿದ ಖಳನಟ ಮನ್ಸೂರ್ ಆಲಿಖಾನ್ ಬಗ್ಗೆ ಸ್ಟಾರ್ ನಟಿ ತ್ರಿಶಾ ಕಿಡಿ ಕಾರಿದ್ದಾರೆ. ಇನ್ನು ಮೇಲೆ ಆತನ ಜೊತೆ ನಟಿಸಲ್ಲ ಎಂದಿದ್ದಾರೆ. ಇದಕ್ಕೆ ಕಾರಣ ಮನ್ಸೂರ್ ಆಲಿಖಾನ್ ತ್ರಿಶಾ ಬಗ್ಗೆ ನೀಡಿರುವ ಕೀಳು ದರ್ಜೆಯ ಹೇಳಿಕೆ. 'ಲಿಯೋ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿದಾಗ ತ್ರಿಷಾ ಜೊತೆ ಅತ್ಯಾಚಾರದ ದೃಶ್ಯ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ತ್ರಿಷಾಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಬರುವ ದೃಶ್ಯವೊಂದು ಬರಬಹುದೆಂದು ಊಹಿಸಿದ್ದೆ. ಆಕೆಯ ಜತೆಗೆ ಬೆಡ್‌ರೂಮ್‌ ದೃಶ್ಯಗಳಲ್ಲಿ ನಟಿಸುವೆ ಎಂದುಕೊಂಡಿದ್ದೆ. ಆದರೆ ನಿರ್ದೇಶಕ ಲೋಕೇಶ್ ಕನಕರಾಜ್, ಕನಿಷ್ಠ ಪಕ್ಷ ತ್ರಿಷಾ ಅವರನ್ನೂ ತೋರಿಸಲಿಲ್ಲ. ನಾನು ಈಗಾಗಲೇ ಸಾಕಷ್ಟು ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಆದರೆ, ತ್ರಿಷಾ ಜತೆಗೆ ಇದು ನನಗೆ ಹೊಸದು ಎಂದು ನಾನು ಭಾವಿಸಿದ್ದೆ' ಎಂದು ನಟ ಮನ್ಸೂರ್‌ ಅಲಿಖಾನ್‌ ಹೇಳಿಕೆ ನೀಡಿದ್ದರು. ಇದಕ್ಕೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗಿತ್ತು.

ಇದೀಗ ನಟಿ ತ್ರಿಶಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನುಮೇಲೆ ಆತನ ಜೊತೆ ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಖಂಡಾತುಂಡವಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ನಟಿ ತ್ರಿಶಾ ಅವರು ದಳಪತಿ ವಿಜಯ್‌ ಅವರ ಲಿಯೋ (Leo) ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಒಳ್ಳೆಯ ವಿಮರ್ಶೆ ಜತೆಗೆ ಕಲೆಕ್ಷನ್‌ ವಿಚಾರದಲ್ಲೂ ಸದ್ದು ಮಾಡಿತ್ತು. ಇದೀಗ ಇದೇ ಚಿತ್ರದಲ್ಲಿ ನಟಿಸಿದ್ದ ಮತ್ತೋರ್ವ ನಟ ಮನ್ಸೂರ್‌ ಅಲಿಖಾನ್‌, ತ್ರಿಷಾ ಕೃಷ್ಣನ್‌ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ತುಚ್ಯವಾಗಿ ನಟಿಯ ಬಗ್ಗೆ ಮಾತನಾಡಿ, ಹೀನಾಯ ಟೀಕೆಗೆ ಗುರಿಯಾಗಿದ್ದಾರೆ. ಸಿನಿಮಾಗಳಲ್ಲಿ ಖಳನಟನಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ ಮನ್ಸೂರ್‌ ಅಲಿಖಾನ್‌. ಲಿಯೋ ಸಿನಿಮಾದಲ್ಲೂ ಖಳನ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಖಳನ ಪಾತ್ರದಲ್ಲಿ ನಟಿಸುತ್ತಿದ್ದಾಗ ನಾಯಕಿಯರ ಜತೆಗೆ ಅತ್ಯಾಚಾರ ದೃಶ್ಯಗಳಲ್ಲೂ ಇವರು ಹೆಚ್ಚು ನಟಿಸಿದ್ದಾರೆ. ಇದೀಗ ಆ ಬಯಕೆ ಲಿಯೋ ಸಿನಿಮಾದಲ್ಲಿ ಸಿಗಲಿಲ್ಲ ಎಂದಿದ್ದಾರೆ. ತ್ರಿಷಾ ಅವರನ್ನೇ ಗುರಿಯಾಗಿಸಿಕೊಂಡು ಮನ್ಸೂರ್‌ ಅಲಿಖಾನ್‌ ಆಡಿದ ಮಾತಿಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ.

ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ, ಎತ್ತಿಕೊಂಡು ಹೋಗ್ಬೋದು ಅಂದುಕೊಂಡಿದ್ದೆ ಎಂದ ಸಹನಟ!

ಮನ್ಸೂರ್‌ ಆಲಿಖಾನ್‌ ಮಾತುಗಳು ವೈರಲ್‌ ಆಗುತ್ತಿದ್ದಂತೆ, ಇದು ತ್ರಿಷಾ ಗಮನಕ್ಕೂ ಬಂದಿದೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಮನ್ಸೂರ್ ಬಗ್ಗೆ ಕೆಂಡಾಮಂಡಲವಾಗಿ ಬರೆದುಕೊಂಡಿದ್ದಾರೆ. 'ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮತ್ತು ಕೆಟ್ಟದಾಗಿ ಮಾತನಾಡಿರುವ ವೀಡಿಯೊವನ್ನು ನಾನು ನೋಡಿದ್ದೇನೆ. ಆ ಮಾತುಗಳನ್ನು ನಾನು ಖಂಡಿಸುತ್ತೇನೆ. ಇದು ಕೆಟ್ಟತನದ ಪರಮಾವಧಿ, ಅಗೌರವ, ಸ್ತ್ರೀದ್ವೇಷ ಮತ್ತು ಅಷ್ಟೇ ಅಸಹ್ಯಕರ. ಇನ್ಮೇಲೆ ನಾನು ಎಂದಿಗೂ ಆ ನೀಚ ವ್ಯಕ್ತಿಯೊಂದಿಗೆ ತೆರೆ ಹಂಚಿಕೊಳ್ಳುವುದಿಲ್ಲ. ಅವರಂಥವರು ಮನುಕುಲಕ್ಕೇ ಕೆಟ್ಟ ಹೆಸರು' ಎಂದು ರೋಷದ ನುಡಿಗಳನ್ನು ಆಡಿದ್ದಾರೆ. ಸಾಕಷ್ಟು ಮಂದಿ ತ್ರಿಶಾ ಬೆಂಬಲಕ್ಕೆ ನಿಂತಿದ್ದಾರೆ.

ಇತ್ತ ತನ್ನ ಮಾತು ವೈರಲ್ ಆಗುತ್ತಿದ್ದಂತೇ ಮನ್ಸೂರ್ ಇದೆಲ್ಲ ಎಡಿಟ್ ಮಾಡಿರೋದು, ತಾನು ಹಾಗೆ ಮಾತನಾಡಿರಲೇ ಇಲ್ಲ ಅಂದಿದ್ದಾರೆ. 'ನಾನು ನನ್ನ ಮಹಿಳಾ ಸಹ ಕಲಾವಿದರನ್ನು ಗೌರವಿಸುತ್ತೇನೆ. ತ್ರಿಶಾ ಅವರು ನೋಡಿದ್ದು ಎಡಿಟ್ ಮಾಡಿದ ವಿಡಿಯೋ. ಯಾರಾದರೂ ಅನುಚಿತವಾಗಿ ವರ್ತಿಸಿದರೆ, ನಾನು ಹೆದರುವವನಲ್ಲ. ನಾನು ಅಂತಹ ಕೆಲಸವನ್ನು ಮಾಡುವವನಲ್ಲ. ಅಷ್ಟೇ ಏಕೆ, ನನ್ನ ಮಗಳು ಕೂಡ ತ್ರಿಷಾ ಅವರ ದೊಡ್ಡ ಅಭಿಮಾನಿ. ಇಂಥಾ ಕೆಟ್ಟ ಮಾತು ನಾನು ಆಡೋದಿಲ್ಲ' ಎಂದಿದ್ದಾರೆ.

ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸಂಬಂಧ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?

Follow Us:
Download App:
  • android
  • ios