Asianet Suvarna News Asianet Suvarna News

ನಮ್ಮನ್ನು ಬ್ರಿಟಿಷರು ಒಡೆದು ಆಳಿದ್ದು ಹೀಗೆ: ಉತ್ತರ ದಕ್ಷಿಣ ತಾರತಮ್ಯದ ಬಗ್ಗೆ ಕಿಲಾಡಿ ಮಾತು

  • ಉತ್ತರ ದಕ್ಷಿಣ ತಾರತಮ್ಯದ ಬಗ್ಗೆ ಅಕ್ಷಯ್‌ಕುಮಾರ್ ಬೇಸರ
  • ಪೃಥ್ವಿರಾಜ್‌ ಸಿನಿಮಾದ ಪ್ರಚಾರದಲ್ಲಿರುವ ಕಿಲಾಡಿ
  • ಉತ್ತರ ದಕ್ಷಿಣ ತಾರತಮ್ಯ ಬೇಡ ಎಂದ ಅಕ್ಷಯ್
Actor Akshay Kumar on North South cinema and national language debate akb
Author
Bombay, First Published May 23, 2022, 12:51 PM IST

ಸಿನಿಮಾವನ್ನು, ಸಿನಿಮಾ ಉದ್ಯಮವನ್ನು ಉತ್ತರ ಭಾರತದ್ದು ದಕ್ಷಿಣ ಭಾರತದ್ದು ಎಂದು ಪ್ರತ್ಯೇಕವಾಗಿ ನೋಡುವುದನ್ನು ನಾನು ಇಷ್ಟಪಡುವುದಿಲ್ಲ. ನಮ್ಮನ್ನು ಬ್ರಿಟಿಷರು ಒಡೆದು ಆಳಿದರು. ಆದರೆ ನಾವು ಅದರಿಂದ ಇನ್ನೂ ಪಾಠ ಕಲಿತಿಲ್ಲ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ. ಅವರು ತಮ್ಮ ಮುಂದಿನ ಸಿನಿಮಾ ಪೃಥ್ವಿರಾಜ್‌ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಯ ಹಂತದಲ್ಲಿದ್ದು ಇದರ ಪ್ರಚಾರದಲ್ಲಿರುವ ಅಕ್ಷಯ್‌ಕುಮಾರ್ ಈ ಮಾತು ಹೇಳಿದ್ದಾರೆ. ಪೃಥ್ವಿರಾಜ್ ಸಿನಿಮಾದಲ್ಲಿ 2017 ರ ವಿಶ್ವ ಸುಂದರಿ ಮನುಷಿ ಚಿಲ್ಲರ್ (Manushi Chillar), ಸೋನು ಸೂದ್ (Sonu Sood) ಸಂಜಯ್‌ ದತ್ (Sanjay Dutt) ಕೂಡ ತಾರಾಗಣದಲ್ಲಿದ್ದಾರೆ. 


ಅಕ್ಷಯ್‌ ಕುಮಾರ್ ಅವರ ಈ ಸಿನಿಮಾವೂ ಹಿಂದಿಯಲ್ಲಿ ಜೂನ್‌ 3 ರಂದು ಬಿಡುಗಡೆಗೊಳ್ಳಲಿದೆ. ಈ ಸಿನಿಮಾವನ್ನು ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸುತ್ತಿದ್ದು, ಸಾಮ್ರಾಟ ಮಹಾರಾಜ ಪೃಥ್ವಿರಾಜ್ ಚೌಹಾಣ್‌ (Indian warrior king Prithviraj Chauhan) ಕತೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಇದರಲ್ಲಿ ಅಕ್ಷಯ್ ಪೃಥ್ವಿರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

Akshay Kumar About Wife: ಹೆಂಡತಿ, ಅತ್ತೆಯ ಒತ್ತಡ, ಇಷ್ಟವಿಲ್ಲದ ಕೆಲಸ ಮಾಡ್ತಾರಂತೆ ಅಕ್ಷಯ್ ಕುಮಾರ್

ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ದೇಶದಲ್ಲಿ ಪ್ರಸ್ತುತ ವಿವಾದದಲ್ಲಿರುವ ಭಾಷಾ ವಿಂಗಡಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್‌ , ಈ ವಿಂಗಡಣೆಯ ಮೇಲೆ ನನಗೆ ನಂಬಿಕೆ ಇಲ್ಲ. ದಕ್ಷಿಣ ಭಾರತ ಸಿನಿಮಾ ಉದ್ಯಮ, ಉತ್ತರ ಭಾರತ ಸಿನಿಮಾ ಉದ್ಯಮ ಎಂದು ಕರೆಯುವುದನ್ನು ನಾನು ದ್ವೇಷಿಸುತ್ತೇನೆ. ನಾವೆಲ್ಲರೂ ಒಂದೇ ಸಾಮಾನ್ಯ ಸಿನಿಮೋದ್ಯಮದ ಕೆಳಗೆ ಇದ್ದೇವೆ. ನಾವು ಈ ಪ್ರಶ್ನೆಯನ್ನು ಕೇಳುವುದನ್ನು ನಿಲ್ಲಿಸಬೇಕು. ಬ್ರಿಟಿಷರು ನಮ್ಮನ್ನು ಹೇಗೆ ಒಡೆದು ಆಳಿದರು ಎಂಬುದನ್ನು ನಾವು ಇದರಿಂದ ತಿಳಿದುಕೊಳ್ಳಬೇಕು. ಅವರು ನಮ್ಮನ್ನು ಮೊದಲಿಗೆ ವಿಭಾಜಿಸಿ ನಂತರ ಆಳಿದರು. ಆದಾಗ್ಯೂ ನಾವು ಅದರಿಂದ ಪಾಠ ಕಲಿತ್ತಿಲ್ಲ. ಅದನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಾವು ಎಲ್ಲರೂ ಒಂದೇ ಇಂಡಸ್ಟ್ರಿಗೆ ಸೇರಿದವರು ಎಂದು ತಿಳಿಯುವುದು ಅಲ್ಲದೇ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುವುದು ಎಂದು ಅಕ್ಷಯ್ ಕುಮಾರ್ ಹೇಳಿದರು. ಈ ಫ್ಯಾನ್ ಇಂಡಿಯಾ ಎಂಬ ಪದದ ಅರ್ಥ ನನಗೆ ಆಗುತ್ತಿಲ್ಲ ಎಂದ ಅಕ್ಷಯ್‌ಕುಮಾರ್ ಎಲ್ಲಾ ಸಿನಿಮಾವೂ ಕೆಲಸಕ್ಕೆ ಸಂಬಂಧಿಸಿದ್ದಾಗಿದೆ ಎಂದರು. 

Akshay Kumar In Samanthas House: ಮಧ್ಯರಾತ್ರಿ ಸಮಂತಾ ಮನೆಗೆ ಬಂದ ಅಕ್ಷಯ್ ಕುಮಾರ್ !
 

ಹಲವು ಹಿಂದಿಯೇತರ ಸಿನಿಮಾಗಳು ಭಾರತದಾದ್ಯಂತ ಈ ವರ್ಷ ಉತ್ತಮವಾಗಿ ಪ್ರದರ್ಶನ ಕಂಡಿವೆ. ಕೆಜಿಎಫ್‌ ಚಾಪ್ಟರ್2 (KGF Chapter 2) , ಆರ್‌ಆರ್‌ಆರ್ (RRR) ಹಾಗೂ ಪುಷ್ಪ ದಿ ರೈಸ್ (Pushpa The Rise) ಎಲ್ಲವೂ ಭಾರತದಾದ್ಯಂತ ಉತ್ತಮ ಯಶಸ್ಸು ಕಂಡ ಸಿನಿಮಾಗಳಾಗಿವೆ.  ಹಲವು ಕಲಾವಿದರು ಹಿಂದಿ ಭಾಷೆಯ ರಾಷ್ಟ್ರೀಯ ಭಾಷೆ ಸ್ಥಾನಮಾನದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಕನ್ನಡದ ನಟ ಕಿಚ್ಚ ಸುದೀಪ್ (Sudeep) ಅವರು ಹಿಂದಿ (Hindi)  ರಾಷ್ಟ್ರೀಯ ಭಾಷೆ (national language) ಅಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ನಟ ಅಜಯ್ ದೇವಗನ್ (Ajay Devgn) ಹಿಂದೆ ರಾಷ್ಟ್ರೀಯ ಭಾಷೆ ಎಂದಿದ್ದರು. ಹೀಗಾಗಿ ಇದು ಸಿನಿಮಾ ರಂಗದಲ್ಲಿ ಭಾಷಾ ವಿವಾದಕ್ಕೆ ಕಾರಣವಾಗಿತ್ತು.
 

Follow Us:
Download App:
  • android
  • ios