Asianet Suvarna News Asianet Suvarna News

ಬಹುಭಾಷಾ ನಟ ಅಜಿತ್ ಹುಟ್ಟುಹಬ್ಬಕ್ಕೆ ​ಮಧ್ಯರಾತ್ರಿ 'ಎಕೆ 52' ಗಿಫ್ಟ್​!

ಬಹುಭಾಷಾ ನಟ ಅಜಿತ್ ಅವರ 52ನೇ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಘೋಷಣೆಯಾಗಿದೆ. ಏನಿದರ ವಿಶೇಷತೆ? 
 

South Actor Ajith Kumar next film titled Vidaa Muyarchi makers revealed on his birthday
Author
First Published May 1, 2023, 11:54 AM IST | Last Updated May 1, 2023, 11:54 AM IST

ತಮಿಳು (Tamil) ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಖ್ಯಾತಿ ಪಡೆದಿರುವ ನಟ ಅಜಿತ್ ಕುಮಾರ್‌ ಗೆ ಇಂದು (ಮೇ 1) ಹುಟ್ಟು ಹಬ್ಬದ ಸಂಭ್ರಮ.  ದಕ್ಷಿಣ ನಟ ಅಜಿತ್ ಕುಮಾರ್ 52 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಟನೆಯಿಂದಲೇ ಎಲ್ಲರ ಮನಗೆದ್ದಿರುವ ಇವರು ಇದೀಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಲು ಸಜ್ಜಾಗಿದ್ದಾರೆ.  ಅಜಿತ್ ಅವರ ಜನ್ಮದಿನದಂದು ಅವರ ಚಿತ್ರ ಎಕೆ 62 ಶೀರ್ಷಿಕೆಯನ್ನು ನೀಡುವ ಮೂಲಕ ನಿರ್ಮಾಪಕರು ಅಜಿತ್ (Ajith Kumar) ಅವರಿಗೆ ಶುಭ ಹಾರೈಸಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಲೈಕಾ ಪ್ರೊಡಕ್ಷನ್ಸ್ ಅಜಿತ್ ಅವರ ಹೊಸ ಚಿತ್ರದ ಶೀರ್ಷಿಕೆಯನ್ನು ಘೋಷಿಸಿತು. ಚಿತ್ರದ ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರೊಡಕ್ಷನ್ ಹೌಸ್ ಚಿತ್ರದ ಹೆಸರು ವಿದಾ ಮುಯಾರ್ಚಿ ಎಂದು ಹೇಳಿದೆ. ಚಿತ್ರವನ್ನು ಮಗಿಜ್ ತಿರುಮೇನಿ ನಿರ್ದೇಶಿಸಲಿದ್ದು, ನಿರುದ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಇದೀಗ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 

1971ರ   ಮೇ1 ರಂದು ಸಿಕಂದರಾಬಾದ್‌ನಲ್ಲಿ ಜನಿಸಿರುವ ಅಜಿತ್​ ಅವರು,  ಪ್ರಸ್ತುತ ನೇಪಾಳದಲ್ಲಿ (Nepal) ಬೈಕ್ ಪ್ರಯಾಣವನ್ನು ಆನಂದಿಸುತ್ತಿದ್ದಾರೆ.  ಇದೀಗ ಇವರ ಹೊಸ ಸಿನಿಮಾಕ್ಕೆ ಕೆಲವು ದಿನಗಳಿಂದ ಶೀರ್ಷಿಕೆ ಇಡದೇ ಕೂತುಹಲ ಮೂಡಿಸಿತ್ತು. ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲು ಚಿತ್ರ ತಂಡ ಮುಂದಾಗಿದೆ. ಇವರಿಗೆ ಬೈಕ್, ಕಾರುಗಳೆಂದರೆ ಒಲವು. ಶೀಘ್ರದಲ್ಲೇ ಅವರು ತಮ್ಮ ಬೈಕ್‌ನಲ್ಲಿ ವಿಶ್ವ ಪ್ರವಾಸಕ್ಕೆ ಹೋಗಲು ಸಿದ್ಧರಾಗಿದ್ದಾರೆ. 

The Kerala Story: 32 ಸಾವಿರ ಹುಡುಗಿಯರ ನಾಪತ್ತೆ: ಬೆಚ್ಚಿ ಬೀಳಿಸಿದ ಟ್ರೇಲರ್​!

ಮೇ 1 ರಂದು ಅಜಿತ್ ಕುಮಾರ್ ಅವರ ಜನ್ಮದಿನದಂದು (Birthday) ಲೈಕಾ ಪ್ರೊಡಕ್ಷನ್ಸ್ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಅಜಿತ್ ಮತ್ತು ಮಾಗಿಜ್ ತಿರುಮೇನಿ (Magij Tirumeni) ಅವರೊಂದಿಗೆ ಮುಂಬರುವ ಚಲನಚಿತ್ರವನ್ನು ಪ್ರಕಟಿಸಿದರು. ಚಿತ್ರದ ಶೀರ್ಷಿಕೆಯಲ್ಲಿ ಅವರು, 'ಪರಿಶ್ರಮ, ಉತ್ಸಾಹ ಮತ್ತು ಕಠಿಣ ಪರಿಶ್ರಮದ ನಟನಿಗೆ ಶುಭಾಶಯಗಳು. ನಮ್ಮ ಪ್ರೀತಿಯ  ಅಜಿತ್ ಕುಮಾರ್ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಇದು ಸಂಭ್ರಮಾಚರಣೆಯ ಸಮಯ,  ಅವರೊಂದಿಗಿನ ನಮ್ಮ ಮುಂದಿನ ಚಿತ್ರದ ಶೀರ್ಷಿಕೆ #VidaaMuyarchi. ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ' ಎಂದಿದ್ದಾರೆ.
 
 ಇನ್ನು ನಟ ಅಜಿತ್​ ಕುಮಾರ್​ ಅವರ ಮುಂಬರುವ  ಮಾಗಿಜ್ ತಿರುಮೇನಿಯವರ ಚಿತ್ರ ವಿದಾ ಮುಯಾರ್ಚಿ (VidaaMuyarchi) ಕುರಿತು ಹೇಳುವುದಾದರೆ, ಇದು ಅಜಿತ್ ಅವರ ಸಂಪೂರ್ಣ ಆಕ್ಷನ್ ಪ್ಯಾಕ್ಡ್ ಎಂಟರ್‌ಟೈನರ್ (Actiona packed Entertainment) ಸಿನಿಮಾ ಎಂದು ಹೇಳಲಾಗಿದೆ. ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ತಾರಾಗಣ ಮತ್ತು ಸಿಬ್ಬಂದಿಯನ್ನು ಪ್ರಕಟಿಸಲಾಗುವುದು. ಸಂಯೋಜಕ ಅನಿರುದ್ಧ ರವಿಚಂದರ್, ಛಾಯಾಗ್ರಾಹಕ ನೀರವ್ ಶಾ ಮತ್ತು ವಿನ್ಯಾಸಕ ಗೋಪಿ ಪ್ರಸನ್ನ ತಾಂತ್ರಿಕ ತಂಡದ ಭಾಗವಾಗಿದ್ದಾರೆ.  ವರದಿಗಳನ್ನು ನಂಬುವುದಾದರೆ, ಈ ಹಿಂದೆ ಅಜಿತ್ ಅವರ 62 ನೇ ಚಿತ್ರವನ್ನು ವಿಘ್ನೇಶ್ ಶಿವನ್ (Vighnesh Shivan) ನಿರ್ದೇಶಿಸಬೇಕಿತ್ತು. ವಿಘ್ನೇಶ್ ಮತ್ತು ಲೈಕಾ ಪ್ರೊಡಕ್ಷನ್ಸ್ (Lika Production) ನಡುವಿನ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದಾಗಿ ಚಿತ್ರವು ಸ್ಥಗಿತಗೊಂಡಿತು. ಅದರ ಜೊತೆಯಲ್ಲಿ ಇನ್ನೊಂದು ವಿಟಾ ಮುಯರ್ಚ್ಚಿ' ಎಂಬ ಸಿನಿಮಾ ತಯಾರಿಕೆಯಲ್ಲಿ ನಟ ಅಜಿತ್‌ ಬ್ಯೂಸಿ ಇದ್ದಾರೆ. ಏಗನ್,ಅಸಲ್, ವೀರಂ,ಜಗಮಲ್ಲ, ಯೆನ್ನೈ ಅರಿಂದಾಲ್,ವೇದಾಲಂ ವೇದಾಲಂ,ವಿವೇಗಂ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಇವರ ಹುಟ್ಟುಹಬ್ಬಕ್ಕೆ ತಮಿಳು ಸಿನಿ ತಾರೆಯರು, ಸೇರಿದಂತೆ ಪರ ಭಾಷೆಯ ಸೆಲೆಬ್ರೆಟಿಗಳು ಹಾಗೂ ಸಾವಿರಾರು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. 

Anushka Shetty ಟ್ವಿಟರ್​ನಲ್ಲಿ ದಾಖಲೆಯ ಖುಷಿ ಹಂಚಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳಬಹುದಾ?

Latest Videos
Follow Us:
Download App:
  • android
  • ios