Asianet Suvarna News Asianet Suvarna News

ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಜನಿಕಾಂತ್ ಪುತ್ರಿ ಸೌಂದರ್ಯ?

ತಾತನಾಗುತ್ತಿರುವ ಸಂಭ್ರಮದಲ್ಲಿ ತಲೈವಾ ರಜನಿಕಾಂತ್. ರಜನಿ ಮನೆಯಲ್ಲಿ ಸಂಭ್ರಮದ ವಾತಾವರಣ.
 

Soundarya Rajinikanth pregnant with second child Superstar to become grandfather soon vcs
Author
Bangalore, First Published Jul 23, 2021, 3:22 PM IST
  • Facebook
  • Twitter
  • Whatsapp

ಸೂಪರ್ ಸ್ಟಾರ್ ತಲೈವ ರಜನಿಕಾಂತ್ ಮನೆಯಲ್ಲಿ ಸಂಭ್ರಮದ ವಾತಾವರಣ ಎದ್ದು ಕಾಣುತ್ತಿದೆ. 'ಅಣ್ಣಾತೆ' ಸಿನಿಮಾ ಚಿತ್ರೀಕರಣ ಆರಂಭಿಸಿದ ರಜನಿಕಾಂತ್ ನಾಲ್ಕನೇ ಮೊಮ್ಮಗುವಿಗೆ ತಾತನಾಗುತ್ತಿರುವ ಸಂತೋಷದಲ್ಲಿದ್ದಾರೆ ಎನ್ನಲಾಗಿದೆ. ಎಲ್ಲಿಯೂ ಬಹಿರಂಗವಾಗಿ ಈ ವಿಚಾರ ಹಂಚಿಕೊಂಡಿಲ್ಲವಾದರೂ ಕೆಲವು ಮೂಲಗಳಿಂದ ಸಿಹಿ ಸುದ್ದಿ ಕೇಳಿ ಬಂದಿದೆ. 

ಸ್ವಿಮ್ ಸೂಟ್‌ನಲ್ಲಿ ರಜನಿಕಾಂತ್ ಪುತ್ರಿ; ನೆಟ್ಟಿಗರ ಕ್ಲಾಸ್‌ಗೆ ಫೋಟೋ ಡಿಲೀಟ್!

2019ರಲ್ಲಿ ಫಾರ್ಮಾಸಿಟಿಕಲ್ ಉದ್ಯಮಿ ವಿಶಾಕನ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌಂದರ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪಾಪ್ಯುಲರ್ ಸ್ಟಾರ್ ಮತ್ತೆ ತಾತನಾಗುತ್ತಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಿರ್ಮಾಪಕಿ ಹಾಗೂ ನಿರ್ದೇಶಕಿ ಸೌಂದರ್ಯ ಈ ವಿಚಾರವನ್ನು ಹಂಚಿಕೊಂಡಿಲ್ಲ. ಶೀಘ್ರದಲ್ಲಿಯೇ ರಿವೀಲ್ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. 

Soundarya Rajinikanth pregnant with second child Superstar to become grandfather soon vcs

2010ರಲ್ಲಿ ಸೌಂದರ್ಯ ಹಾಗೂ ಉದ್ಯಮಿ ಅಶ್ವಿನ್ ರಾಮ್‌ಕುಮಾರ್ ವಿವಾಹವಾಗಿದ್ದರು, ಇಬ್ಬರಿಗೂ ಒಬ್ಬ ಮಗನಿದ್ದಾನೆ. ಕಾರಣಾಂತರಗಳಿಂದ ಇಬ್ಬರೂ ವಿಚ್ಛೇದನ ಪಡೆದು ಬೇರೆಯಾದರು. 7 ವರ್ಷದ ವೇದಾ ಕೃಷ್ಣ ತಾಯಿ ಸೌಂದರ್ಯ ಜೊತೆಗಿದ್ದಾನೆ. ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯ ಮತ್ತು ಧನುಷ್‌ಗೂ ಇಬ್ಬರು ಮಕ್ಕಳಿದ್ದಾರೆ, ಲಿಂಗಾ ಮತ್ತು ಯಾತ್ರಾ. ಇದೀಗ ನಾಲ್ಕನೇ ಮೊಮ್ಮಗುವನ್ನು ಬರ ಮಾಡಿ ಕೊಡಲು ತಲೈವಾ ಸಿದ್ಧರಾಗುತ್ತಿದ್ದಾರೆ.

Follow Us:
Download App:
  • android
  • ios