Asianet Suvarna News Asianet Suvarna News

ಚಂಡೀಗಢ ವಿವಿ ವೀಡಿಯೋ ಲೀಕ್ ಪ್ರಕರಣ: ವಿಡಿಯೋ ಶೇರ್ ಮಾಡ್ಬೇಡಿ, ಜವಾಬ್ದಾರರಾಗಿರಿ: ಜನತೆಗೆ ಸೋನು ಸೂದ್ ಮನವಿ

ಚಂಡೀಗಢ್ ವಿವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೀಕ್ ಆಗಿರುವ ಹುಡುಗಿಯರ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಅಭಿಯಾನ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ದಯವಿಟ್ಟು ಲೀಕ್ ಆಗಿರುವ ವಿಡಿಯೋಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Sonu Sood urges people not to share leaked videos from Chandigarh University sgk
Author
First Published Sep 19, 2022, 5:10 PM IST

ಚಂಡೀಗಢ  ವಿಶ್ವ ವಿದ್ಯಾಲಯದ ನಿದ್ಯಾರ್ಥಿನಿಯರ ಹಾಸ್ಟೆಲ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾತ್ತಿದೆ.  ಈ ಘಟನೆ ವಿರೋಧಿಸಿ ಚಂಡೀಗಢ ವಿಶ್ವ ವಿದ್ಯಾಲಯದ ಆವರಣದಲ್ಲಿ ಭಾರಿ ಪ್ರತಿಭಟನೆ ಕೂಡ ನಡೆಯಿತು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಸದ್ಯ ಚಂಡೀಗಢ ವಿವಿಯನ್ನು ಬಂದ್ ಮಾಡಲಾಗಿದೆ. 

ಚಂಡೀಗಢ ವಿವಿಯ ಹಾಸ್ಟೇಲ್‌ನಲ್ಲಿ ಹುಡುಗಿಯೊಬ್ಬಳು, ಬಾತ್ ರೂಮ್ ಗೆ ಹೋಗುವ ಹುಡುಗಿಯರ ಖಾಸಗಿ ವಿಡಿಯೋಗಳನ್ನು ಚಿತ್ರಿಸಿ, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದರು ಹಾಗೂ ಇತರರಿಗೆ ಹಂಚುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಅಲ್ಲದೆ ಆ ಯುವತಿ ವಿಡಿಯ ಶೇರ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ತನಿಖೆ ಆರಂಭವಾಗಿದ್ದು ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಪಂಜಾಬ್ ಸರ್ಕಾರ ಹೇಳಿದೆ. 

ಲೀಕ್ ಆಗಿರುವ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಅಭಿಯಾನ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ದಯವಿಟ್ಟು ಲೀಕ್ ಆಗಿರುವ ವಿಡಿಯೋಗಳನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಪಂಜಾಬ್ ಮೂಲದ ನಟ ಸೋನು ಸೂದ್ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ಥರ ಪರ ನಿಲ್ಲುವ ಸಮಯ ಬಂದಿದೆ ಎಂದು ಸೋನು ಸೂದ್ ಒತ್ತಿ ಹೇಳಿದರು. 

'ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಘಟನೆ ನಿಜಕ್ಕೂ ದುರದೃಷ್ಟಕರ. ನಾವು ನಮ್ಮ ಸಹೋದರಿಯರೊಂದಿಗೆ ನಿಲ್ಲುವ ಮತ್ತು ಜವಾಬ್ದಾರಿಯುತ ಸಮಾಜಕ್ಕೆ ಮಾದರಿಯಾಗುವ ಸಮಯ ಬಂದಿದೆ' ಎಂದು ಹೇಳಿದರು. ಸಂತ್ರಸ್ತರಿಗೆ ಮತ್ತಷ್ಟು ಕಿರುಕುಳ ನೀಡದಿರಲು ಸಾಮಾಜಿಕ ಮಾಧ್ಯಮ ಅಥವಾ ವಾಟ್ಸಾಪ್‌ನಲ್ಲಿ ಈ ವೀಡಿಯೊಗಳನ್ನು ಶೇರ್ ಮಾಡದಂತೆ ಜನರಿಗೆ ಹಲವಾರು ಮನವಿಗಳನ್ನು ಮಾಡಲಾಗಿದೆ. 'ಇದು ನಮಗೆ ಪರೀಕ್ಷೆಯ ಸಮಯ, ಸಂತ್ರಸ್ತರಿಗೆ ಅಲ್ಲ. ಜವಾಬ್ದಾರಿಯುತವಾಗಿರಿ' ಎಂದು ಹೇಳಿದ್ದಾರೆ. ದೇಶದ ಜನತೆ ಕೂಡ ಲೀಕ್ ಆಗಿರುವ ವಿಡಿಯೋಗಳನ್ನು ಶೇರ್ ಮಾಡದಂತೆ ನಾನರೀತಿ ಮನವಿ ಮಾಡುತ್ತಿದ್ದಾರೆ.  

ಲೇಡಿಸ್ ಹಾಸ್ಟೆಲ್‌ನ ಬಾತ್‌ರೂಮ್ ವಿಡಿಯೋ ಲೀಕ್: ಬೀದಿಗಳಿದ ವಿದ್ಯಾರ್ಥಿನಿಯರು

 ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಶಿಕ್ಷಣ ಸಚಿವ ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. 'ನಾನು ಚಂಡೀಗಢ ವಿಶ್ವವಿದ್ಯಾನಿಲಯದ ಎಲ್ಲಾ ವಿದ್ಯಾರ್ಥಿಗಳನ್ನು ಶಾಂತವಾಗಿರಲು ವಿನಂತಿಸುತ್ತೇನೆ, ಇದರಲ್ಲಿ ಭಾಗಿಯಾದವರನ್ನು ಬಿಡುವುದಿಲ್ಲ. ಇದು ಅತ್ಯಂತ ಸೂಕ್ಷ್ಮ ವಿಷಯ. ಮಾಧ್ಯಮ ಸೇರಿದಂತೆ ನಾವೆಲ್ಲರೂ ತುಂಬಾ ಜಾಗರೂಕರಾಗಿರಬೇಕು' ಎಂದು ಟ್ವೀಟ್ ಮಾಡಿದ್ದಾರೆ.


ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಪ್ರಕರಣ, ಶಿಮ್ಲಾ ಬಾಯ್‌ಫ್ರೆಂಡ್ ಅರೆಸ್ಟ್!

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಪೊಲೀಸರು ವಿಡಿಯೋ ಲೀಕ್ ಮಾಡಿದ ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ. ಆಕೆಗೆ 23 ವರ್ಷದ ಲವರ್ ಇದ್ದು ಆತನಿಗೆ ವಿಡಿಯೋಗಳನ್ನು ಕಳುಹಿಸಿದ್ದಳು ಎನ್ನಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಆತನನ್ನು ಬಂಧಿಸಿ ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇನ್ನು ತನಿಖೆ ಮುಂದುವರೆದಿದ್ದು ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವುದನ್ನು ಪತ್ತೆಹಚ್ಚುತ್ತಿದ್ದಾರೆ. 

Follow Us:
Download App:
  • android
  • ios