ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಪ್ರಕರಣ, ಶಿಮ್ಲಾ ಬಾಯ್‌ಫ್ರೆಂಡ್ ಅರೆಸ್ಟ್!
ಚಂಡಿಘಡ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಬಹಿರಂಗ ಪ್ರಕರಣ ಪಂಜಾಬ್‌ನಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಈ ವಿಡಿಯೋ ಲೀಕ್‌ನಿಂದ ಕೆಲ ವಿದ್ಯಾರ್ಥಿನಿಯರು ಬದುಕು ಅಂತ್ಯಗೊಳಿಸುವ ಯತ್ನಕ್ಕೂ ಕೈಹಾಕಿದ ಘಟನೆ ನಡೆದಿದೆ. ಇದೀಗ ಈ ವಿಡಿಯೋವನ್ನು ಬಾಯ್‌ಫ್ರೆಂಡ್ ಕಳುಹಿಸಿದ ವಿದ್ಯಾರ್ಥಿನಿ ವಶಕ್ಕೆ ಪಡೆದಿದ್ದರೆ, ಬಾಯ್‌ಫ್ರೆಂಡ್ ಅರೆಸ್ಟ್ ಆಗಿದ್ದಾರೆ.
ಚಂಡಿಘಡ(ಸೆ.18): ವಿದ್ಯಾರ್ಥಿನಿರ ಹಾಸ್ಟೆಲ್ ವಿಡಿಯೋ ಲೀಕ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ತನ್ನ ಬಾತ್‌ರೂಂನಲ್ಲಿ ತನ್ನ ವಿಡಿಯೋ ಚಿತ್ರೀಕರಿಸಿಕೊಂಡಿರುವ ಓರ್ವ ವಿದ್ಯಾರ್ಥಿನಿ ಅದನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದಾಳೆ. ಇತರ ಯಾವುದೇ ವಿಡಿಯೋ ಕಳುಹಿಸಿಲ್ಲ ಎಂದು ಪಂಜಾಬ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ಹಾಗೂ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇಷ್ಟೇ ಅಲ್ಲ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ವಿಡಿಯೋ ಚಿತ್ರೀಕರಿಸಿಕೊಂಡು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ವಿದ್ಯಾರ್ಥಿನಿಯನ್ನು ಮೊಹಾಲಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೆ, ಇತ್ತ ವಿಡಿಯೋ ಸ್ವೀಕರಿಸಿದ ವಿದ್ಯಾರ್ಥಿನಿಯ ಬಾಯ್‌ಫ್ರೆಂಡನ್ನು ಶಿಮ್ಲಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಾತ್‌ರೂಂ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿನಿ(chandigarh university) ಇತರ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ(Hostel Students Video) ಹಂಚಿಕೊಳ್ಳಲಾಗಿದೆ. 60ಕ್ಕೂ ಎಂಎಂಎಸ್(MMS Leak) ಈ ವಿದ್ಯಾರ್ಥಿನಿಯ ಬಳಿ ಇದೆ ಅನ್ನೋ ವದಂತಿ ಹಬ್ಬಿತ್ತು. ಇದರಿಂದ ಹಲವು ವಿದ್ಯಾರ್ಥಿನಿಯರು(Womens Hostel) ಬದುಕಿಗೆ ಪೂರ್ಣವಿರಾಮ ಹಾಕುವ ಯತ್ನಕ್ಕೂ ಕೈಹಾಕಿದ್ದರು. ಇತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡುತ್ತಿರುವ ಬೆನ್ನಲ್ಲೇ ಚಂಡಿಘಡ ವಿಶ್ವಿವಿದ್ಯಾಲಯದಲ್ಲಿ(Punjab College) ಭಾರಿ ಪ್ರತಿಭಟನೆ ಆರಂಭಗೊಂಡಿದೆ.
ಲೇಡಿಸ್ ಹಾಸ್ಟೆಲ್‌ನ ಬಾತ್‌ರೂಮ್ ವಿಡಿಯೋ ಲೀಕ್: ಬೀದಿಗಳಿದ ವಿದ್ಯಾರ್ಥಿನಿಯರು
ಹಲವು ವಿದ್ಯಾರ್ಥಿನಿಯರ ವಿಡಿಯೋ ಬಹಿರಂಗವಾಗಿಲ್ಲ. ಕೇವಲ ಓರ್ವ ವಿದ್ಯಾರ್ಥಿನಿಯ ವಿಡಿಯೋ ಮಾತ್ರ ಬಹಿರಂಗವಾಗಿದೆ. ಯಾವ ವಿದ್ಯಾರ್ಥಿನಿಯರು ಅಹಿತರ ಘಟನೆಗೆ ಕೈಹಾಕಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಒಪ್ಪಿಕೊಂಡಿಲ್ಲ. ಪರಿಸ್ಥಿತಿ ನಿಭಾಯಿಸಲು ಈ ರೀತಿಯ ಹೇಳಿಕೆ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರ ಜೀವಕ್ಕೆ ಅಪತ್ತು ಬಂದಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ. ಇಷ್ಟೇ ಅಲ್ಲ ಹಲವು ವಿದ್ಯಾರ್ಥಿನಿಯರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಘಟನೆ ಇದೀಗ ದೇಶಾದ್ಯಂತ ಸದ್ದು ಮಾಡಿದೆ. ಘಟನೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಇತ್ತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಉನ್ನತ ಮಟ್ಟದ ತನಿಖೆ ಕೈಗೊಂಡಿದ್ದಾರೆ. ಪಂಜಾಬ್ ಸಿಎಂ ಭಗವಂತ್ ಮಾನ್ ಈ ಘಟನೆ ಕುರಿತು ಬೇಸರ ವ್ಯಕ್ತಪಡಿಸಿದ್ದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.