Asianet Suvarna News Asianet Suvarna News

ಅಮಿತಾಭ್‌ ಬಚ್ಚನ್‌ನನ್ನು ಹಿಂದಿಕ್ಕಿದ ಸೋನು ಸೂದ್ ನಂ.1 ಸೌತ್ ಏಷ್ಯನ್ ಸೆಲೆಬ್ರಿಟಿ

ಬಾಲಿವುಡ್ ನಟ ಸೋನು ಸೂದ್ ಬಡಜನರಿಗೆ ನೆರವಾಗಲು 10 ಕೋಟಿ ಸಂಗ್ರಹಿಸುವ ಕೆಲಸದಲ್ಲಿದ್ದಾರೆ. ತಮ್ಮ ಪ್ರಾಪರ್ಟಿಯನ್ನೇ ಅಡವಿಟ್ಟಿದ್ದಾರೆ ನಟ

Sonu Sood mortgages 8 Juhu properties to raise Rs 10 crore for needy dpl
Author
Bangalore, First Published Dec 10, 2020, 1:15 PM IST

ಬಾಲಿವುಡ್ ನಟ ಸೋನು ಸೂದ್ 8 ಪ್ರಾಪರ್ಟಿಗಳನ್ನು ಅಡವಿಟ್ಟಿದ್ದಾರೆ.ಬಡ ಜನರಿಗೆ ನೆರವಾಗಲು ಸುಮಾರು 10 ಕೋಟಿ ಸಂಗ್ರಹಿಸುವುದಕ್ಕೆ ನಟ ಮುಂಬೈನ ಜುಹುವಿನಲ್ಲಿರುವ 8 ಪ್ರಾಪರ್ಟಿ ಅಡವಿರಿಸಿದ್ದಾರೆ ನಟ ಸೋಉ ಸೂದ್.

ಕೊರೋನಾ ಸಂದರ್ಭ ನಟ ಸೋನು ಸೂದ್ ಅವರ ಮಾನವೀಯ ಕೆಲಸಗಳಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಗತ್ಯ ಮೊತ್ತವನ್ನು ಪಡೆಯುವುದಕ್ಕೆ ಜುಹುವಿನಲ್ಲಿರುವ ಪ್ರಾಪರ್ಟಿ ಅಡವಿಡಲಾಗಿದೆ. ಇದರಲ್ಲಿ 6 ಫ್ಲಾಟ್ ಮತ್ತು 2 ಶಾಪ್‌ಗಳೂ ಸೇರಿದೆ.

ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ನಟ ಸೋನು ಸೂದ್

ದಾಖಲೆಗಳ ಪ್ರಕಾರ ಸೆಪ್ಟೆಂಬರ್ 15ರಂದು ಒಪ್ಪಂದ ಸಹಿ ಮಾಡಲಾಗಿದೆ.  ನವೆಂಬರ್ 24ರಂದು ರಿಜಿಸ್ಟ್ರೇಷನ್ ಮಾಡಲಾಗಿದೆ. ಈ ಫ್ಲಾಟ್ ಮುಂಬೈನ ಇಸ್ಕಾನ್‌ ದೇವಾಲಯದ ಸಮೀಪದಲ್ಲಿದೆ.

ಕೊರೋನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಸೋನು ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡಿದ್ದರು. ಅವರು ಜನರಿಗಾಗಿ ಪಿಪಿಇ ಕಿಟ್‌ಗಳನ್ನು ವ್ಯವಸ್ಥೆಗೊಳಿಸಿದ್ದರು. ಸಹಾಯಕ್ಕಾಗಿ ಸಾವಿರಾರು ಜನ ಸೋನು ಅವರನ್ನು ತಲುಪುತ್ತಿದ್ದರು. ಆಗಸ್ಟ್‌ನಲ್ಲಿ ಸೋನು, “1137 ಮೇಲ್ 19000 FB ಸಂದೇಶ, 4812 ಇನ್ಸ್ಟಾ ಸಂದೇಶ, 6741 ಟ್ವಿಟರ್ ಸಂದೇಶಗಳನ್ನು ಸ್ವೀಕರಿಸಿದ್ದರು.

'ಇಷ್ಟೊಂದ್ ಕಮ್ಮಿ ಅಲ್ಲ': 5 BHK ಮನೆಯ ಬೆಲೆ ರಿವೀಲ್ ಮಾಡಿದ ನವ ವರ

ಎಲ್ಲರನ್ನೂ ನೆರವಾಗುವುದು ಅಸಾಧ್ಯ. ನಾನು ಇನ್ನೂ ನನ್ನಿಂದಾದ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ ಸೋನು ಸೂದ್. ನಟ 2020ರ ಏಷ್ಯನ್ ಟಾಪ್ ಸೆಲೆಬ್ರಿಟಿಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

Follow Us:
Download App:
  • android
  • ios