ಕೊರೋನಾದಿಂದ ಸಂಕಷ್ಟಕ್ಕೆ ತುತ್ತಾದ ಜನರಿಗೆ ನೆರವಾದ ಬಾಲಿವುಡ್ ನಟ ಸೋನು ಸೂದ್ ತಮ್ಮನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗೆ ನಟ ತಮ್ಮನ್ನು ಟ್ರೋಲ್ ಮಾಡುವವರ ಬಗ್ಗೆ, ಕೆಟ್ಟದಾಗಿ ಮಾತನಾಡುವವರ ಬಗ್ಗೆ ಸೋನು ಪ್ರತಿಕ್ರಿಯಿಸಿದ್ದಾರೆ.

ನಾನು ಜನಸಾಮಾನ್ಯರಿಗಷ್ಟೇ ಉತ್ತರಿಸಬಲ್ಲೆ. ಕೆಟ್ಟ ಕಮೆಂಟ್ ಮಾಡುವ, ಟ್ರೋಲ್ ಮಾಡುವವರಿಗೆ ನಾನು ನನ್ನ ಬಗ್ಗೆ, ನನ್ನ ಕೆಲಸಗಳ ಬಗ್ಗೆ ಹೇಳುವುದಿಲ್ಲ ಎಂದಿದ್ದಾರೆ ಸೋನು ಸೂದ್.

ಕೊಲ್ಕತ್ತಾ ದುರ್ಗಾ ಪೂಜಾ ಪೆಂಡಾಲ್‌ಗಳಲ್ಲಿ ಸೋನು ಪ್ರತಿಮೆ..!

ಸುಮ್ಮನೆ ನೆಗೆಟಿವ್ ಕಮೆಂಟ್ ಮಾಡಿ ಟ್ರೋಲ್ ಮಾಡುವವರು ಎಟೆನ್ಶನ್‌ಗಾಗಿ ಈ ರೀತಿ ಮಾಡುತ್ತಿದ್ದಾರೆ. ನೆಗೆಟಿವಿಟಿ ಎನ್ನುವುದು ಅವರ ಡಿಎನ್‌ಎನಲ್ಲಿಯೇ ಇದೆ ಎಂದಿದ್ದಾರೆ.

ನೆಗೆಟಿವಿಟಿ ನನ್ನ ಒಳ್ಳೆಯ ಕೆಲಸವನ್ನು ಮುಂದುವರೆಸಲು ಅವರ ಪ್ರಚೋದನೆ ಎಂದಿದ್ದಾರೆ ಸೋನು ಸೂದ್. ತನ್ನ ತಂಡ ಯಾವ ರೀತಿ ಕೆಲಸ ಮಾಡುತ್ತಿದೆ ಮತ್ತು ನೆರವಗಿಗಾಗಿ ಟ್ವಿಟರ್, ಮೇಲ್, ಮೆಸೇಜ್, ಟೋಲ್ ಫ್ರೀ ನಂಬರ್ ಮೂಲಕ ಮೂಲಕ ಹೇಗೆ ಸಂಪರ್ಕಿಸುವುದೆಂದ ಜನಸಾಮಾನ್ಯರು ತಿಳಿಯಬೇಕೆಂದು ಅವರು ಹೇಳಿದ್ದಾರೆ.