ಬಾಲಿವುಡ್ ನಟ ಸೋನು ಸೂದ್  ಐಎಎಸ್ ಆಕಾಂಕ್ಷಿಗಳಿಗೆ ಸ್ಕಾಲರ್‌ಶಿಪ್ ನೀಡುವ ಕಾರ್ಯಕ್ರಮ ಆರಂಭಿಸಿದ್ದಾರೆ. ತಾಯಿಯ 13ನೇ ವರ್ಷದ ಪುಣ್ಯ ಸ್ಮರಣಾರ್ಥ ನಟ ಇಂಹತದೊಂದು ಕೆಲಸ ಆರಂಭಿಸಿದ್ದು, ಇದರಲ್ಲಿ ಹೊಸ ಸ್ಕಾಲರ್‌ಶಿಪ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ ನಟ, ಅ.13ರಂದು ತಾಯಿ ಮೃತಪಟ್ಟಿದ್ದರು. ಇಂದಿಗೆ 13 ವರ್ಷಗಳಾಯಿತು. ಆಕೆಯ ಪುಣ್ಯ ಸ್ಮರಣೆಯಂದು ಐಎಎಸ್ ಆಕಾಂಕ್ಷಿಗಳಿಗೆ ನೆರವಾಗುವ ಪ್ರತಿಜ್ಞೆ ಮಾಡುತ್ತಿದ್ದೇನೆ. ಪ್ರೊ. ಸರೋಜ್ ಸೂದ್ ಸ್ಕಾಲರ್‌ಶಿಪ್ ಮೂಲಕ ಐಎಎಸ್ ಆಕಾಂಕ್ಷಿಗಳಿಗೆ ಅವರ ಗುರಿ ತಲುಪಲು ನೆರವಾಗಲಿದ್ದೇನೆ ಎಂದು ಬರೆದಿದ್ದಾರೆ.

ಮಕ್ಕಳಿಗಾಗಿ ಕುಗ್ರಾಮದಲ್ಲಿ ಟವರ್ ಹಾಕ್ಸಿದ್ರು ನಟ ಸೋನು

ಲಾಕ್‌ಡೌನ್ ಸಂದರ್ಭ ಕಾರ್ಮಿಕರಿಗೆ ಊರು ಸೇರಲು ನೆರವಾದ ಬಾಲಿವುಡ್ ನಟ ನಂತರದಲ್ಲಿ ಬಹಳಷ್ಟು ಜನರಿಗೆ ನೆರವಾಗಿದ್ದಾರೆ. ಆಹಾರ, ಚಿಕಿತ್ಸೆ, ಶಿಕ್ಷಣ, ಸೂರು, ಉದ್ಯೋಗ ಹೀಗೆ ಹಲವು ರೀತಿಯಲ್ಲಿ ದೇಶಾದ್ಯಂತ ಜನರಿಗೆ ನೆರವಾಗಿದ್ದಾರೆ ನಟ.