ಕೊರೋನಾ ಸಮಯದಲ್ಲಿ ಬಹಳಷ್ಟು ಸಮಾಜಮುಖಿ ಕಾರ್ಯಗಳಿಂದ ಜನರ ಮನ ಗೆದ್ದ ಬಾಲಿವುಡ್ ನಟ ಸೋನು ಸೂದ್ ಮಕ್ಕಳಿಗಾಗಿ ಟವರ್ ನಿರ್ಮಿಸಿಕೊಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ ನಟ.

ಹರಿಯಾಣದ ಮೋರ್ನಿ ಗ್ರಾಮದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಇಂಟರ್‌ನೆಟ್ ಸಮಸ್ಯೆಯಿಂದ ತರಗತಿಗಳನ್ನು ಕೇಳಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ನಟ ನೆರವಿಗೆ ಧಾವಿಸಿದ್ದಾರೆ.

ಮಾನವೀಯ ಕಾರ್ಯಗಳಿಗೆ ಗೌರವ: ಸೋನು ಸೂದ್‌ಗೆ‌ ವಿಶ್ವಸಂಸ್ಥೆ ಪ್ರಶಸ್ತಿ..!

ಇಂಡಸ್ ಟವರ್‌ ಮತ್ತು ಏರ್‌ಟೆಲ್‌ನ ನೆರವಿನೊಂದಿಗೆ ಇಂಟರ್‌ನೆಟ್ ಒದಗಿಸಲು ಟವರ್ ನಿರ್ಮಿಸಲಾಗಿದೆ. ಮಕ್ಕಳು ನಮ್ಮ ಮುಂದಿನ ಭವಿಷ್ಯ, ಆ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಮನಾದ ಅವಕಾಶ ಕಲ್ಪಿಸುವುದು ಅಗತ್ಯ ಎಂದಿದ್ದಾರೆ.