Asianet Suvarna News Asianet Suvarna News

Humanitarian Award ದೇಗುಲ ನನಗಲ್ಲ, 350 ಕನ್ನಡಿಗರ ಕಣ್ಣೀರು ನನ್ನ ಗುರಿ ಬದಲಾಯಿಸಿತ್ತು: ಸೋನು ಸೂದ್

ಮಾನವೀಯ ಪ್ರಶಸ್ತಿಯನ್ನು ಸ್ವೀಕರಿಸಿದ ಸೋನು ಸೂದ್. ಜೀವನದಲ್ಲಿ ಮರೆಯಲಾಗದ ಕ್ಷಣವನ್ನು ಹಂಚಿಕೊಂಡ ನಟ....

Sonu Sood honoured with Humanitarian award says i bagged best role in life vcs
Author
First Published Dec 5, 2022, 10:50 AM IST

ಬಹುಭಾಷಾ ನಟ ಸೋನು ಸೂದ್ ಕೊರೋನಾ ಪ್ಯಾಂಡಮಿಕ್ ಸಮಯದಲ್ಲಿ ಸಾವಿರಾರು ಜನರಿಗೆ ತಮ್ಮ ಸ್ವಂತ ಹಣದಿಂದ ಸಹಾಯ ಮಾಡಿದ್ದಾರೆ. ಹೀಗಾಗಿ NDTV Humanitarian Award ಕೊಟ್ಟು ಗೌರವಿಸಲಾಗಿತ್ತು. ಈ ಸಮಯದಲ್ಲಿ ತಮ್ಮ ಜರ್ನಿ ಬಗ್ಗೆ ಮಾತನಾಡಿದ ಸೋನು ತಾಯಿ ಹೇಳಿಕೊಟ್ಟ ಜೀವನ ಪಾಠವನ್ನು ನೆನಪಿಸಿಕೊಂಡಿದ್ದಾರೆ.

'ಮಾನವೀಯ ಪ್ರಶಸ್ತಿಯನ್ನು ನನಗೆ ಕೊಟ್ಟಿರುವುದಕ್ಕೆ ಧನ್ಯವಾದಗಳು. ನಿಜವಾದ ಹೀರೋಗಳಿಂದ ಪ್ರಶಸ್ತಿ ಪಡೆದಿರುವುದಕ್ಕೆ ಇನ್ನೂ ಹೆಚ್ಚಿಗೆ ಖುಷಿಯಾಗುತ್ತಿದೆ. ಕೊರೋನಾ ಪ್ಯಾಂಡಮಿಕ್ ಆರಂಭವಾಗುತ್ತಿದ್ದಂತೆ ನಾನು ಡಾಕ್ಟರ್‌ಳನ್ನು ಸಂಪರ್ಕ ಮಾಡಲು ಶುರು ಮಾಡಿದೆ ಈಗಲ್ಲೂ ಅವರನ್ನು ಸಂಪರ್ಕಿಸಿ ನೂರಾರು ಪ್ರಶ್ನೆಗಳನ್ನು ಕೇಳುತ್ತೀನಿ ಅದಿಕ್ಕೆ ಅವರಿಗೆ ನನ್ನ ಮೊದಲ ಧನ್ಯವಾದಗಳು. ಇಂಜಿನಿಯರಿಂಗ್‌ ಮಾಡಿ ನಟನಾಗಲು ಮುಂಬೈಗೆ ಬಂದವನು ನಾನು, ಇಲ್ಲಿ ನನಗೆ ಯಾರೂ ಪರಿಚಯವಿರಲಿಲ್ಲ ಆದರೆ ಸಾಧನೆ ಮಾಡಬೇಕು ಅನ್ನೋ ಆಸೆ ತುಂಬಾನೇ ಇತ್ತು. ಮನಸ್ಸಿಗೆ ತೃಪ್ತಿ ಕೊಡುವುದು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಾಗ ಮಾತ್ರ. ತಮಿಳು, ತೆಲುಗು, ಕನ್ನಡ, ಮರಾಠ ಭಾಷೆಗಳಲ್ಲೂ ನಾನು ನಟಿಸಿರುವೆ...ತುಂಬಾ ಯಶಸ್ಸು ತಂದು ಕೊಟ್ಟ ಸಿನಿಮಾಗಳಲ್ಲಿ ನಾನಿದ್ದೆ. ನಾನು ಅಂದುಕೊಂಡಿದ್ದನ್ನು ಮಾಡಿರುವುದಕ್ಕೆ ಧನ್ಯವಾದಗಳು ದೇವರೆ ಹೇಳಬೇಕು ಆದರೆ ಕೊರೋನಾ ಬಂದಾಗ ಆಗ ಅನಿಸಿತ್ತು ನನ್ನ ಜೀವನದ ಬೆಸ್ಟ್‌ ರೂಲ್‌ನಲ್ಲಿ ಆಯ್ಕೆ ಮಾಡಿಕೊಂಡಿರುವೆ ಜನರು ಮನಸ್ಸಿನಿಂದ ಮೆಚ್ಚಿಕೊಂಡಿರುವ ಪಾತ್ರದಲ್ಲಿರುವೆ ಎಂದು. ಈ ಜರ್ನಿಗೆ almightyನೇ ನಿರ್ದೇಶಕ...ಆ ದೇವರು ಮಾಡಿಸುತ್ತಿರುವ ಸಿನಿಮಾದಲ್ಲಿ ಇನ್ನೂ ಹೆಚ್ಚಿನ ವರ್ಷ ಇರಲು ಇಷ್ಟ ಪಡುತ್ತೀನಿ. ನಿಜವಾದ ಮಾತು ಹೇಳಬೇಕು ಅಂದ್ರೆ 100 ಕೋಟಿ ಅಥವಾ 500 ಕೋಟಿ ಬಜೆಟ್ ಸಿನಿಮಾ ಮಾಡಿದ್ದರೂ ಈ ಖುಷಿ ನಿಮಗೆ ಸಿಗುವುದಿಲ್ಲ. ಪರಿಚಯವೇ ಇಲ್ಲದ ವ್ಯಕ್ತಿಯನ್ನು ಭೇಟಿ ಮಾಡಿ ಅವರ ಮುಖದಲ್ಲಿ ನಗು ಕಂಡಾಗ ನಾನು ಮಾಡಿರುವ ಹಿಟ್ ಸಿನಿಮಾಗಳನ್ನು ಮರೆತು ಬಿಡುತ್ತೇನೆ ಅಷ್ಟು ಖುಷಿ ಇದರಲ್ಲಿ ಸಿಗುತ್ತದೆ. ಪ್ರತಿ ದಿನ ನನ್ನ ಪೋಷಕರನ್ನು ಮಿಸ್ ಮಾಡಿಕೊಳ್ಳುತ್ತೇನೆ ಏಕೆಂದರೆ ಅವರು ಸಾದ ಒಂದು ಮಾತು ಹೇಳುತ್ತಿದ್ದರು ಸಾಧ್ಯವಾದ್ರೆ ನಿನ್ನ ಮುಷ್ಟಿ ಕಟ್ಟಿದ ಕೈಗಳನ್ನು ಬಿಚ್ಚಿ ನೋಡು, ಬಹುಶಃ ನಿನ್ನ ಕೈಗಳಲ್ಲಿ ಬೇರೊಬ್ಬರ ಜೀವವನ್ನು ಉಳಿಸುವ ರೇಖೆ ಬರೆದಿರಬಹುದು' ಅಂತಾ ಅಮ್ಮ ಹೇಳುತ್ತಿದ್ದ ಮಾತು ಈಗ ನೆನಪಾಗ್ತಿದೆ. ಎಲ್ಲರೂ ಕೇಳುವ ಹಾಗೆ ನಾನು ಇದನ್ನು ಹೇಗೆ ಮಾಡಲು ಸಾಧ್ಯವಾಗಿತ್ತು ನನಗೆ ಗೊತ್ತಿಲ್ಲ. ಪದೇ ಪದೇ ಒಬ್ಬರಿಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸಿಕೊಳ್ಳಿ ಡಿಸ್ಕೌಂಟ್ ಕೊಡಿ ಎಂದು ಕರೆ ಮಾಡಿದ್ದರೆ ಏನಪ್ಪ ಇಷ್ಟು ಸಲ ಕಾಲ್ ಮಾಡ್ತಾನೆ ಅನಿಸಬಹುದು ಆದರೆ ಈ ಎರಡು ವರ್ಷದಲ್ಲಿ ನಾನು ಅರ್ಥ ಮಾಡಿಕೊಂಡಿರುವ ವಿಚಾರ ಒಂದೇ ಗೊತ್ತಿಲ್ಲದ ವ್ಯಕ್ತಿ ಸಹಾಯಕ್ಕೆ ಗೊತ್ತಿಲ್ಲದ ವ್ಯಕ್ತಿಗೆ ಕರೆ ಮಾಡಲು ನಾನು ಎರಡು ಸಲ ಯೋಚನೆ ಮಾಡುವುದಿಲ್ಲ. ಸಾವಿರಾರೂ ಕಿಮೀ. ಜರ್ನಿ ಇದೆ..ಈಗಷ್ಟೆ ನನ್ನ ಜರ್ನಿ ಶುರು ಮಾಡಿದ್ದೀನಿ' ಎಂದು ಸೋನು ಮಾತನಾಡಿದ್ದಾರೆ.

Sonu Sood honoured with Humanitarian award says i bagged best role in life vcs

ಟೀಕೆ ಮತ್ತು ರಾಜಕೀಯ:

'ನನ್ನ ತಾಯಿ ಹೇಳುತ್ತಿದ್ದರು ಒಂದು ಹಾದಿಯಲ್ಲಿ ಸಾಗುವಾಗ ಸ್ಪೀಡ್‌ ಬ್ರೇಕರ್‌ಗಳು ಇದ್ದರೆ ನೀನು ಎಡವುತ್ತಿದ್ದರೆ ಖಂಡಿತ ನೀನು ಸರಿ ಹಾದಿಯಲ್ಲಿರುವೆ. ಹಲವರು ಮಾತನಾಡಿದ್ದರು ಒಂದು ತಿಂಗಳಲ್ಲಿ ಇವನ ಕೆಲಸ ಮುಗಿಸುತ್ತಾನೆ ಎಂದು ಟೀಕೆ ಮಾಡಿದ್ದರು..ಎರಡುವರೆ ವರ್ಷ ಅಗಿದೆ ಈಗಲ್ಲೂ ದಿನಕ್ಕೆ 500 ಜನರನ್ನು ಭೇಟಿ ಮಾಡುತ್ತೇನೆ ಪ್ರತಿಯೊಬ್ಬರ ಜೀವನವನ್ನು ಬದಲಾಯಿಸುವುದಕ್ಕೆ ಆಗೋಲ್ಲ ಆದರೆ ಪಯತ್ನ ಪಡುತ್ತೇನೆ. ಹಲವರ ಸಹಾಯ ಪಡೆದುಕೊಂಡು ಮುಂದುವರೆಯುತ್ತಿರುವೆ. ಡಾಕ್ಟರ್, ಆಸ್ಪತ್ರೆ, ಸ್ಕೂಲ್ ಮತ್ತು ಯೂನಿವರ್ಸಿಟಿಗಳ ಸಂಪರ್ಕ ಮಾಡಲು ಶುರು ಮಾಡಿರುವೆ ವಿಶ್ವಾದ್ಯಂತ ಜನರು ಪರಿಚಯವಿದ್ದಾರೆ. ನನ್ನ ಹೆಸರಿನಲ್ಲಿ ದೇಗುಲ ಕಟ್ಟಿದ್ದಾರೆ ಅದಕ್ಕೆ ನಾನು ಆರ್ಹನಲ್ಲ ...ಸಿನಿಮಾಗೆ ಎಂಟ್ರಿ ಕೊಟ್ಟಾಗ ಹೆಸರು ಬದಲಾಯಿಸಿಕೊಳ್ಳಲು ಪ್ರಯತ್ನ ಪಟ್ಟೆ ಆದರೆ ಆಗಲಿಲ್ಲ ಈಗ ಜನರು ತಮ್ಮ ಮಕ್ಕಳಿಗೆ ಸೋನು ಎಂದು ಹೆಸರು ಇಡುತ್ತಿದ್ದಾರೆ.' ಎಂದು ಸೋನು ಹೇಳಿದ್ದಾರೆ.

ಚಂಡೀಗಢ ವಿವಿ ವೀಡಿಯೋ ಲೀಕ್ ಪ್ರಕರಣ: ವಿಡಿಯೋ ಶೇರ್ ಮಾಡ್ಬೇಡಿ, ಜವಾಬ್ದಾರರಾಗಿರಿ: ಜನತೆಗೆ ಸೋನು ಸೂದ್ ಮನವಿ

ಮರೆಯಲಾಗದ ಘಟನೆ:

'ಹಲವಾರು ಘಟನೆಗಳು ನನ್ನ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ ಅದರಲ್ಲೂ ಮೊದಲು 350 ಜನರನ್ನು ಕರ್ನಾಟಕಕ್ಕೆ ಕರೆಸಿಕೊಳ್ಳಲು ಪಟ್ಟ ಸಾಹಸ ನೆನಪಿಸಿಕೊಳ್ಳಲು ಬೇಕು. ಎರಡು ದಿನಗಳ ಕಾಲ ಅನುಮತಿ ಪಡೆದುಕೊಳ್ಳುವುದರಲ್ಲಿ ಸಮಯ ತೆಗೆದುಕೊಳ್ಳುತ್ತಿದ್ದೆ. ಅವರೆಲ್ಲಾ ಕರ್ನಾಟಕಕ್ಕೆ ಬಂದ ನಂತರ ನಾನು ಭೇಟಿ ಮಾಡಿದಾಗ ಅವರಲ್ಲಿ ಸಂತೋಷ ಪೋಷಕರ ಭಾವುಕ ಕ್ಷಣವ ಎಲ್ಲರೂ ಕಣ್ಣ ಮುಂದಿದೆ. 350 ಜನರು ಮಾತ್ರವಲ್ಲ ಸಾವಿರಾರು ಜನರು ಸರಳುತ್ತಿದ್ದಾರೆ ಅವರಿಗೆ ಸಹಾಯ ಮಾಡಬೇಕು ಎಂದು ತೀರ್ಮಾನ ಮಾಡಿದೆ. ಈ ಕ್ಷಣ ನಿಮ್ಮ ಮುಂದಿರಲು ಅವರೇ ಕಾರಣ' ಎಂದಿದ್ದಾರೆ ಸೋನು.

Follow Us:
Download App:
  • android
  • ios