ಸೋನು ಸೂದ್ ಆ್ಯಂಬುಲೆನ್ಸ್ ಸೇವೆ | ಬಡ ಜನರಿಗೆ ಕಷ್ಟದಲ್ಲಿ ನೆರವಾಗಲಿದೆ ಈ ಹೊಸ ಸೇವೆ 

ಬಾಲಿವುಡ್ ನಟ ಸೋನು ಸೂದ್‌ ಅವರಿಗೆ ಈಗ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. ನಟನಾಗಿ ಮಾತ್ರವಲ್ಲದೆ, ಮಾನವೀಯ ಗುಣಗಳ ವ್ಯಕ್ತಿಯನ್ನು ಬಹಳಷ್ಟು ಜನ ಅರಾಧಿಸುತ್ತಾರೆ. ಸೋನು ತಮ್ಮ ಕೆಲಸಗಳ ಮೂಲಕ ತಮ್ಮ ಅಭಿಮಾನಿ ಬಳಗಕ್ಕೂ ದೊಡ್ಡ ಪ್ರೇರಣೆಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗುವ ಘಟನೆಯೊಂದು ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟನ ಡೈ ಹಾರ್ಡ್‌ ಫ್ಯಾನ್ ಒಬ್ಬರು ನಟ ಸೋನು ಸೂದ್ ಹೆಸರಲ್ಲಿ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ. ಇದು ಅಗತ್ಯದಲ್ಲಿರೋ ಬಡ ಜನರಿಗೆ ನೆರವಾಗಲಿದೆ. ಈ ಬಗ್ಗೆ ತಿಳಿದ ನಟ ಸ್ವತಃ ತಾವೇ ಬಂದು ಆ್ಯಂಬುಲೆನ್ಸ್ ಉದ್ಘಾಟಿಸಿದ್ದಾರೆ.

ಕೊರೋನಾ ವಾರಿಯರ್‌ ಸೋನು ಸೂದ್‌ ಮೇಲೆ ಎಫ್‌ಐಆರ್ ದಾಖಲು..!

ಆ್ಯಂಬುಲೆನ್ಸ್ ಸೇವೆ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳಿಗೆ ಸೇವೆಗಳನ್ನು ಒದಗಿಸಲಿದೆ. ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸೋನು ಸೂದ್ ಹೇಳಿದ್ದಾರೆ.

ಇತ್ತೀಚೆಗೆ ಸೋನು ಸೂದ್ ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ರಸ್ತೆ ಬದಿಯ ಫಾಸ್ಟ್‌ಫುಡ್ ಅಂಗಡಿಗೆ ಭೇಟಿ ಕೊಟ್ಟಿದ್ದರು. ತೆಲಂಗಾಣದಲ್ಲಿ ನಟನಿಗಾಗಿ ಇತ್ತೀಚೆಗೆ ದೇವಸ್ಥಾನವನ್ನೂ ಕಟ್ಟಲಾಗಿತ್ತು. ನಟನ ಸತ್ಕಾರ್ಯಗಳು ದೇಆದ್ಯಂತ ಜನರ ಮನಸು ಗೆಲ್ಲುತ್ತಿದೆ.