ಮುಂಬೈ(ಜ.08): ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ ನೆರವಾಗುವ ಮೂಲಕ ಮನೆಮಾತಾಗಿರುವ ಬಾಲಿವುಡ್‌ ನಟ ಸೋನು ಸೂದ್‌ ಮೇಲೆ ದೂರು ದಾಖಲಾಗಿದ್ದು, ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.  

ಮುಂಬೈನ ಜುಹು ಪ್ರದೇಶದಲ್ಲಿರುವ ತಮ್ಮ ನಿವಾಸವನ್ನು ಅಕ್ರಮವಾಗಿ ಹೋಟೆಲ್‌ ಆಗಿ ಪರಿವರ್ತಿಸಿದ್ದಾರೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ದೂರು ದಾಖಲಿಸಿದೆ. 2 ಪುಟಗಳ ದೂರಿನಲ್ಲಿ, ಸೋನು ಸೂದ್‌ ಪೂರ್ವಾನುಮತಿ ಪಡೆಯದೆ ‘ಶಕ್ತಿ ಸಾಗರ’ ನಿವಾಸದಲ್ಲಿ ಮಾರ್ಪಡು ಮಾಡಿ ಹೋಟೆಲ್‌ ಆಗಿ ಪರಿವರ್ತಿಸಿದ್ದಾರೆ.

ತಮ್ಮ ನಿವಾಸವನ್ನು ನಿರ್ಗತಿಕರಿಗಾಗಿ ಹೋಟೆಲ್‌ ಮಾಡಲು ಅನುಮತಿ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಪಾಲಿಕೆಯು ಕಳೆದ ವರ್ಷ ಅಕ್ಟೋಬರ್‌ನಲ್ಲಿಯೇ ನೋಟಿಸ್‌ ಜಾರಿ ಮಾಡಿದೆ ಎಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ ಸೋನು ಸೂದ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ವಿಚಾರವಾಗಿ ಇದುವರೆಗೂ ಸೋನು ಸೂದ್‌ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ರಾಮ್‌ ಕದಂ ಎನ್ನುವವರು, ಕಂಗನಾ ಬಳಿಕ ಮಹರಾಷ್ಟ್ರ ಸರ್ಕಾರ ಈಗ ಸೂನು ಸೂದ್‌ ಅವರನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸೋನು ಸೂದ್ ಹೆಸರಿನಲ್ಲಿ ಫುಡ್ ಸ್ಟಾಲ್; ದಿಢೀರ್ ಬೇಟಿ ನೀಡಿ ಸರ್ಪ್ರೈಸ್ ನೀಡಿದ ನಟ!

47 ವರ್ಷದ ನಟ ಸೋನು ಸೂದ್‌ ಲಾಕ್‌ಡೌನ್ ಹಾಗೂ ಕೊರೋನಾ ಸಂಕಷ್ಟ ಕಾಲದಲ್ಲಿ ಸಾವಿರಾರು ಮಂದಿಗೆ ತಮ್ಮ ಸಹಾಯ ಹಸ್ತವನ್ನು ನೀಡುವುದರ ಮೂಲಕ ಕೊರೋನಾ ವಾರಿಯರ್ ಆಗಿ ಹೊರಹೊಮ್ಮಿದ್ದಾರೆ. ಮಕ್ಕಳ ಕಲಿಕೆಗೆ ಮೊಬೈಲ್ ಒದಗಿಸುವುದರಿಂದ ಹಿಡಿದು ಅದೆಷ್ಟೋ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಡಲು ನೆರವಾಗುವುದರ ಮೂಲಕ ಹಲವರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.