Malvika Sood In Politics: ರಾಜಕೀಯಕ್ಕಿಳಿದ ತಂಗಿಗಾಗಿ ಪ್ರಚಾರ ಮಾಡಲ್ಲ ಎಂದ ಸೋನು ಸೂದ್

  • ರಾಜಕೀಯ ಅಖಾಡಕ್ಕಿಳಿದ ಸೋನು ಸೂದ್ ಸಹೋದರಿ
  • ತಂಗಿಗಾಗಿ ಕ್ಯಾಂಪೇನ್ ಮಾಡಲ್ಲ ಅಣ್ಣ ಸೋನು ಸೂದ್
Sonu Sood Clarifies He Wont Be Campaigning For His Sister Malvika Sood dpl

ಬಾಲಿವುಡ್ ನಟ ಸೋನು(Sonu Sood) ಸೂದ್ ಅವರು ರಾಜಕೀಯಕ್ಕೆ ಬರುತ್ತಾರೆಂದೇ ಬಹಳಷ್ಟು ಜನ ನಿರೀಕ್ಷಿಸಿದ್ದರು. ಅವರಿಗೆ ಹಲವು ಪಕ್ಷಗಳಿಂದ ಆಫರ್‌ಗಳೂ ಇದ್ದವು ಎನ್ನಲಾಗುತ್ತಿದೆ. ಹೀಗಿದ್ದರೂ ನಟ ಮಾತ್ರ ರಾಜಕೀಯದಿಂದ ದೂರವಿದ್ದಾರೆ. ಆದರೆ ಈಗ ಸೋನು ಸೂದ್ ಅವರ ಸಹೋದರಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ತಂಗಿಗೆ ಶುಭ ಹಾರೈಸಿದ್ದಾರೆ. ಆದರೆ ತಂಗಿ ಪರವಾಗಿಯೂ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್(Malvika Sood) ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಸೋನು ಸಹೋದರಿಯ ಈ ಹೊಸ ಪ್ರಯಾಣದಲ್ಲಿ ನಟ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅವರಿಗೆ ಶುಭ ಬಯಸಿ ಹಾರೈಸಿದ್ದರು. ನಟ ತಮ್ಮ ಸಹೋದರಿ  ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಅವರು ತಂಗಿಯ ಹೆಜ್ಜೆಗಳನ್ನು ಅನುಸರಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಹ್ಯಾಪಿ ನ್ಯೂ ಇಯರ್ ನಟನು ತನ್ನ ಸಹೋದರಿ ಯಾವಾಗಲೂ ಜನರ ಒಳಿತಿಗಾಗಿ ಇರುತ್ತಾರೆ. ಅದನ್ನು ಪೂರ್ಣ ಪ್ರಮಾಣದ ರೀತಿಯಲ್ಲಿ ಮಾಡಲು ಇದು ಸೂಕ್ತ ಮಾರ್ಗವಾಗಿದೆ. ಆದರೂ ತಾನು ಇದರಿಂದ ದೂರ ಉಳಿಯುತ್ತೇನೆ ಎಂದಿದ್ದಾರೆ.

ನಿರ್ಮಾಪಕನ ಮನೆ ಮುಂದೆ ಫೈರಿಂಗ್, ಸೋನುಸೂದ್ ವಿಚಾರಣೆ, ಕೊಲೆ ಬೆದರಿಕೆ

ಮಾಳವಿಕಾ ಸೂದ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಗ್ಗೆ ಮಾತನಾಡಿ, ತಂಗಿ ರಾಜಕೀಯಕ್ಕೆ ಸೇರಿದ್ದು ನನಗೆ ಹೆಮ್ಮೆ ಎನಿಸುತ್ತದೆ. ಅವರು ಕಳೆದ ಎರಡು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ. ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿದಿದ್ದಾರೆ. ಅವರು ಜನರೊಂದಿಗೆ ಸಂಪರ್ಕದಲ್ಲಿರಲು ಮತ್ತು ಅವರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ನನಗೆ ಖುಷಿಯಾಗಿದೆ ಎಂದಿದ್ದಾರೆ. ಸೋನು ಸಹೋದರಿ ಪರ ಪ್ರಚಾರ ಮಾಡುತ್ತಾರಾ ಎಂದು ಕೇಳಿದಾಗ, ಅವರು ಪ್ರಚಾರ ಮಾಡುವುದಿಲ್ಲ ಎಂದು ಉತ್ತರಿಸಿದ್ದಾರೆ. ನನಗೆ ನನ್ನ ಸಹೋದರಿಯ ಮೇಲೆ ನಂಬಿಕೆ ಇದೆ. ಅವಳು ಅದನ್ನು ಅವಳ ರೀತಿಯಲ್ಲಿ ಮಾಡುತ್ತಾಳೆ. ನಾನು ರಾಜಕೀಯ ಕ್ಷೇತ್ರದಿಂದ ದೂರ ಉಳಿಯುತ್ತೇನೆ ಎಂದು ಮತ್ತೊಮ್ಮೆ ದೃಢಪಡಿಸಿದ್ದಾರೆ.

Sonu Sood Clarifies He Wont Be Campaigning For His Sister Malvika Sood dpl

ಇದು ಅವಳ ಪ್ರಯಾಣ, ಮತ್ತು ನನಗೆ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಮಾಡುತ್ತಿದ್ದ ಕೆಲಸವನ್ನು ಮಾಡುತ್ತಲೇ ಇರುತ್ತೇನೆ. ನಾನು ಚುನಾವಣೆಯಲ್ಲಿ ಅವಳ ಪರವಾಗಿ ಪ್ರಚಾರ ಮಾಡುವುದಿಲ್ಲ. ಏಕೆಂದರೆ ಅವಳು ಕಷ್ಟಪಟ್ಟು ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ. ನನ್ನ ಮಟ್ಟಿಗೆ, ನಾನು ಯಾವಾಗಲೂ ರಾಜಕೀಯ ಅಥವಾ ಯಾವುದೇ ರಾಜಕೀಯ ಸಂಬಂಧಗಳಿಂದ ದೂರವಿರುತ್ತೇನೆ ಎಂದಿದ್ದಾರೆ.

ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿ ಈ ಯೋಜನೆಯು ಮಹಾನಗರಗಳು ಮತ್ತು ಗ್ರಾಮೀಣ ಭಾರತದ ಸಾಮಾನ್ಯ ಜನರು ಡಿಜಿಟಲ್ ವಂಚನೆಗಳಿಗೆ ಹೇಗೆ ಬಲಿಯಾಗುತ್ತಾರೆ ಎಂಬುದರ ಕುರಿತಾಗಿದೆ. ನನ್ನ ಪಾತ್ರವು ಅವರ ರಕ್ಷಣೆಗೆ ಹೇಗೆ ಬರುತ್ತದೆ ಎಂಬುದರ ಕುರಿತು ಸಿನಿಮಾ ಇದೆ. ನಾನು ಈ ಯೋಜನೆಯ ಬಗ್ಗೆ ಸಾಕಷ್ಟು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಕಳೆದ ಎರಡು ವರ್ಷಗಳಿಂದ, ನೀಡುವುದರಿಂದ ಪಡೆಯುವ ಸಂತೋಷವನ್ನು ಅನುಭವಿಸಿದ್ದೇನೆ. ಈ ಹಿಂದೆ ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರು ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಲು ಅವರನ್ನು ಒತ್ತಾಯಿಸಿದ್ದರು. ಆದರೆ ಈಗ ಅವರೇ ಸೋನು ನಾಯಕನಾಗಿ ನಟಿಸುವ ಸ್ಕ್ರಿಪ್ಟ್‌ಗಳೊಂದಿಗೆ ಅವರನ್ನು ಸಂಪರ್ಕಿಸಿದರು ಎನ್ನಲಾಗಿದೆ.

ತಂಗಿ ಜೊತೆಗೂಡಿ ಸೈಕಲ್ ವಿತರಿಸಿದ್ದ ನಟ

ಬಾಲಿವುಡ್ ನಟ ಸೋನು ಸೂದ್ ಅವರು ಕೋವಿಡ್ -19 ವಿರುದ್ಧ ಹೋರಾಡಲು ರಾಷ್ಟ್ರಕ್ಕೆ ಸಹಾಯ ಮಾಡುವ ನಿರಂತರ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ನಾವು 2022ಕ್ಕೆ ಕಾಲಿಡುತ್ತಿದ್ದಂತೆ, ರಾಷ್ಟ್ರದ ಹೀರೋ ಮೊಗಾ ಡಿ ಧಿ (ಮೊಗಾ ಕಿ ಬೇಟಿ) ಎಂಬ ಮತ್ತೊಂದು ಕಾರ್ಯಕ್ರಮದತ್ತ ಗಮನ ಕೊಟ್ಟಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

Sonu Sood Clarifies He Wont Be Campaigning For His Sister Malvika Sood dpl

ನಟ, ತಮ್ಮ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರೊಂದಿಗೆ ಶಾಲಾ ಬಾಲಕಿಯರಿಗೆ ಮತ್ತು ಮೊಗಾದ ಸಾಮಾಜಿಕ ಕಾರ್ಯಕರ್ತರಿಗೆ 1000 ಸೈಕಲ್‌ಗಳನ್ನು ವಿತರಿಸಿದ್ದಾರೆ. ಮೋಗಾ ಸಮೀಪದ ಸುಮಾರು 40-45 ಹಳ್ಳಿಗಳ ವಿದ್ಯಾರ್ಥಿಗಳು ಸೋನು ಸೂದ್ ಅವರ ಅಭಿಯಾನದಿಂದ ಪ್ರಯೋಜನ ಪಡೆದಿದ್ದಾರೆ.

Latest Videos
Follow Us:
Download App:
  • android
  • ios