ಮಗನ ಫೋಟೋ ಯಾಕೆ ರಿವೀಲ್ ಮಾಡಲ್ಲ ಎಂದು ಸತ್ಯ ಬಿಚ್ಚಿಟ್ಟ ಸೋನಂ ಕಪೂರ್
ಸೋಷಿಯಲ್ ಮೀಡಿಯಾದಿಂದ ಮಗನನ್ನು ದೂರ ಇರಿಸಲು ಮುಂದಾದ ಸೋನಂ ಕಪೂರ್. ಈ ನಿರ್ಧಾರಕ್ಕೆ ಕಾರಣ ತಿಳಿಸಿದ ನಟಿ....
ಬಹುಭಾಷಾ ನಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಮತ್ತು ಅಳಿಯ ಆನಂದ್ ಅಹುಜಾ ಆಗಸ್ಟ್ 2022ರಲ್ಲಿ ಪುತ್ರನನ್ನು ಬರ ಮಾಡಿಕೊಂಡರು. ಸರಳ ಮದುವೆ ಮಾಡಿಕೊಂಡ ನಟಿ ತಮ್ಮ ನಿವಾಸದಲ್ಲಿ ಸರಳವಾಗಿ ಮಗನಿಗೆ ನಾಮಕರಣ ಮಾಡಿ ವಾಯು ಎಂದು ಹೆಸರಿಟ್ಟರು. ಮದರ್‌ಹುಡ್‌ನ ತುಂಬಾ ಎಂಜಾಯ್ ಮಾಡಿರುವೆ ಈಗ ಸಿನಿಮಾ ಮಾಡಲು ಮತ್ತೆ ಶುರು ಮಾಡಬೇಕು ಎಂದು ಸೋನಂ ಕಪೂರ್ ಹೇಳಿದ್ದಾರೆ. ಕ್ಯಾಮೆರಾದಿಂದ ಮಗನನ್ನು ದೂರ ಇರಿಸಲು ಕಾರಣ ತಿಳಿಸಿದ್ದಾರೆ.....
ಮೇ 8, 2018ರಲ್ಲಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಹಸೆಮಣೆ ಏರಿದ್ದರು. 2022 ಮಾರ್ಚ್ ತಿಂಗಳಿನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು. ಮುಂಬೈನ ಆಸ್ಪತ್ರೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಯು ಕಪೂರ್ ಅಹುಜಾ ಜನಿಸಿದ.
ಸೋನಂ ಹೇಳಿದೆ:
'ಸಿನಿಮಾ ರಂಗದಿಂದ ಬಿಗ್ ಬ್ರೇಕ್ ತೆಗೆದುಕೊಂಡಿರುವೆ. ನಾನು ಚಿಕ್ಕವಯಸ್ಸಿನಿಂದಲೂ ಇದನ್ನು ಮಾಡುತ್ತಿದ್ದೇನೆ, ಈಗ ಮತ್ತೆ ಕಮ್ ಬ್ಯಾಕ್ ಮಾಡಬೇಕು ಅನಿಸುತ್ತಿದೆ ನನ್ನ ಕೆಲಸಗಳನ್ನು ಆರಂಭಿಸಲು ರೆಡಿಯಾಗಿರುವೆ. ನನ್ನ ಅಡಲ್ಟ್ ಲೈಫ್ ಆರಂಭದಿಂದಲ್ಲೂ ನಾನು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರಣ ಇದೇ ನನ್ನ ಜೀವನವಾಗಿದೆ. ಚಿತ್ರೀಕರಣ ಆರಂಭಿಸಲು ಕಾಯುತ್ತಿರುವೆ. ನನ್ನ ಮುಂದಿನ ಸಿನಿಮಾ ಶೀಘ್ರದಲ್ಲಿ ಬಿಡುಗಡೆಯಾಗಲಿದೆ, ಸುಜಯ್ ಘೋಷ್ ನಿರ್ದೇಶನ ಮಾಡಿರುವುದು. ಪ್ರೆಗ್ನೆಂಟ್ ಆಗುವ ಮುನ್ನ ಚಿತ್ರೀಕರಣ ಮಾಡಿದ್ದೆ. ಇದೊಂದು ಥ್ರಿಲರ್ ಕಥೆ ಅಗಿದ್ದು ಜನರು ನನ್ನನ್ನು ಈ ಪಾತ್ರದಲ್ಲಿ ನೋಡಲಿ ಎಂದು ಕಾಯುತ್ತಿರುವೆ' ಎಂದು ಸೋನಂ ಮಾತನಾಡಿದ್ದಾರೆ.
ಸೋನಮ್ ಕಪೂರ್ ಪದೇ ಪದೇ ಎದೆ ತೋರಿಸೋದ್ಯಾಕೆ? ಹೃದಯ ಗೆದ್ದ ನೆಟ್ಟಿಗನ ಉತ್ತರ!
ಇನ್ನಿತ್ತರ ಸೆಲೆಬ್ರಿಟಿಗಳ ರೀತಿಯಲ್ಲಿ ಸೋನಂ ಕಪೂರ್ ತಮ್ಮ ಮಗನ ಫೋಟೋವನ್ನು ಸಾಮಾಜಿಕ ಜಾಲತಾಣದಿಂದ ಹಾಗೂ ಪ್ಯಾಪರಾಜಿಗಳ ಕಣ್ಣಿಂದ ದೂರವಿಟ್ಟಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂದು ಪ್ರಶ್ನೆ ಮಾಡಿದಾಗ 'ಸೋಷಿಯಲ್ ಮೀಡಿಯಾದಲ್ಲಿ ನಾನು ಫೋಟೋ ಶೇರ್ ಮಾಡುವುದರಿಂದ ಆತನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಆತ ದೊಡ್ಡವನಾದ ಮೇಲೆ ಆತನೇ ನಿರ್ಧಾರ ಮಾಡಲಿ' ಎಂದು ಸೋನಂ ಹೇಳಿದ್ದಾರೆ.
ವೈರಲ್ ಫೋಟೋ:
ಇತ್ತೀಚಿಗಷ್ಟೆ ಸೋನಂ ಕಪೂರ್ ಕರ್ವಾ ಚೌತ್ ಹಬ್ಬವನ್ನು ಆಚರಿಸಿದ್ದರು. ಕರ್ವಾ ಚೌತ್ ದಿನ ಸೂಪರ್ ಅಗಿ ಕಾಣಿಸಬೇಕು ಎಂದು ಮೇಕಪ್ ಮಾಡಿಸಿಕೊಂಡಿದ್ದಾರೆ. ಸೋನಮ್ ಕಪೂರ್ ಮಗನಿಗೆ ಎದೆ ಹಾಲುಣಿಸುತ್ತಲೇ ಮೇಕಮ್ ಮಾಡಿಕೊಳ್ಳುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಮಗನಿಗೆ ಹಾಲುಣಿಸುತ್ತಾ ಕುಳಿತಿದ್ದಾರೆ. ಮೇಕಪ್ ಮತ್ತು ಹೇರ್ ಸ್ಟೈಲಿಸ್ಟ್ ಮೇಕಮ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸೋನಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯ್ ಶೇರ್ ಮಾಡಿ ಸೋನಮ್, 'ನನ್ನ ತಂಡದೊಂದಿಗೆ ರಿಯಲ್ ಜಗತ್ತಿಗೆ ಹಿಂತಿರುಗಲು ತುಂಬಾ ಸಂತೋಷವಾಗಿದೆ. ರೆಡಿಯಾಗಿ ಮತ್ತೆ ಜನರನ್ನು ಭೇಟಿ ಮಾಡಲು ಸಂತೋಷವಾಯಿತು. ನನ್ನ ತವರು ನೆಲಕ್ಕೆ ಮರಳಲು ಇಷ್ಟಪಡುತ್ತೇನೆ. ಲವ್ ಯು ಮುಂಬೈ' ಎಂದು ಹೇಳಿದ್ದಾರೆ.
ಮನೆ ಮಾರಾಟ:
ಮುಂಬೈನ ಐಷಾರಾಮಿ ಬಂಗಲೆಯನ್ನು ನಟಿ ಸೋನಮ್ ಕಪೂರ್ ಮಾರಾಟ ಮಾಡಿದ್ದಾರೆ. ಮೂಲಗಳ ಪ್ರಕಾರ ಸೋನಮ್ ತನ್ನ ಮನೆಯನ್ನು 32.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 2015ರಲ್ಲಿ ಮುಂಬೈನಲ್ಲಿ ಮನೆಯನ್ನು ಖರೀದಿಸಿದ್ದರು. ಸೋನಮ್. ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ ಬಳಿ ಸೋನಮ್ ಐಷಾರಾಮಿ ಮನೆ ಇತ್ತು. ಸೋನಮ್ ಸದ್ಯ ಸೇಲ್ ಮಾಡಿರುವ ಮನೆಯಲ್ಲಿ ನಾಲ್ಕು ಕಾರ್ ಪಾರ್ಕಿಂಗ್ ಸ್ಲಾಟ್ ಹೊಂದಿತ್ತು. ಸುಮಾರು 5,533 ಚದರ ಅಡಿ ಇತ್ತು ಎನ್ನಲಾಗಿದೆ. ಅಂದಹಾಗೆ 32.5 ಕೋಟಿ ರೂಪಾಯಿ ಮನೆ ಮಾರಲು ಸುಮಾರು ಸ್ಟ್ಯಾಂಪ್‌ಗೆ 1.95 ಕೋಟಿ ರೂಪಾಯಿ ಪಾವತಿಸಲಾಗಿದೆ ಎನ್ನಲಾಗಿದೆ. ಅಂದಹಾಗೆ ಈ ಮನೆಯನ್ನು SMF ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಖರೀದಿ ಮಾಡಿದೆ ಎಂದು ಬಾಲಿವುಡ್ ನಲ್ಲಿ ಗುಲ್ಲಾಗಿದೆ.