ಮುಂಬೈ(ಜೂ. 15) ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಅವರ ಗೆಳತಿಯನ್ನು ದೂರುತ್ತಿರುವವರ ವಿರುದ್ಧ ನಟಿ ಸೋನಂ ಕಪೂರ್ ಕೆಂಡವಾಗಿದ್ದಾರೆ.

ಯಾರದ್ದಾದರೂ ಸಾವಿಗೆ ಅವರ ಗೆಳತಿ, ಮಾಜಿ ಗೆಳತಿ, ಕುಟುಂಬ, ಸಹೋದ್ಯೋಗಿ ಅಥವಾ ಇನ್ನಾರನ್ನಾದರೂ ದೂರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳಿವು

ಸೋನಂ ಕಪೂರ್ ಅವರಿಗಿಂತಲೂ ಮುಂಚೆ ನಟಿ ಕೃತಿ ಸನೋನ್ ಸಹೋದರಿ ನುಪುರ್ ಕೆಂಡವಾಗಿದ್ದರು.  ಟ್ರೋಲರ್ ಗಳನ್ನು ಹೃದಯ ಇಲ್ಲದವರು ಎಂದು ಝಾಡಿಸಿದ್ದರು.

ಪ್ರತಿಯೊಬ್ಬರು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವಂತಹ ಸ್ಥಿತಿ ತಲುಪಿದ್ದಾರೆ. ಯಾರು ಆಘಾತದಲ್ಲಿ ಇದ್ದಾರೋ ಅವರ ಮೇಲೆಯೇ ದಾಳಿ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇಂಥವನ್ನೆಲ್ಲ ಸಹಿಸಿಕೊಂಡು ಕೂರಬೇಕಾ ಎಂದು ನುಪುರ್ ಪ್ರಶ್ನೆ ಮಾಡಿದ್ದರು.

ಬಾಲಿವುಡ್ ನ ಉದಯೋನ್ಮುಖ ನಟ  ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಮುಖೇನ ಮನೆಮಾತಾಗಿದ್ದ ಸುಶಾಂತ್ ಸಿಂಗ್ ಭಾನುವಾರ ಮುಂಬೈನ ತಮ್ಮ ನಿವಾಸದಲ್ಲಿಯೇ ನೇಣಿಗೆ ಶರಣಾಗಿದ್ದರು.