Asianet Suvarna News Asianet Suvarna News

ಮದ್ವೆ ಆದ್ಮೇಲೆ ಇಸ್ಲಾಂಗೆ ಮತಾಂತರ ಆಗ್ತಾರಾ ಸೋನಾಕ್ಷಿ.. ಭಾವಿ ಮಾವ ಹೇಳಿದ್ದೇನು?

ಇದೀಗ ಮದುವೆ ಬಳಿಕ ಸೋನಾಕ್ಷಿ ಸಿನ್ಮಾ ಇಸ್ಲಾಂಗೆ ಮತಾಂತರ ಆಗ್ತಾರಾ? ಇದು ಮದುವೆನಾ (Hindu Rituals) ಅಥವಾ ನಿಖಾನಾ (Nikha) ಎಂಬ ಪ್ರಶ್ನೆಗೆ ವರ ಜಹೀರ್ ತಂದೆ ಇಕ್ಬಾಲ್ ರತನ್ಸಿ (Zaheer Iqbal Father) ಸ್ಪಷ್ಟನೆ ನೀಡಿದ್ದಾರೆ. 

sonakshi sinha Will Convert To Islam After marriage Groom Zaheer Iqbal s Father Makes Big Statement mrq
Author
First Published Jun 22, 2024, 6:13 PM IST

ಮುಂಬೈ: ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ (Bollywood Actress Sonakshi Sinha) ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ (Zaheer Iqbal) ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಸೋನಾಕ್ಷಿ ಸಿನ್ಹಾ ಮನೆ ರಾಮಾಯಾಣ ವಿದ್ಯುತ್ ದೀಪಾಲಂಕರದಿಂದ ಕಂಗೊಳಿಸುತ್ತಿದೆ. ಮದುವೆ ದಿನಾಂಕ ಖಾತ್ರಿಯಾಗುತ್ತಿದ್ದಂತೆ ಕೆಲ ನೆಟ್ಟಿಗರು ಹಿಂದೂ ನಟಿಯರು ಮುಸ್ಲಿಂ ನಟರನ್ನು (Muslim Actress) ಮದುಗೆ ಆಗೋದೇಕೆ? ಇದು ಲವ್ ಜಿಹಾದ್ (Love Jihad) ಎಂಬ ಮಾತುಗಳನ್ನಾಡುತ್ತಿದ್ದಾರೆ. ಇತ್ತ ಸೋನಾಕ್ಷಿ ಸಿನ್ಹಾ ತಂದೆ ಮತ್ತು ಸೋದರರು ಪರೋಕ್ಷವಾಗಿಯೇ ಮದುವೆ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಇದೀಗ ಮದುವೆ ಬಳಿಕ ಸೋನಾಕ್ಷಿ ಸಿನ್ಮಾ ಇಸ್ಲಾಂಗೆ ಮತಾಂತರ ಆಗ್ತಾರಾ? ಇದು ಮದುವೆನಾ (Hindu Rituals) ಅಥವಾ ನಿಖಾನಾ (Nikha) ಎಂಬ ಪ್ರಶ್ನೆಗೆ ವರ ಜಹೀರ್ ತಂದೆ ಇಕ್ಬಾಲ್ ರತನ್ಸಿ (Zaheer Iqbal Father) ಸ್ಪಷ್ಟನೆ ನೀಡಿದ್ದಾರೆ. 

ಹಿಂದೂ ಅಥವಾ ಇಸ್ಲಾಂ ಸಂಪ್ರದಾಯದಂತೆ ಇದು ಮದುವೆ ಆಗುತ್ತಿಲ್ಲ. ಇದು ಕಾನೂನುಬದ್ಧವಾಗಿ ನಡೆಯುತ್ತಿರುವ ರಿಜಿಸ್ಟರ್ ಮದುವೆ ಎಂದು ಇಕ್ಬಾಲ್‌  ರತನ್ಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ವೇಳೆ ಇಸ್ಲಾಂಗೆ ಮತಾಂತರ ಆಗ್ತಾರಾ ಎಂಬ ಪ್ರಶ್ನೆಗೂ ಇಕ್ಬಾಲ್ ರತನ್ಸಿ ಉತ್ತರಿಸಿದ್ದಾರೆ.

ಮಾನವೀಯತೆಯನ್ನು ನಂಬುವ ವ್ಯಕ್ತಿ

ಸೋನಾಕ್ಷಿ ಸಿನ್ಹಾ ಮತಾಂತರ ಆಗಲ್ಲ ಅನ್ನೋದು ಸ್ಪಷ್ಟ. ಎರಡು ಹೃದಯಗಳ ಪ್ರೀತಿಗೆ ಧರ್ಮ ಅಡ್ಡಿಯಾಗಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ಹಿಂದೂಗಳು ದೇವರನ್ನು ಭಗವಾನ್, ಮುಸ್ಲಿಮರು ಅಲ್ಲಾಹ ಅಂತ ಕರೆಯುತ್ತಾರೆ. ಕೊನೆಗೆ ನಾವೆಲ್ಲರೂ ಮನುಷ್ಯರು ಅಲ್ಲವೇ. ಜಹೀರ್ ಮತ್ತು ಸೋನಾಕ್ಷಿಗೆ ನನ್ನ ಆಶೀರ್ವಾದ ಇರುತ್ತೆ ಎಂದು ಇಕ್ಬಾಲ್ ರತನ್ಸಿ ಹಾರೈಸಿದರು.

ಮನೆ ಹೆಸರು ರಾಮಾಯಾಣ, ಸೋದರರು ಲವ ಕುಶ- ಸೋನಾಕ್ಷಿ ಮದುವೆ ಆಗ್ತಿರೋ ಯುವಕ ಮುಸ್ಲಿಂ

ಸೋನಾಕ್ಷಿ ಮದುವೆ ಕುರಿತು ತಂದೆ ಶತೃಘ್ನ ಸಿನ್ಹಾ ಗೆಳೆಯ ಶಶಿ ರಂಜನ್ ಮಾಧ್ಯಮವೊಂದರ ಜೊತೆ ಮಾತನಾಡಿದ್ದರು. ತಾನು ಪ್ರೀತಿಸಿದ ಮತ್ತು ತನ್ನನ್ನು ಪ್ರೀತಿಸುತ್ತಿರುವ ವ್ಯಕ್ತಿಯೊಂದಿಗೆ ಸೋನಾಕ್ಷಿ ಮದುವೆ ಆಗುತ್ತಿದ್ದಾಳೆ. ನಾವೆಲ್ಲರೂ ಮದುವೆಯಲ್ಲಿ ಭಾಗಿಯಾಗುತ್ತಿದ್ದೇವೆ. ಶತ್ರುಘ್ನ ಸೋದರರು ಸಹ ಮದುವೆಯಲ್ಲಿ ಭಾಗಿಯಾಗಲು ಬರುತ್ತಿದ್ದಾರೆ. ಜಹೀರ್ ಮನೆಯಲ್ಲಿಯೇ ರಿಜಿಸ್ಟರ್ ಮದುವೆ ನಡೆಯಲಿದೆ ಎಂದು ಹೇಳಿದ್ದರು. 

ಸೋನಾಕ್ಷಿ ಕುಟುಂಬಸ್ಥರು ಹೇಳಿದ್ದೇನು?

ಇದು ತುಂಬಾ ಸಂತಸದ ದಿನವಾಗಿದ್ದು, ನಮ್ಮ ಕುಟುಂಬಗಳು ಬಹುದಿನಗಳ ಒಂದೆಡೆ ಸೇರುತ್ತಿವೆ. ಇದಕ್ಕೆ ಕಾರಣ ಸೋನಾಕ್ಷಿ ಮದುವೆ ಎಂದು ಹೇಳಿಕೊಂಡಿದ್ದರು. ಆದ್ರೆ ಶತ್ರುಘ್ನ ಸಿನ್ಹಾ, ಇಂದಿನ ಮಕ್ಕಳು ತಮ್ಮ ಮದುವೆ ಬಗ್ಗೆ ಪೋಷಕರ ಬಳಿ ಚರ್ಚೆ ನಡೆಸಲ್ಲ ಎಂದು ಹೇಳಿದ್ದರು. ಇತ್ತ ಲವ ಸಿನ್ಹಾ ಮತ್ತು ಕುಶ್ ಸಿನ್ಹಾ, ಈ ಮದುವೆ ಪಾಲುದಾರಿಕೆಯಲ್ಲಿ ನಾವು ಇಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು.

ಮುಸ್ಲಿಂ ನಟನೊಂದಿಗೆ ಸೋನಾಕ್ಷಿ ಸಿನ್ಹಾ ಮದುವೆ, ಅಪ್ಪ ಒಪ್ಪಿದ್ರೂ, ಅವಳಿ ಸಹೋದರರು ಒಪ್ಪಿಲ್ಲವೇ?

ಇದು ನನ್ನ ವೈಯಕ್ತಿಯ ವಿಷಯ ಎಂದ ಸೋನಾಕ್ಷಿ

ಇದು ನನ್ನ ವೈಯಕ್ತಿಕ ವಿಷಯ ಮತ್ತು ನನ್ನದೇ ಆಯ್ಕೆ. ಈ ವಿಷಯದಲ್ಲಿ ಬೇರೆಯವರ ಹಸ್ತಕ್ಷೇಪ ಬೇಕಿಲ್ಲ. ನನ್ನ ಪೋಷಕರಿಗಿಂತ ಜನರು ಯಾಕೆ ಇಷ್ಟು ಕುತೂಹಲ ಹೊಂದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಮದುವೆ ಬಗ್ಗೆ ಪೋಷಕರಿಗಿಂತ ಬೇರೆಯವರೇ ಹೆಚ್ಚು ಕೇಳುತ್ತಾರೆ. ಹಾಗಾಗಿ ಇದು ನನಗೆ ತುಂಬಾ ತಮಾಷೆಯಾಗಿ ಕಾಣುತ್ತದೆ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios