ಬಾಲಿವುಡ್‌ನ ಈ ನಟಿಯಲ್ಲಿ ದಿನದಲ್ಲಿ ಏನಾದ್ರೂ ಚೂರು ತಿನ್ನೋಕೆ 30 ರೂಪಾಯಿಯಷ್ಟೇ ಇರ್ತಿತ್ತಂತೆ. ನೀರು ಕುಡಿಬೇಕಂದ್ರೆ ಮೆಕ್‌ಡೊನಾಲ್ಡ್ಸ್‌ಗೆ ಹೋಗ್ತಿದ್ರಂತೆ ಈ ಬಾಲಿವುಡ್ ಚೆಲುವೆ
ಜೀವನ ಹೇಗೇಗೋ ಇರುತ್ತೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕಷ್ಟದ ದಿನಗಳಿರುತ್ತವೆ. ಪದ್ಮಾವತ್ ಸಿನಿಮಾ ಖ್ಯಾತಿಯ ಬಾಲಿವುಡ್ ನಟಿ ತಿನ್ನೋಕೆ ಹಣವಿಲ್ಲದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಟ ಅನುಪ್ರಿಯಾ ಗೋಯೆಂಕಾ ಅವರಿಗೆ ಗ್ಲಾಮ್ ಜಗತ್ತಿನಲ್ಲಿ ಮುಂದುವರಿಯುವುದು ಸುಲಭದ ಪ್ರಯಾಣವಾಗಿರಲಿಲ್ಲ. ಕಾನ್ಪುರ ಮೂಲದ ನಟಿ-ರೂಪದರ್ಶಿ, ಮನರಂಜನಾ ಉದ್ಯಮದಲ್ಲಿ ಹೆಜ್ಜೆ ಹಾಕುವ ಮೊದಲು ತನ್ನ ತಂದೆ ರವೀಂದ್ರ ಕುಮಾರ್ ಗೋಯೆಂಕಾ ಅವರ ಗಾರ್ಮೆಂಟ್ ಉದ್ಯಮದಲ್ಲಿಸಹಾಯ ಮಾಡುತ್ತಿದ್ದರು.
ನನ್ ಜೊತೆ ಮಲಗು ಎಂದ ಸೌತ್ ಡೈರೆಕ್ಟರ್: ಬಾಲಿವುಡ್ ನಟಿ ಆರೋಪ
ಕೆಲವು ಜಾಹೀರಾತುಗಳಲ್ಲಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ ನಂತರ, ಇದು 2015 ರಲ್ಲಿಸಲಿಂಗಕಾಮಿ ಪಾತ್ರವನ್ನು ಮಾಡಿ ಫೇಮಸ್ ಆದರು. ನಂತರ ಈಕೆ ನಟಿಯಾಗಿ ಮಿಂಚಿದರು.
ನನ್ನ ತಂದೆಗೆ ರಫ್ತು ವ್ಯವಹಾರದಲ್ಲಿ ಸಹಾಯ ಮಾಡುವುದರಿಂದ, ರಾತ್ರಿಯ ಸಮಯದಲ್ಲಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವಾಗ ... ನಾನು ಎಲ್ಲವನ್ನೂ ಮಾಡಿದ್ದೇನೆ. ಕಾಲೇಜು ದಿನಗಳಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದೆ. ಕಾರ್ಪೊರೇಟ್ ಕೆಲಸದಲ್ಲಿ ತೊಡಗಿದೆ. ನಂತರ, ನನ್ನ ಹೆತ್ತವರೊಂದಿಗೆ ಇಲ್ಲಿ ನೆಲೆಸಿದ ನಂತರ ನಾನು ರಂಗಭೂಮಿಯಲ್ಲಿ ತೊಡಗಿಸಿಕೊಂಡೆ ಎಂದಿದ್ದಾರೆ.
ಅಲಿಯಾ ಜೊತೆ ಮದುವೆ: ಬಿಗ್ ಹಿಂಟ್ ಕೊಟ್ಟ ರಣಬೀರ್ ಕಪೂರ್
ನನ್ನ ನಟನಾ ಪಯಣ ಪ್ರಾರಂಭವಾಯಿತು. ನಾನು ನಟಿಸಲು ಪ್ರಾರಂಭಿಸಿದಾಗ, ಸುಮಾರು ಎರಡು ವರ್ಷಗಳ ಕಾಲ ನಾನು ವೃತ್ತಿಪರ ನಟನಾಗಬೇಕೆಂದು ಬಯಸುತ್ತಿರಲಿಲ್ಲ. ನಾನು ಇನ್ನೂ ಉದ್ಯಮದಲ್ಲಿ ಹೆಜ್ಜೆ ಇಡಲು ಪ್ರಯತ್ನಿಸುತ್ತಿದ್ದೆ. ನಾನು ವ್ಯಾಪಾರಿ ಕುಟುಂಬದಿಂದ ಬಂದವಳು, ಶೋಬಿಜ್ ಎಂಬುದು ನಮ್ಮಲ್ಲಿ ಯಾರೂ ಹಿಂದೆಂದೂ ಕಾಣದ ಸಂಗತಿಯಾಗಿತ್ತು. ನಾನು ಇರಬೇಕಾದ ಸ್ಥಳ ಇದು ಎಂದು ತಿಳಿಯಲು ನನಗೆ ಸ್ವಲ್ಪ ಸಮಯ ಹಿಡಿಯಿತು ಎಂದಿದ್ದಾರೆ.
ನನ್ನ ಕೈಯಲ್ಲಿ ಹಣವಿಲ್ಲದ ಸಂದರ್ಭಗಳಿತ್ತು. ಕೆಲವು ದಿನಗಳಲ್ಲಿ, ನಾನು ಆಹಾರಕ್ಕಾಗಿ ಕೇವಲ 30 ರೂ. ಬಾಕಿ ಉಳಿಸಿದ್ದೆ. ನೀರಿನ ಬಾಟಲಿಗಳನ್ನು ತುಂಬಲು ನಾನು ಮೆಕ್‌ಡೊನಾಲ್ಡ್ಸ್‌ಗೆ ಹೋಗುವ ದಿನಗಳು ಇದ್ದವು. ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ ... ಆದಾಯದ ಹಣದ ಕೊರತೆಯಿಂದಾಗಿ ಗೃಹ ಸಾಲವನ್ನು ತೀರಿಸಲು ಸಹ ನನಗೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಅಮ್ಮ ಮಾಡಿದ ಮಂಗಳೂರು ಮೀನು ಸಾರು: ಬಾಲಿವುಡ್ ನಟಿ ಫಿದಾ
ಆದರೆ ನಾನು ಸಾಕಷ್ಟು ಆಸ್ತಿಗಳಲ್ಲಿ ಹೂಡಿಕೆ ಮಾಡಿದ್ದೇನೆ ಮತ್ತು ಅವರಿಂದ ಹಣ ಸಂಪಾದಿಸುವ ಮೂಲಕ ಗೃಹ ಸಾಲವನ್ನು ತೀರಿಸಿದೆ. ಕಷ್ಟಪಟ್ಟು ದುಡಿಯುವುದು ಬದುಕಬಲ್ಲ ಏಕೈಕ ಮಾರ್ಗವಾಗಿದೆ. ನಾನು ಗೌರವದಿಂದ ಸಂಪಾದಿಸಬೇಕು ಮತ್ತು ನನ್ನ ಕುಟುಂಬವನ್ನು ಸಪೋರ್ಟ್ ಮಾಡಬೇಕಿತ್ತು ಎಂಬುದು ನನಗೆ ಸ್ಪಷ್ಟವಾಗಿತ್ತು, ಹೀಗಾಗಿ ದೇವರು ಕೂಡ ನನ್ನನ್ನು ಬೆಂಬಲಿಸಿದ್ದಾನೆ ಎಂದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 24, 2020, 2:05 PM IST