ದೆಹಲಿಯಲ್ಲಿ ಪತ್ರಕರ್ತೆಯ ಕೆಲಸ ಬಿಟ್ಟು ಧಾರವಾಹಿಯಲ್ಲಿ ನಟಿಸಿದ ಟೆಲಿ ನಟಿ ಡೋನಲ್ ಬಿಷ್ಟ್ ಈಗ ಫೇಮಸ್ ನಟಿ. ನಟಿ ಕಿರುತೆರೆ ಮತ್ತು ಸ್ಪೆಷಲ್ ಶೋಗಳ ಮೂಲಕ ಮಿಂಚಿದ್ದಾರೆ. ತಮ್ಮ ಪ್ರತಿಭೆಯಿಂದ ಮೇಲೆ ಬಂದ ನಟಿ ಇದೀಗ ದಕ್ಷಿಣ ಭಾರತದ ನಿರ್ದೇಶಕರ ವಿರುದ್ಧ ಆರೋಪ ಮಾಡಿದ್ದಾಳೆ.

ಆರಂಭದ ದಿನಗಳಲ್ಲಿ ಕೆಲವೊಂದು ಘಟನೆಗಳು ಆಕೆಯನ್ನು ನಿಜಕ್ಕೂ ಭಯಬೀಳಿಸಿತ್ತು ಎಂದಿದ್ದಾರೆ ಡೋನಲ್. ಆದರೆ ಶ್ರಮ ಮತ್ತು ದೃಢವಾಗಿ ನಿಂತಿದ್ದೆ ಎಂದಿದ್ದಾರೆ ಡೋನಲ್.

ಅಲಿಯಾ ಜೊತೆ ಮದುವೆ: ಬಿಗ್ ಹಿಂಟ್ ಕೊಟ್ಟ ರಣಬೀರ್ ಕಪೂರ್

ಒಮ್ಮೆ ನಾನೊಂದು ಶೋಗೆ ಸೆಲೆಕ್ಟ್ ಆಗಿದ್ದೆ. ಸಂಭಾವನೆ, ಡೇಟ್‌ಗಳನ್ನೆಲ್ಲ ಮಾತಾಡಿಯಾಗಿತ್ತು. ಆದರೆ ತಟ್ಟನೆ ನನ್ನನ್ನು ಕೈಬಿಡಲಾಯಿತು. ಚಾನೆಲ್‌ಗೆ ಬೇರೊಬ್ಬ ನಟಿ ಬೇಕಾಗಿತ್ತು. ಆ ಸಂದರ್ಭ ನನಗೂ ನನ್ನ ಕುಟುಂಬಕ್ಕೂ ಇಂಡಸ್ಟ್ರಿ ಜನರೆಷ್ಟು ಸುಳ್ಳು ಎಂಬುದು ಅರಿವಾಗಿತ್ತು. ಮುಂಬೈಯ ಜನ ಸುಳ್ಳು ಮಾತ್ರ ಹೇಳ್ತಾರೆ ಎಂದು ಅರಿವಾಗಿತ್ತು ಎಂದಿದ್ದಾರೆ.

ಒಂದು ಪಾತ್ರಕ್ಕಾಗಿ ತಮ್ಮ ಜೊತೆ ಮಲಗುವಂತೆ ಕೇಳಿದ್ದರು ಸೌತ್ ನಿರ್ದೇಶಕ. ನಾನು ಕೂಡಲೇ ಆ ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದೆ ಎಂದಿದ್ದಾರೆ. ನಂತರ ಮುಂಬೈಗೆ ಬಂದು ಟ್ಯಾಲೆಂಟ್‌ನಿಂದಲೇ ಕೆಲಸ ಪಡ್ಕೊಂಡೆ ಎಂದಿದ್ದಾರೆ ನಟಿ.

ಅಮ್ಮ ಮಾಡಿದ ಮಂಗಳೂರು ಮೀನು ಸಾರು: ಬಾಲಿವುಡ್ ನಟಿ ಫಿದಾ

2015ರ ಶೋ ಏರ್‌ಲೈನ್ಸ್, ಟ್ವಿಸ್ಟ್ ವಾಲಾ ಲವ್‌ನಲ್ಲಿ ನಟಿಸಿದ್ದಾರೆ. ಏಕ್ ದೀವಾನಾ ಥಾ, ಇಷ್ಕ್, ರೂಪ್, ಮರ್ದ್ ಕಾ ನಯಾ ಸ್ವರೂಪ್, ದಿಲ್ ತೋ ಹ್ಯಾಪಿ ಹೇ ಜೀ ಶೋಗಳಲ್ಲಿ ನಟಿಸಿದ್ದಾರೆ.