ಮಂಗಳೂರು ಮೀನು ಖಾದ್ಯಗಳಿಗೆ ಫೇಮಸ್. ಊರು ಬಿಟ್ಟು ಬೇರೆಲ್ಲಿ ನೆಲೆಸಿದರೂ ಜನ ಇಲ್ಲಿನ ಮೀನು ಸಾರು ಮಾತ್ರ ಮರೆಯೋದಿಲ್ಲ. ಸೀ ಫುಡ್‌ಗೆ ಸಿಕ್ಕಾಪಟ್ಟೆ ಫೇಮಸ್ ಈ ಕರಾವಳಿ ಜಿಲ್ಲೆ.

ಬಾಲಿವುಡ್ ನಟಿ ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರು ಎನ್ನುವುದು ಗೊತ್ತು. ನಟಿಗೆ ಮೀನು ಸಾರು ಅಂದ್ರೆ ಸಿಕ್ಕಾಪಟ್ಟೆ ಲವ್ ಅನ್ನೋದು ನಿಮಗೆ ಗೊತ್ತಾ..? ಹೌದು ಪೂಜಾ ನಾನ್‌ವೆಜ್ ತಿಂತಾರೆ.

ಪ್ರಭಾಸ್ 'ರಾಧೆ ಶ್ಯಾಮ್' ಟೀಸರ್ ರಿಲೀಸ್‌; ಬೆಚ್ಚಿಬೆರಗಾದ ನೆಟ್ಟಿಗರು!

ಮೊಹೆಂಜದಾರೋ ಬ್ಯೂಟಿ ಮಣ್ಣಿನ ಪಾತ್ರೆಯಲ್ಲಿ ಬಿಸಿ ಬಿಸಿ ಮೀನಿನ ಸಾರು ಇರೋ ಫೋಟೋ ಹಂಚಿಕೊಂಡಿದ್ದಾರೆ ನಟಿ. ಅಮ್ಮನ ಮ್ಯಾಜಿಕಲ್, ಮಂಗಳೂರು ಮೀನು ಕರಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ.

ಮೊಹೆಂಜದಾರೋ ಸಿನಿಮಾ ಮೂಲಕ ಹಿಟ್ ಆದ ನಟಿ ಟಾಲಿವುಡ್‌ನಲ್ಲಿಯೂ ಹೆಸರು ಮಾಡಿದ್ದಾರೆ. ಅದ್ಯ ರಾಧೇ ಶ್ಯಾಮ್ ಮೂಲಕ ಬಾಹುಬಲಿ ನಟನ ಜೊತೆ ತೆರೆ ಹಮಚಿಕೊಳ್ಳಲಿದ್ದಾರೆ ಪೂಜಾ.