Asianet Suvarna News Asianet Suvarna News

ಉರ್ಫಿ ಜಾವೇದ್​ ನೋಡಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ತಂತೆ ಕಾಗೆ! ಏನಪ್ಪಾ ಈ ವಿಷ್ಯ?

ಆಡು ಮುಟ್ಟದ ಸೊಪ್ಪಿಲ್ಲ, ಉರ್ಫಿ ಜಾವೇದ್​ ಹಾಕದ ಔಟ್​ಫಿಟ್​ ಇಲ್ಲ ಎನ್ನುವಂತೆ ಈಗ ನಟಿ ಕಾಗೆಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ನೋಡಿ. 
 

Social media sensation Urfi Javeds new outfit as crow fans reacts to this suc
Author
First Published Aug 16, 2024, 6:07 PM IST | Last Updated Aug 16, 2024, 6:07 PM IST

ನನ್ನದು ಫ್ಲ್ಯಾಟ್​ ಚೆಸ್ಟ್​ ಎನ್ನುವ ಡಿಜಿಟಲ್​ ಬೋರ್ಡ್​ ಪ್ರದರ್ಶಿಸುವ ಮೂಲಕ ಮತ್ತೊಮ್ಮೆ ವಿಚಿತ್ರ ವೇಷದಲ್ಲಿ ಕಾಣಿಸಿಕೊಂಡಿದ್ದ  ಸೋಷಿಯಲ್​ ಮೀಡಿಯಾ ಸೆನ್ಸ್​ಸೇಷನ್​ ಉರ್ಫಿ ಜಾವೇದ್ ಈಗ ಕಾಗೆಯಾಗಿದ್ದಾರೆ​. ಬಾಲಿವುಡ್​ ನಟಿ ಉರ್ಫಿ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ಅಷ್ಟಕ್ಕಷ್ಟೇ. ಆದರೆ ಈಗ ಸೋಷಿಯಲ್​  ಮೀಡಿಯಾದಲ್ಲಿ ದಿನಕ್ಕೊಂದರಂತೆ ವೇಷ ಧರಿಸಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ವಿಶೇಷತೆ ಎಂದರೆ ಇವರು ಧರಿಸೋ ವೇಷಗಳು ಮತ್ಯಾವ ನಟಿಯರೂ ಧರಿಸಲು ಸಾಧ್ಯವೇ ಇಲ್ಲ!  ಅಷ್ಟಕ್ಕೂ ಉರ್ಫಿ ಜಾವೇದ್​ ಎಂದಾಕ್ಷಣ ಎಲ್ಲರ ಕಣ್ಣೆದುರು ಬರುವುದು ಚಿತ್ರ-ವಿಚಿತ್ರಗಳಿಂದ ಕಂಗೊಳಿಸುವ ನಟಿ. ಬಟ್ಟೆಗಿಂತಲೂ ಹೆಚ್ಚಾಗಿ ಈಕೆ ಮೈಮೇಲೆ ಧರಿಸುವುದು ಭಿನ್ನ -ವಿಭಿನ್ನ ವಸ್ತುಗಳನ್ನೇ. ಕೆಲವೊಮ್ಮೆ ಪ್ಲಾಸ್ಟಿಕ್​, ಮತ್ತೆ ಕೆಲವು ಸಲ ಹೂವು, ಹಣ್ಣು, ತರಕಾರಿ, ಗೋಣಿಚೀಲ... ಹೀಗೆ ಇಂಥವುಗಳಿಂದಲೇ ಖಾಸಗಿ ಅಂಗ ಮುಚ್ಚಿಕೊಂಡು ಪೋಸ್​ ಕೊಡುತ್ತಾರೆ. ಕೆಲ ದಿನಗಳ ಹಿಂದೆ ನಟಿ ಉರ್ಫಿ ಜಾವೇದ್​ ಬಟ್ಟೆಯಲ್ಲಿ ಬ್ರಹ್ಮಾಂಡ ತೋರಿಸಿದ್ದರು. ಬಳಿ ಎದೆ ಭಾಗದಲ್ಲಿ  ಎರಡು ಫ್ಯಾನ್​ ಸಿಕ್ಕಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬಟ್ಟೆಯಲ್ಲಿನ ಬ್ರಹ್ಮಾಂಡದಲ್ಲಿ ಹಲವು ವಿಷಯಗಳನ್ನು ಅವರು ತೋರಿಸಿದ್ದರೆ, ಎದೆ ಮೇಲೆ ಹಾಕಿಕೊಂಡಿದ್ದ ಫ್ಯಾನ್ಸ್​ ತಿರುಗುತ್ತಿತ್ತು. 

ಈಗ ಕಾಗೆ ಡ್ರೆಸ್​ ಧರಿಸಿ ಪಾಪರಾಜಿಗಳಿಗೆ ಪೋಸ್​ ಕೊಟ್ಟಿದ್ದಾರೆ. ಬೇಗ ಹಾರಿಹೋಗಿ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಮತ್ತೆ ಕೆಲವರು ಬಿಳಿ ಕಾಗೆ ಎಂದು ಹೇಳಿದರೆ, ಇನ್ನು ಕೆಲವರು ಕಾಗೆ ಆತ್ಮಹತ್ಯೆ ಮಾಡಿಕೊಳ್ಳುತ್ತದೆ ನಿಮ್ಮನ್ನು ನೋಡಿ ಎಂದು ನಟಿಯ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ನಿಜವಾಗಿಯೂ ಕಾಗೆಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡವು ಎಂದು ಬರೆದಿದ್ದಾರೆ. ಮತ್ತೆ ಕೆಲವರು ಕಾಗೆಗಳ ಸತ್ತಿರೋ ಫೋಟೋಗಳನ್ನೂ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ನಟಿಯನ್ನು ಎಷ್ಟು ಸಾಧ್ಯವೋ ಅಷ್ಟು ಟ್ರೋಲ್​  ಮಾಡಲಾಗುತ್ತಿದೆ. ಆದರೆ ಇದಕ್ಕೆ ಉರ್ಫಿ ಮಾತ್ರ ಗಪ್​ಚುಪ್​. ಈಕೆಯನ್ನು ನೋಡಿದವರು ಮಾತ್ರ ಉಫ್​ ಅಂತಿದ್ದಾರೆ ಅಷ್ಟೇ. 

ಫ್ಲ್ಯಾಟ್ ಚೆಸ್ಟ್​ ಎನ್ನುವುದನ್ನು ಹೀಗೆ ಬಿಂಬಿಸೋದಾ ಉರ್ಫಿ? ಎದೆಯ ಮೇಲೆಯೇ ಡಿಜಿಟಲ್​ ಬೋರ್ಡ್​!

ನೀವು ಇನ್ನೂ ಹಾಕಿಕೊಳ್ಳದೇ  ಇರುವ ಡ್ರೆಸ್​ ಯಾವುದು ಎಂದು ಪ್ರಶ್ನೆಗೆ ಉರ್ಫಿ, ಅಂಥದ್ದೊಂದು ವಸ್ತು ಯಾವುದಾದ್ರೂ ಇದೆಯೇ ಎಂದು ಪ್ರಶ್ನಿಸಿದ್ದರು. ಅಷ್ಟರ ಮಟ್ಟಿಗೆ ಅವರು ಇದ್ದ ಬಿದ್ದ ಎಲ್ಲಾ ವಸ್ತುಗಳಿಂದಲೂ ಉಡುಗೆ-ತೊಡುಗೆ ಮಾಡಿಕೊಂಡಾಗಿದೆ. ಕೆಲ ದಿನಗಳ ಹಿಂದೆ,  ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು.  ಇದರ ವಿಡಿಯೋ ಸಕತ್​ ವೈರಲ್​ ಆಗಿದ್ದು,  ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕಿದ್ದರು.  ನಟಿ ಬಟ್ಟೆಯ ಮೇಲೆ ಹೂವು, ಎಲೆಗಳನ್ನು ಇರಿಸಿಕೊಂಡು, ಅದು ಮ್ಯಾಜಿಕ್​ ರೀತಿಯಲ್ಲಿ ಉದುರುವ ಹಾಗೆ ಮಾಡಿದ್ದಂತೂ ನೋಡಿ  ಉರ್ಫಿ ಜಾವೇದ್​ ಫ್ಯಾನ್ಸ್​ ಫಿದಾ ಆಗಿದ್ದು, ನಿಮಗೆ ನೀವೇ ಸಾಟಿ ಎಂದರು.

ಆದರೆ ಈಕೆ ಕೆಲ ದಿನಗಳ ಹಿಂದೆ ಸಕತ್​ ಸದ್ದು ಮಾಡಿದ್ದು, ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಈಗ ಖುದ್ದು ನಶೆ ಏರಿಸಿಕೊಂಡು ತೂರಾಡುತ್ತಾ ಬಂದಾಗ.  ನಟಿ ತೂರಾಡುತ್ತಾ ಬಂದಾಗ ಅವರನ್ನು ಕೆಲವರು ಹಿಡಿದುಕೊಂಡಿದ್ದರು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ, ಇದೇ  ನಶೆಯಲ್ಲಿ ನಟಿ ಕಾರನ್ನೇರಿ ಕುಳಿತಿದ್ದರು. ಅಲ್ಲಿ ಒಂದಿಷ್ಟು ಜನರು ಮುತ್ತಿಗೆ ಹಾಕಿದ್ದರು. ಅವರಿಗೆ  ಕೊಡುವ ಸಲುವಾಗಿ ನಟಿ ಕೈಯಲ್ಲಿ ದುಡ್ಡು ಹಿಡಿದುಕೊಂಡದ್ದೇ ಇದಕ್ಕೆಲ್ಲಾ ಕಾರಣವಾಗಿದೆ.  ಅಲ್ಲಿ ಮುತ್ತಿಗೆ ಹಾಕಿದ ಮಕ್ಕಳು ಸೇರಿದಂತೆ ದೊಡ್ಡವರು ಕೂಡ  ಉರ್ಫಿಯ ಮೈಯೆಲ್ಲಾ ಮುಟ್ಟಿದ್ದಾರೆ. ಮೂಗಿಗೆ ಏಟು ಕೂಡ ಬಿದ್ದದೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಅಲ್ಲಿಂದ ಓಡಿಸುವಲ್ಲಿ ಸುಸ್ತಾಗಿ ಹೋಗಿದ್ದರು.

ಒಳಗೆ ಸೇರಿದರೆ ಗುಂಡು... ಮತ್ತಿನಲ್ಲಿದ್ದ ಉರ್ಫಿಯ ಮೈಯೆಲ್ಲಾ ಮುಟ್ಟಿ ಸುಸ್ತು ಮಾಡಿದ್ರು! ವಿಡಿಯೋ ವೈರಲ್​

Latest Videos
Follow Us:
Download App:
  • android
  • ios