Asianet Suvarna News Asianet Suvarna News

ವರದಕ್ಷಿಣೆ ತಗೊಂಡಿದ್ರಾ ಅಲ್ಲು ಅರ್ಜುನ್‌; ಬನ್ನಿ ಪತ್ನಿ ಸ್ನೇಹಾ ರೆಡ್ಡಿ ತಂದೆ ಹೇಳಿದ್ದೇನು?

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್(Allu Arjun) ವರದಕ್ಷಿಣೆ(dowry) ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪುಷ್ಪ(Pushpa) ಸಿನಿಮಾದ ಸಕ್ಸಸ್ ಮೂಲಕ ಸ್ಟೈಲಿಶ್ ಸ್ಟಾರ್ ಪ್ಯಾನ್ ಇಂಡಿಯಾ(pan India) ಹೀರೋ ಆಗಿ ಮಿಂಚುತ್ತಿದ್ದಾರೆ. ಪುಷ್ಪ ಮೂಲಕ ದೇಶದಾದ್ಯಂತ ಗಮನ ಸೆಳೆಯುತ್ತಿರುವ ಅಲ್ಲು ಅರ್ಜುನ್, ವರದಕ್ಷಿಣೆ ವಿಚಾರ ವೈರಲ್ ಆಗಿದೆೆ.

Sneha Reddy father Chandrasekhar talks about Allu Arjun marriage dowry sgk
Author
Bengaluru, First Published May 22, 2022, 12:30 PM IST

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್(Allu Arjun) ವರದಕ್ಷಿಣೆ(dowry) ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪುಷ್ಪ(Pushpa) ಸಿನಿಮಾದ ಸಕ್ಸಸ್ ಮೂಲಕ ಸ್ಟೈಲಿಶ್ ಸ್ಟಾರ್ ಪ್ಯಾನ್ ಇಂಡಿಯಾ(pan India) ಹೀರೋ ಆಗಿ ಮಿಂಚುತ್ತಿದ್ದಾರೆ. ಪುಷ್ಪ ಮೂಲಕ ದೇಶದಾದ್ಯಂತ ಗಮನ ಸೆಳೆಯುತ್ತಿರುವ ಅಲ್ಲು ಅರ್ಜುನ್, ವರದಕ್ಷಿಣೆ ವಿಚಾರ ವೈರಲ್ ಆಗಿದೆೆ. ಈ ಸುದ್ದಿ ಈಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇತ್ತೀಚಿಗಷ್ಟೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ತಂದೆ ಚಂದ್ರಶೇಖರ್ ರೆಡ್ಡಿ(Chandrashekar Reddy), ಅಲ್ಲು ಅರ್ಜುನ್ ಮತ್ತು ಮಗಳ ಮದುವೆಯ ವರದಕ್ಷಿಣೆ ಬಗ್ಗೆ ಅಚ್ಚರಿ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಚಂದ್ರಶೇಖರ್, 'ಅಳಿಯ ಬನ್ನಿಗೆ 100ಕ್ಕೆ 100 ಅಂಕ ಕೊಡುತ್ತೇನೆ. ಅವರು ತೆಲುಗು ಮಾತ್ರವಲ್ಲದೇ ಇತರೆ ರಾಜ್ಯಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಜಮ್ಮು- ಕಾಶ್ಮೀರದಲ್ಲೂ ಅಲ್ಲು ಅರ್ಜುನ್ ಸಿನಿಮಾದ ಹಾಡುಗಳನ್ನು ಕೇಳುತ್ತಾರೆ. ಇದು ಕಠಿಣ ಶ್ರಮದಿಂದ ಮಾತ್ರ ಸಾಧ್ಯ' ಎಂದು ಹಾಡಿ ಹೊಗಳಿದರು.

ಇದೇ ಸಮಯದಲ್ಲಿ ಮದುವೆಯಲ್ಲಿ ಅಲ್ಲು ಅರ್ಜುನ್ ವರದಕ್ಷಿಣೆ ಪಡೆದಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಚಂದ್ರಶೇಖರ್ ನೋ ಎಂದಿದ್ದಾರೆ. 'ಯಾವುದೇ ವರದಕ್ಷಿಣೆ ಪಡೆದಿಲ್ಲ. ಅಲ್ಲು ಕುಟುಂಬ ವರದಕ್ಷಿಣೆ ವಿರುದ್ಧವಾಗಿದೆ. ಅವರು ಅವರದ್ದೇ ಆದ ಸಾಕಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ. ನಾವು ಅವರಿಗೆ ಕೊಡುವುದು ದೊಡ್ಡ ವಿಷಯ ಎಂದು ನಾನು ಭಾವಿಸುವುದಿಲ್ಲ' ಎಂದು ಹೇಳಿದ್ದಾರೆ.

ಚಂದ್ರಶೇಖರ್ ಅವರ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ಅಲ್ಲು ಅರ್ಜುನ್‌ಗ ಮೆಚ್ಚುಗೆಯ ಕಾಮೆಂಟ್ ಹರಿದು ಬರುತ್ತಿದೆ. ಅಭಿಮಾನಿಗಳು ಈ ವಿಡಿಯೋ ವೈರಲ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. 

ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್: ಕೆಜಿಎಫ್ 2ನಿಂದ ಪುಷ್ಪ 2 ಚಿತ್ರಕ್ಕೆ ಸಿಕ್ತು ಬಂಪರ್ ಆಫರ್!

ಅಲ್ಲು ಅರ್ಜುನ್ ಒಂದು ದಶಕದ ಹಿಂದೆ ತನ್ನ ಸ್ನೇಹಿತನ ಮದುವೆಗೆಂದ ಯು ಎಸ್‌ಗೆ ತೆರಳಿದ್ದರು. ಅಲ್ಲಿ ಅವರು ತಮ್ಮ ಜೀವನದ ಪ್ರೀತಿ ಸ್ನೇಹಾ ರೆಡ್ಡಿಯನ್ನು ಮೊದಲು ಭೇಟಿಯಾದರು. ಸ್ನೇಹಿತ ಅಲ್ಲು ಅರ್ಜುನ್ ಅವರಿಗೆ ಸ್ನೇಹಾ ಅವರನ್ನು ಪರಿಚಯ ಮಾಡಿಕೊಟ್ಟರು. ಲವ್ ಅಟ್ ಫಸ್ಟ್ ಸೈಟ್ ಎನ್ನುವ ಹಾಗೆ ಅಲ್ಲು ಅರ್ಜುನ್ ಮೊದಲ ನೋಟದಲ್ಲೇ ಸ್ನೇಹಾ ರೆಡ್ಡಿ ಮೇಲೆ ಪ್ರೀತಿಯಲ್ಲಿ ಬಿದ್ದರು. ಬಳಿಕ ಇಬ್ಬರು ಪ್ರೀತಿಸಲು ಪ್ರಾರಂಭಿಸಿದರು. ನಂತರ ಮನೆಯವರ ಒಪ್ಪಿಗೆ ಪಡೆದು ಮಾರ್ಚ್ 6, 2011ರಲ್ಲಿ ಇಬ್ಬರು ಹಸೆಮಣೆ ಏರಿದರು.

ಅಲ್ಲು ಅರ್ಜುನ್ ಸಿನಿಮಾಗೆ ಭಾರಿ ಬೇಡಿಕೆ; OTT ರೈಟ್ಸ್‌ಗಾಗಿ ಇಬ್ಬರ ನಡುವೆ ಬಿಗ್ ಫೈಟ್

ಅಲ್ಲು ಅರ್ಜುನ್ ಸದ್ಯ ಪುಷ್ಪ-2 ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಪುಷ್ಪ ಸಿನಿಮಾದ ಸಕ್ಸಸ್ ಅಲ್ಲು ಅರ್ಜುನ್ ಅವರಿಗೆ ಪಾರ್ಟ್-2 ಮಾಡಲು ಮತ್ತಷ್ಟು ಉತ್ಸಾಹ ತಂದಿದೆ. ಅಂದಹಾಗೆ ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಮೊದಲ ಪ್ಯಾನ್ ಇಂಡಿಯಾ ಚಿತ್ರದಲ್ಲೇ ಅಲ್ಲು ಅರ್ಜುನ್ ಅವರಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಇದೀಗ ಪಾರ್ಟ್-2 ಸಿದ್ಧವಾಗುತ್ತಿದ್ದು ಸದ್ಯದಲ್ಲೇ ಚಿತ್ರೀಕರಣರಣಕ್ಕೆ ಹೊರಡುತ್ತಿದ್ದಾರೆ.

 

Latest Videos
Follow Us:
Download App:
  • android
  • ios