ಕೇಂದ್ರ ಸಚಿವ ಸ್ಮೃತಿ ಇರಾನಿ ತಮ್ಮ ಪತಿ ಝುಬಿನ್ ಇರಾನಿ ಅವರ ಮಾರ್ಚ್ 20 ರಂದು ತಮ್ಮ 20 ನೇ ವಿವಾಹ ವಾರ್ಷಿಕೋತ್ಸವದ ನೆನಪಿಗಾಗಿ ಇನ್ಸ್ಟಾಗ್ರಾಮ್ನಲ್ಲಿ ಹೃದಯಸ್ಪರ್ಶಿ ಪೋಸ್ಟ್ ಶೇರ್ ಮಾಡಿದ್ದಾರೆ.

ತನ್ನ ಪೋಸ್ಟ್‌ನಲ್ಲಿ ಸ್ಮೃತಿ ಇರಾನಿ ಅವರು ತಮ್ಮ ಸ್ಮರಣೀಯ ಫೋಟೋಗಳನ್ನು ಒಳಗೊಂಡ ವೀಡಿಯೊವನ್ನು ಶೇರ್ ಮಾಡಿದ್ದಾರೆ. 20 ವರ್ಷಗಳಲ್ಲಿ ತಮ್ಮ ಲೈಫ್‌ ಜರ್ನಿಯ ಫೋಟೋಗಳನ್ನು ಸೆರೆಹಿಡಿದಿದ್ದಾರೆ.

ಫ್ರೆಂಡ್‌ ಪತಿಯನ್ನೇ ಮದುವೆಯಾಗಿರುವ ಸ್ಮೃತಿ ಇರಾನಿ ಲವ್‌ ಸ್ಟೋರಿ!

ಚಿಕ್ಕ ಕ್ಲಿಪ್‌ನಲ್ಲಿ ಝುಬಿನ್ ಇರಾನಿ ನೃತ್ಯದ ವೀಡಿಯೊಗಳು ಖುಷಿಯ ವಿಡಿಯೋಗಳು ಇದ್ದವು. ಕೆಲವು ಚಿತ್ರಗಳಲ್ಲಿ ಝುಬಿನ್ ಮತ್ತು ಸ್ಮೃತಿಯ ಮಕ್ಕಳು - ಜೊಹ್ರ್, ಜೊಯಿಶ್ ಮತ್ತು ಶಾನೆಲ್ ಕೂಡ ಇದ್ದರು.

20 ವರ್ಷಗಳ ಸ್ನೇಹ. ಸಾಹಸಗಳು.. ನನ್ನೊಂದಿಗೆ ಸುಲಭವಾಗಿ ಬದುಕುವುದು ಕಷ್ಟ. ನಾನು ಸಾಧಾರಣ ಗೃಹಿಣಿಯಲ್ಲ. ನನ್ಯಾವಾಗಲೂ ಕನಸಿನ ಹಿಂದೆ ಓಡುತ್ತಿದ್ದೆ, ನಾನು ಫಿಲ್ಮಿ ನೀವು ಕ್ಲಾಸಿ.. ಎಲ್ಲದರಲ್ಲೂ ತದ್ವಿರುದ್ಧವಾಗಿರುವ ನಾವು ಎರಡು ದಶಕಗಳಿಂದ ಪರಸ್ಪರ ಆಕರ್ಷಿತರಾಗುತ್ತಲೇ ಇದ್ದೇವೆ ಎಂದಿದ್ದಾರೆ.