ಫ್ರೆಂಡ್ ಪತಿಯನ್ನೇ ಮದುವೆಯಾಗಿರುವ ಸ್ಮೃತಿ ಇರಾನಿ ಲವ್ ಸ್ಟೋರಿ!
ಕೇಂದ್ರ ಸಂಪುಟ ಸಚಿವೆ ಹಾಗೂ ಕಿರುತೆರೆ ನಟಿ ಸ್ಮೃತಿ ಇರಾನಿಗೆ 45ರ ಸಂಭ್ರಮ. ಮಾರ್ಚ್ 23, 1976ರಂದು ದೆಹಲಿಯಲ್ಲಿ ಜನಿಸಿದ ಸ್ಮೃತಿ ನಟನಾ ಪ್ರಪಂಚದಿಂದ ರಾಜಕೀಯದವರೆಗೆ ಹೆಸರು ಮಾಡಿದ್ದಾರೆ. ಸ್ಮೃತಿ ಮಲ್ಹೋತ್ರಾ 16 ವರ್ಷದವರಿದ್ದಾಗ ಕ್ರೀಡೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು ಮತ್ತು ನಂತರ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ಮುಂಬೈಗೆ ಹೋದರು. ಸ್ವಲ್ಪ ಸಮಯದ ನಂತರ, ಮಿಸ್ ಇಂಡಿಯಾ ಸ್ಪರ್ಧೆಗೆ ಸ್ಮೃತಿ ಆಯ್ಕೆಯಾದರು, ಇದರಲ್ಲಿ ಅವರು ಟಾಪ್ 5ರಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿಂದಲೇ ಅವರ ಮಾಡೆಲಿಂಗ್ ಕೆರಿಯರ್ ಪ್ರಾರಂಭವಾಯಿತು.ರಾಜಕೀಯ ಪ್ರವೇಶಿಸಿ, ಅದೃಷ್ಟ ಪರೀಕ್ಷಿಸಿಕೊಂಡು ನಟಿ, ಅಲ್ಲಿಯೂ ಯಶಸ್ವಿಯಾಗಿದ್ದು ಮಾತ್ರ ವಿಶೇಷ. ಇವರ ಬಗ್ಗೆ ಒಂದಿಷ್ಟು...
1998ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಸ್ಮೃತಿ ಕುಟುಂಬಕ್ಕೇ ತಿಳಿದಿರಲಿಲ್ಲ. ಅವರ ಲುಕ್ ಯಾವುದೇ ಮಾಡೆಲ್‌ಗೆ ಮ್ಯಾಚ್ ಆಗದ ಕಾರಣ ಸ್ಪರ್ಧೆಗೆ ಶಾರ್ಟ್-ಲಿಸ್ಟ್ ಆದಾಗ ತುಂಬಾ ಆಶ್ಚರ್ಯವಾಗಿತ್ತು. ನಂತರ ಫೈನಲ್‌ಗಾಗಿ ಮುಂಬೈಗೆ ಬಂದರು ಎಂಬ ವಿಷಯವನ್ನು ಸ್ಮೃತಿ ಇಂಟರ್‌ವ್ಯೂವ್‌ವೊಂದರಲ್ಲಿ ಹೇಳಿಕೊಂಡಿದ್ದರು.
'ನಾನು ಇಂಥ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ತಂದೆ ಇಷ್ಟಪಟ್ಟಿರಲಿಲ್ಲ. ಆದರೆ ಅವರ ಬಳಿಯೇ 2ಲಕ್ಷ ರೂ. ಸಾಲ ಪಡೆದು ಮುಂಬೈ ತಲುಪಿ ಫೈನಲ್‌ಗೆ ತಯಾರಿ ಆರಂಭಿಸಿದ್ದರು. ಸ್ಪರ್ಧೆಗಾಗಿ ಮನೀಷ್ ಮಲ್ಹೋತ್ರಾರ ಡ್ರೆಸ್, ತರಬೇತಿ, ಊಟ, ಟ್ಯಾಕ್ಸಿ ಬಾಡಿಗೆ ಹಾಗೂ ಬೇರೆ ಇತರೆ ಖರ್ಚುಗಳು ಹೆಚ್ಚುತ್ತಲೇ ಇದ್ದವು. ಕೊನೆಯ ಸುತ್ತಿಗೆ ಬಂದರೂ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ,' ಎಂದು ಹೇಳಿದ್ದರು
ಇದರ ನಂತರ, ಸ್ಮೃತಿ ಹಣ ಸಂಪಾದಿಸಲು ರೆಸ್ಟೋರೆಂಟ್‌ನಲ್ಲಿ ನೆಲವನ್ನು ಸ್ವಚ್ಛ ಗೊಳಿಸುವ ಕೆಲಸ ಮಾಡಿದರು. ಆಗ ಮೋನಾ ಇರಾನಿ ಎಂಬ ಶ್ರೀಮಂತ ಪಾರ್ಸಿ ಹುಡುಗಿಯನ್ನು ಭೇಟಿಯಾದರು. ಇಬ್ಬರೂ ಸ್ನೇಹಿತರಾದರು. ಇದರ ನಂತರ ಮೋನಾ ಸ್ಮೃತಿಗೆ ತಮ್ಮ ಮನೆಯಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು.
ಇದರ ನಡುವೆ ಸ್ಮೃತಿ ಹಾಗೂ ಮೋನರ ಪತಿ ಜುಬಿನ್ ಇರಾನಿ ಜೊತೆ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತು. ಸ್ಮೃತಿ ಟಿವಿ
ಶೋನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಅವರು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು
ನಂತರ ಇಬ್ಬರು ಮೋನಾ ಹಾಗೂ ಜುಬಿನ್ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು. ಜುಬಿನ್ ಮಾರ್ಚ್ 2001ರಲ್ಲಿ ಸ್ಮೃತಿಯನ್ನು ವಿವಾಹವಾದರು.
ಅದೇ ವರ್ಷ 2001ರಲ್ಲಿ ಮಗ ಜೋಹರ್ ಜನಿಸಿದರೆ, ಎರಡು ವರ್ಷಗಳ ನಂತರ, 2003ರಲ್ಲಿ, ಸ್ಮೃತಿ ಮಗಳು ಜೋಯಿಶ್‌ಗೆ ತಾಯಿಯಾದರು.
'ನಾನು ಜುಬಿನ್ ಅವರನ್ನು ಮದುವೆಯಾಗಿದ್ದೆ, ಏಕೆಂದರೆ ನನಗೆ ಅವನ ಅಗತ್ಯವಿತ್ತು. ನಾವು ಮಾತನಾಡುತ್ತಿದ್ದೆವು, ನಾವು ಪ್ರತಿದಿನ ಭೇಟಿಯಾಗುತ್ತಿದ್ದೆವು. ಆದ್ದರಿಂದ ನಾವು ಯಾಕೆ ಮದುವೆಯಾಗಿ ಒಳ್ಳೆಯ ದಂಪತಿಗಳಾಗಬಾರದು ಎಂದು ಯೋಚಿಸಿದೆವು. ನಮ್ಮ ಇಬ್ಬರ ಫ್ಯಾಮಿಲಿ ಮದುವೆಗೆ ಖುಷಿಯಿಂದ ಒಪ್ಪಿ ಆಶೀರ್ವಾದ ನೀಡಿದರು,' ಎಂದು ಸಂದರ್ಶನವೊಂದಲ್ಲಿ ಹೇಳಿದ್ದರು
'ನಾನು ಎಂದಿಗೂ ನನ್ನ ಕುಟುಂಬದ ವಿರುದ್ಧ ಮದುವೆಯಾಗಲು ಮದುವೆಯಾಗಲು ಇಷ್ಟಪಟ್ಟಿರಲಿಲ್ಲ. ಏಕೆಂದರೆ ಯಾವುದೇ ಕಪಲ್ ತಮ್ಮ ಕುಟುಂಬವನ್ನು ನೋಯಿಸಿ ಮದುವೆಯಾಗುವುದರಿಂದ ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ನಾನು ಯಾವಾಗಲೂ ನಂಬಿದ್ದೆ. ಜುಬಿನ್ ನನ್ನೊಂದಿಗಿದ್ದಾನೆ ಎಂದು ನನಗೆ ತುಂಬಾ ಸಂತೋಷವಾಗಿದೆ, ಅವನು ನನಗೆ ಶಕ್ತಿಯಂತೆ' ಎಂದಿದ್ದಾರೆ ಇರಾನಿ.
'ಜುಬಿನ್ ಮೊದಲ ಪತ್ನಿ ಮೋನಾ ಮತ್ತು ಮಗಳು ಶನೆಲ್ ಅವರೊಂದಿಗೆ ನನಗೆ ಉತ್ತಮ ಸ್ನೇಹವಿದೆ. ಅವರ ನಡುವಿನ ಅಂತರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಜುಬಿನ್ ಮತ್ತು ನನ್ನ ಮಕ್ಕಳು ಮಾತ್ರ ನನಗೆ ಸಂಬಂಧಿಸಿದ್ದು,' ಎಂದು ಹೇಳಿದ್ದರು ಸ್ಮೃತಿ ಇರಾನಿ.