Asianet Suvarna News Asianet Suvarna News

ಅಯೋಧ್ಯೆ: ರಾಮಜನ್ಮಭೂಮಿಗೆ ಭೇಟಿ ನೀಡಿದ ರಾಮಾಯಣದ ಸೀತೆ ದೀಪಿಕಾ

ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿ ಇಡೀ ದೇಶದ ಮನಸೂರೆಗೊಂಡಿದ್ದ ರಮಾನಂದ್‌ ಸಾಗರ್‌ ಅವರ ರಾಮಾಯಣ ಧಾರಾವಾಹಿಯ ಸೀತೆಯ ಪಾತ್ರಧಾರಿ ದೀಪಿಕಾ ಚಿಖಾಲಿಯಾ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದರು.

Sita visited Ayodhya Ramayan serial Fame Actress Deepika Chikhalia visited Sri rams birthplace Ayodhya akb
Author
First Published Jul 24, 2023, 12:37 PM IST

ಅಯೋಧ್ಯೆ: ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿ ಇಡೀ ದೇಶದ ಮನಸೂರೆಗೊಂಡಿದ್ದ ರಮಾನಂದ್‌ ಸಾಗರ್‌ ಅವರ ರಾಮಾಯಣ ಧಾರಾವಾಹಿಯ ಸೀತೆಯ ಪಾತ್ರಧಾರಿ ದೀಪಿಕಾ ಚಿಖಾಲಿಯಾ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದರು. ಈ ವೇಳೆ ಅವರು ಅಲ್ಲಿನ ರಾಮಲಲ್ಲಾನ ದರ್ಶನ ಪಡೆದರು. ವಿಶೇಷವೆಂದರೆ ದೀಪಿಕಾ ಅಯೋಧ್ಯೆಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿ. ಭೇಟಿ ವೇಳೆ ರಾಮಲಲ್ಲಾ ವಿಗ್ರಹಕ್ಕೆ ಪ್ರಾರ್ಥನೆ ಸಲ್ಲಿಸಿ ದೇಗುಲ ಕಾಮಗಾರಿಯನ್ನು ವೀಕ್ಷಿಸಿದ ದೀಪಿಕಾ, ಕಾಮಗಾರಿ ಪೂರ್ಣವಾದ ಬಳಿಕ ಮತ್ತೆ ಬರುವುದಾಗಿ ತಿಳಿಸಿದರು. ಇವರನ್ನು ಕಂಡ ಜನರು ಅವರಿಗೆ ಹೂವಿನ ಹಾರ ಹಾಕಿ, ಆಶೀರ್ವಾದ ಪಡೆಯಲು ಕಾಲಿಗೆರಗಿದರು. ದೀಪಿಕಾ ತಮ್ಮ ಮುಂದಿನ ಕಾರ್ಯಕ್ರಮ ‘ಧರ್ತಿಪುತ್ರ ನಂದಿನಿ’ ಶೂಟಿಂಗ್‌ ನಿಮಿತ್ತ ಅಯೋಧ್ಯೆಗೆ ಆಗಮಿಸಿದ್ದರು.

ಅಯೋಧ್ಯೆ ರಾಮ ವಿಗ್ರಹ ಪ್ರತಿಷ್ಟಾಪನೆ ವೀಕ್ಷಣೆಗೆ ಈಗಲೇ ಹೋಟೆಲ್‌ ಬುಕ್‌

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಗೆ ಇನ್ನೂ 6 ತಿಂಗಳು ಬಾಕಿ ಇರುವಾಗಲೇ ಸಮಾರಂಭದಲ್ಲಿ ಭಾಗಿಯಾಗಲು ಜನರು ನಗರದ ಹೋಟೆಲ್‌ ಮತ್ತು ಟ್ರಾವೆಲ್‌ ಏಜೆನ್ಸಿಗಳಲ್ಲಿ ಮುಂಗಡವಾಗಿ ಬುಕಿಂಗ್‌ ಶುರು ಮಾಡಿದ್ದಾರೆ. ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೊಠಡಿ ಮತ್ತು ಬಸ್‌ಗಳು ಸೇರಿದಂತೆ ಹಲವೆಡೆ ಈಗಾಗಲೇ ಜನರು ಭಾರೀ ಪ್ರಮಾಣದಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಜ.15 ರಿಂದ 24ರೊಳಗೆ ವಿಗ್ರಹ ಪ್ರತಿಷ್ಠಾಪಿಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆಯಾದರೂ ನಿಖರ ದಿನಾಂಕ ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ.

ಅಯೋಧ್ಯೆ ಜಿಲ್ಲಾಧಿಕಾರಿ ಗೌರವ್‌ ದಯಾಳ್‌ ಅತಿಥಿಗಳಿಗೆ ಉತ್ತಮ ಸ್ವಾಗತ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರ ಸಭೆ ಕರೆದಿದ್ದ ವೇಳೆ ಈ ಬಗ್ಗೆ ತಿಳಿಸಿರುವ ಮಾಲೀಕರು ‘ಕೆಲವರು 10 ರಿಂದ 12 ದಿನಗಳ ಕಾಲ ದಿನಗಳವರೆಗೆ ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದಾರೆ. ದೆಹಲಿ, ಬಾಂಬೆ ಮತ್ತು ಇತರ ಪ್ರಮುಖ ನಗರಗಳಿಂದ ಕರೆ ಬರುತ್ತಿವೆ’ ಎಂದಿದ್ದಾರೆ.

RAMAYANA: 36 ವರ್ಷಗಳ ಬಳಿಕ ರಾಮ ಸೀತೆ ಮತ್ತೆ ಜೊತೆ ಜೊತೆಯಲಿ...

ನಿಷೇಧದ ನಡುವೆಯೂ ದೇವರ ಫೋಟೋ ತೆಗೆದ ಭಕ್ತನಿಗೆ ದಂಡ

ಕೇದಾರನಾಥ: ಚಿತ್ರಗಳನ್ನು ತೆಗೆಯಲು ನಿಷೇಧ ಇದ್ದರೂ ಭಕ್ತನೊಬ್ಬ ಇಲ್ಲಿನ ದೇಗುಲದ ಗರ್ಭಗುಡಿಯಲ್ಲಿ ಶಿವಲಿಂಗದ ಚಿತ್ರವನ್ನು ಸೆರೆಹಿಡಿದಿದ್ದಾನೆ. ಶುಕ್ರವಾರ ಧರ್ಮ ಪ್ರಚಾರಕ ಮೊರಾರಿ ಬಾಪು ಅವರು ದೇಗುಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗರ್ಭಗುಡಿಯಲ್ಲಿದ್ದ ಭಕ್ತನೊಬ್ಬ ಬಾಪು ಅವರನ್ನು ಕಂಡು, ಅವರು ದೇವರಿಗೆ ನಮಿಸುತ್ತಿರುವ ಚಿತ್ರವನ್ನು ಸೆರೆಹಿಡಿದಿದ್ದ. ಈ ಚಿತ್ರವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದಾದ ಬಳಿಕ ದೇಗುಲದ ಆಡಳಿತ ಮಂಡಳಿ ಸಿಸಿಟೀವಿ ದೃಶ್ಯಾವಳಿಯನ್ನು ಆಧರಿಸಿ ಭಕ್ತನನ್ನು ಹಿಡಿದಿದ್ದಾರೆ. ಭಕ್ತ ಸಿಬ್ಬಂದಿಗೆ ಬೆದರಿ ಕ್ಷಮಾಪನೆ ಪತ್ರವನ್ನು ಬರೆದು ಬಳಿಕ 11000 ರು. ಕಾಣಿಕೆಯನ್ನು ನೀಡಿದ್ದಾನೆ. ಇದಕ್ಕೆ ಕಿಡಿಕಾರಿರುವ ಕಾಂಗ್ರೆಸ್‌, ಬಿಜೆಪಿ ಆಡಳಿತದಲ್ಲಿ ರಾಜ್ಯದ ದೇಗುಲಗಳು ಸುರಕ್ಷಿತವಲ್ಲ ಎಂದು ಟೀಕಿಸಿದೆ.

Deepika Chikhalia: ಸೀತಾಮಾತೆಯ ಒನ್​ಪೀಸ್​ ಡ್ರೆಸ್​ಗೆ ನೆಟ್ಟಿಗರ ಆಕ್ರೋಶ

Follow Us:
Download App:
  • android
  • ios