ಒಮ್ಮೆ ಊರ್ವಶಿ ಜೊತೆ ಒಂದ್ಕಡೆ ಕೂತಿದ್ದಕ್ಕೆ ಬಂದ ಬಿಲ್ ನೋಡಿ ಸಿಂಗರ್ ಹನಿ ಸಿಂಗ್ ಶಾಕ್!
ಹೆಂಡತಿಗೆ ಕೊಟ್ಟಿದ್ದು ಅವರು ಬದುಕಿರಬಹುದಾದ ಮುಂದಿನ ಇಡೀ ಜೀವನಕ್ಕೆ ಕೇವಲ ಒಂದು ಕೋಟಿ. ಆದರೆ ಅಲ್ಲಿ ಖರ್ಚಾಗಿದ್ದು ಕೆಲವೇ ಗಂಟೆಗೆ ಅಷ್ಟೊಂದು ಲಕ್ಷ.. ಇದೇನು ತಮಾಷೆಯ ಸಂಗತಿಯಲ್ಲವಲ್ಲ!
ನಟಿ ಊರ್ವಶಿ (Urvashi Rautela) ಹಾಗು ಇನ್ನೂಈ ಕೆಲವು ಸ್ನೇಹಿತರ ಜೊತೆಗೂಡಿ ಗಾಯಕ ಯೋ ಯೋ ಹನಿ ಸಿಂಗ್ (Yo Yo Honey Singh) ದುಬೈಗೆ ಹೋಗಿದ್ದರಂತೆ. ಅಲ್ಲಿ ಎಲ್ಲರೂ ಸೇರಿ ಜೋರಾಗಿ ಪಾರ್ಟಿ ಮಾಡಿದ್ದಾರಂತೆ. ಸಖತ್ ಆಗಿ ಕುಣಿದು ಕುಡಿದು ಮೋಜು ಮಸ್ತಿ ಮಾಡಿದ್ದಾರೆ. ಭೂಮಿಯಲ್ಲೇ ತೇಲಾಡಿದ್ದಾರೆ, ಅಲ್ಲೇ ಸ್ವರ್ಗಸುಖವನ್ನೂ ಅನುಭವಿಸಿದ್ದಾರೆ. ಬಳಿಕ ಬಂದ ಬಿಲ್ ನೋಡಿ ಶಾಕ್ ಆಗಿದ್ದಾರೆ! ಎಷ್ಟು ಬಂದಿದೆ ಬಿಲ್ ಗೊತ್ತಾ? ಬರೋಬ್ಬರಿ 34 ಲಕ್ಷ!
ಹೋಗಿದ್ದ ಅಷ್ಟೇ ಜನರಿಗೆ, ಇರುವ ಚಿಕ್ಕ ಹೊಟ್ಟೆಗೆ ಅಷ್ಟೋ ಇಷ್ಟೋ ಹಾಕಿದ್ದಕ್ಕೆ ಬಂದಿರುವ 34 ಲಕ್ಷ ಬಿಲ್ ನೋಡಿ ಹನಿ ಸಿಂಗ್ ಗಾಬರಿಯಾಗಿದ್ದಾರೆ. ಬಾಯಲ್ಲೇ ಇರುತ್ತಿದ್ದ ಹಾಡುಗಳು ಮರೆತುಹೋಗಿದೆ. ಎಸಿಯಲ್ಲೂ ಬೆವರು ಹರಿಯಲಾರಂಭಿಸಿದೆ. ಆದರೆ, ಕೊಡಲೇಬೇಕಲ್ಲ! ಕೊಟ್ಟು ಬಂದಿದ್ದಾರೆ. 'ಹೆಂಡತಿಗೆ ಡಿವೋರ್ಸ್ ಕೊಟ್ಟು ಒಂದು ಕೋಟಿ ಜೀವನಾಂಶ ನೀಡಿರುವ ಹನಿ ಸಿಂಗ್ಗೆ 34 ಲಕ್ಷ ಯಾವ ಲೆಕ್ಕ ಎಂದು ಎಲ್ಲರೂ ಯೋಚಿಸುತ್ತಿರಬಹುದು.
ನನ್ನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನಾನು ಮೆಟ್ಟಲ್ಲಿ ಹೊಡಿತೀನಿ: ಚೈತ್ರಾ ಕುಂದಾಪುರ
ಆದರೆ, ಹೆಂಡತಿಗೆ ಕೊಟ್ಟಿದ್ದು ಅವರು ಬದುಕಿರಬಹುದಾದ ಮುಂದಿನ ಇಡೀ ಜೀವನಕ್ಕೆ ಕೇವಲ ಒಂದು ಕೋಟಿ. ಆದರೆ ಅಲ್ಲಿ ಖರ್ಚಾಗಿದ್ದು ಸ್ನೇಹಿತರ ಜೊತೆಗೂಡಿ ಕೆಲವೇ ಗಂಟೆ ಕುಡಿದು ಮಜಾ ಮಾಡಿದ್ದಕ್ಕೆ 34 ಲಕ್ಷ. ಇದೇನು ತಮಾಷೆಯ ಸಂಗತಿಯಲ್ಲವಲ್ಲ! ಏಕೆಂದರೆ, ಆ ಮೂವತ್ತನಾಲ್ಕು ಲಕ್ಷದಲ್ಲಿ ಅದೆಷ್ಟೋ ಜನರು 34 ವರ್ಷ ಬದುಕಿಬಿಡುತ್ತಾರೆ. ಅಂಥದ್ದರಲ್ಲಿ ಒಮ್ಮೆ ಕುಡಿದಿದ್ದಕ್ಕೆ ಅಷ್ಟೊಂದು ಬಿಲ್ ಬಂದರೆ ಬಿಲ್ಕುಲ್ ಶಾಕ್ ಆಗ್ಲೇಬೇಕಲ್ವಾ?
ಅದಿರಲಿ, ರಾಪರ್ ಯೋ ಯೋ ಹನಿ ಸಿಂಗ್ (Yo Yo Honey Singh) ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಅವರ 11 ವರ್ಷಗಳ ದಾಂಪತ್ಯ 2022ರಲ್ಲಿ ಕೊನೆಗೊಂಡಿದೆ. ಮದುವೆಗೆ ಮುಂಚೆ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ಸುಮಾರು 20 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಶಾಲೆಯಲ್ಲಿ ಓದುತ್ತಿದ್ದಾಗ ಇಬ್ಬರೂ ಭೇಟಿಯಾದರು. ಇಲ್ಲಿಂದ ಇಬ್ಬರ ನಡುವೆ ಸ್ನೇಹ ಶುರುವಾಗಿ ನಂತರ ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು.
23 ಜನವರಿ 2011 ರಂದು ಪಂಜಾಬಿ ಪದ್ಧತಿಗಳ ಪ್ರಕಾರ ಗುರುದ್ವಾರದಲ್ಲಿ ದಂಪತಿ ವಿವಾಹವಾದರು. ಆದರೆ, ಹನಿ ಸಿಂಗ್ ತನ್ನ ಮದುವೆಯನ್ನು ಸುಮಾರು 4 ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದರು. ಇಬ್ಬರ ನಡುವೆ ವಿಚ್ಛೇದನವನ್ನು ಅಂತಿಮಗೊಳಿಸಲಾಯಿತು. ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯದಲ್ಲಿ ಹನಿ ಸಿಂಗ್ ತನ್ನ ಪತ್ನಿಗೆ ಜೀವನಾಂಶವಾಗಿ 1 ಕೋಟಿ ರೂ. ಚೆಕ್ ಅನ್ನು ಮೊಹರು ಮಾಡಿದ ಕವರ್ನಲ್ಲಿ ಹಸ್ತಾಂತರಿಸಿದರು ಮತ್ತು ಅವರ ಹಾದಿಗಳು ಶಾಶ್ವತವಾಗಿ ಬೇರ್ಪಟ್ಟವು.
ಕೊಲ್ಕತ್ತಾದಲ್ಲಿ ಕಣ್ಣೀರು ಹಾಕಿದ ಸುಧಾರಾಣಿ; ಅಂಥ ಪರಿಸ್ಥಿತಿ ಅಲ್ಲೇನು ಆಯ್ತು ನೋಡಿ!
ಕಳೆದ ವರ್ಷ ಹನಿ ಸಿಂಗ್ ಅವರ ಪತ್ನಿ ಶಾಲಿನಿ ದೆಹಲಿಯ (Delhi) ತೀಸ್ ಹಜಾರಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಪತಿ ಕೌಟುಂಬಿಕ ದೌರ್ಜನ್ಯ (Domestic Violence) ಮತ್ತು ಇತರ ಮಹಿಳೆಯರೊಂದಿಗೆ ದೈಹಿಕ ಸಂಬಂಧ (Physical Relationship) ಸೇರಿ ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದರು ಶಾಲಿನಿ.
ಕಳೆದ ವರ್ಷ ಆಗಸ್ಟ್ನಲ್ಲಿ ಶಾಲಿನಿ ತಲ್ವಾರ್ ಅವರು ತಮ್ಮ ಪತಿ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದರು. ಪತಿ ಹಾಗೂ ಮಾವ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಒಂದು ದಿನ ತಾನು ಕೋಣೆಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ತನ್ನ ಮಾವ ಸರಬ್ಜಿತ್ ಸಿಂಗ್ ಕುಡಿದು ಕೋಣೆಗೆ ಪ್ರವೇಶಿಸಿದ್ದಾಗಿ ಅವರು ಹೇಳಿದ್ದರು.
ಆರ್ಮುಗಂ ರವಿಶಂಕರ್ ಏನಂದ್ರು? ಸುವರ್ಣ ನ್ಯೂಸ್ನಲ್ಲಿ ಬಂದ ಕನ್ನಡದ ರವಿ!
ತನ್ನ ಮಾವ ತನ್ನನ್ನು ತಪ್ಪಾದ ಜಾಗದಲ್ಲಿ ಮುಟ್ಟಲು ಯತ್ನಿಸಿದ್ದಾರೆ ಎಂದೂ ಆಕೆ ಆರೋಪಿಸಿದ್ದಳು. ಮದುವೆಯ ನಂತರ ಹನಿ ಸಿಂಗ್ ತನಗೆ ಹಲವು ಬಾರಿ ಥಳಿಸುತ್ತಿದ್ದು, ನಿಂದಿಸುತ್ತಿದ್ದ ಎಂದು ಶಾಲಿನಿ ತನ್ನ ಪತಿ ವಿರುದ್ಧ ಆರೋಪ ಮಾಡಿದ್ದರು ಮತ್ತು ಮದುವೆಯ ನಂತರ ಹಲವು ಮಹಿಳೆಯರೊಂದಿಗೆ ಏಳು ಅಕ್ರಮ ಸಂಬಂಧ ಹೊಂದಿದ್ದಾಗಿಯೂ ಹನಿ ಸಿಂಗ್ ವಿರುದ್ಧ ಶಾಲಿನಿ ಕೊಟ್ಟಿದ್ದ ದೂರಿನಲ್ಲಿ ಹೇಳಿಕೆ ನೀಡಿದ್ದರು.
ಕಳೆದ ವರ್ಷ, ಅಂದರೆ 2021 ರಲ್ಲಿ ಶಾಲಿನಿ ಅವರು ತಮ್ಮ ವಕೀಲರ ಮೂಲಕ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಪತಿಯಿಂದ 10 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಫೈನಲೀ ಅವರಿಗೆ ಸಿಕ್ಕಿದ್ದು ಒಂದು ಕೋಟಿಯಷ್ಟೇ. ಆದರೆ, ಹನಿ ಸಿಂಗ್ 'ಒನ್ ಟೈಮ್' ದುಬೈ ಪಾರ್ಟಿಗೆ ಖರ್ಚಾಗಿದ್ದು 34 ಲಕ್ಷ!