ಟಾಲಿವುಡ್‌ ಹಾಗೂ ಕಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಗಾಯಕಿ ಸುನೀತಾ ಉಪದ್ರಸ್ತ ಸರಳವಾಗಿ ಆಪ್ತರ ಸಮ್ಮುಖದಲ್ಲಿ ಎರಡನೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಮ್‌ ಜೊತೆ ಸುನೀತಾ ಫ್ಯಾಮಿಲಿ ಫೋಟೋ ಇಲ್ಲಿದೆ.

ಮದುಮಗಳ ಲಂಗದೊಳಗೆ ನುಗ್ಗಿದ ಸ್ನೇಹಿತರು; ಸತ್ಯ ತಿಳಿಯಲು ಫೋಟೋ ನೋಡಿ! 

ಡಿಸೆಂಬರ್ 7ರಂದು ಸುನೀತಾ ನಿವಾಸದಲ್ಲಿ ರಾಮ್‌ ಜೊತೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ರಾಮ್ ವೃತ್ತಿಯಲ್ಲಿ ಮೀಡಿಯಾ ಹೌಸ್‌ ಒಂದರ CEO ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅನೇಕ ಬಾರಿ ಸುನೀತಾ ಮದುವೆ ವಿಚಾರವನ್ನು ಅವರೇ ಪ್ರಸ್ತಾಪಿಸುತ್ತಿದ್ದರು. ಆದರೆ ಯಾವುದೇ ಉತ್ತರ ನೀಡದೇ ಮುಂದೆ ಹಾಕುತ್ತಿದ್ದರು. ಆದರೀಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. 

 

'ಎಲ್ಲ ತಾಯಿಯಂತೆ ನಾನೂ ನನ್ನ ಮಕ್ಕಳು ಜೀವನದಲ್ಲಿ ಸೆಟಲ್‌ ಆಗಲಿ ಎಂದು ಬಯಸಿದವಳು. ದೇವರ ಆಶೀರ್ವಾದದಿಂದ ನನಗೆ ಸಪೋರ್ಟಿಂಗ್ ಮಕ್ಕಳು ಹಾಗೂ ಪೋಷಕರು ಸಿಕ್ಕಿದ್ದಾರೆ. ಅವರಿಗೆ ನಾನು ಮೊದಲು ಸೆಟಲ್ ಆಗಬೇಕೆಂಬ ಆಸೆ. ಆ ಕ್ಷಣ ಈಗ ಬಂದಿದೆ. ಸ್ನೇಹಿತನಾಗಿ ಪರಿಚಯವಾದ ರಾಮ್‌, ಈಗ ನನ್ನ ಲೈಫ್ ಪಾರ್ಟನರ್‌ ಆಗಿದ್ದಾರೆ.  ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೀವಿ.  ನಿಮ್ಮೆಲ್ಲರ ಆಶೀರ್ವಾದ ಹಾಗೂ ನಮ್ಮ ಪ್ರೈವೇಸಿಗೆ ಬೆಲೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್‌,' ಎಂದು ಬರೆದಿದ್ದಾರೆ.

ರಣವೀರ್ ಜೊತೆಗಿನ ರಿಲೆಷನ್‌ಶಿಪ್‌ ಮದುವೆಯಾಗಿ ಬದಲಾದ ಬಗ್ಗೆ ದೀಪಿಕಾ ಹೇಳಿದ್ದಿಷ್ಟು! 

ಗಾಯಕಿ ಸುನೀತಾ 19 ವರ್ಷವಿದ್ದಾಗ ಕಿರಣ್ ಎಂಬುವರೊಂದಿಗೆ ವಿವಾಹವಾದರು. ಇಬ್ಬರು ಮಕ್ಕಳಾದ ನಂತರ ಕಾರಣಾಂತರಗಳಿಂದ ವಿಚ್ಛೇದನ ಪಡೆದರು. 17 ವರ್ಷ ಇದ್ದಾಗಿನಿಂದಲೂ ಸುನೀತಾ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.