ಚೆನ್ನೈ(ಸೆ. 07) ಅಸಂಖ್ಯ ಅಭಿಮಾನಿಗಳ ಹಾರೈಕೆ ಫಲಿಸಿದೆ.  ಒಂದು ತಿಂಗಳಿಂದ ಚೆನ್ನೈ ಎಂಜಿಎಂ ಆಸ್ಪತ್ರೆಯಲ್ಲಿ ಕರೊನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಹ್ಮಣ್ಯಂ(74) ಕೊರೋನಾ ಮುಕ್ತರಾಗಿದ್ದಾರೆ.

ಪುತ್ರ ಎಸ್​ಪಿ ಚರಣ್ ಮಾಹಿತಿ ನೀಡಿದ್ದು, ತಂದೆಯವರ ಆರೋಗ್ಯದಲ್ಲಿ ಸುಧಾರಿಸುತ್ತಿದೆ. ಅಪ್ಪನ ಕರೊನಾ ವರದಿ ನೆಗೆಟಿವ್ ಬಂದಿದ್ದು, ಸಮಾಧಾನ ತಂದಿದೆ. ಅಷ್ಟೇ ಅಲ್ಲ ಅಪ್ಪ ತನಗೇನು ಬೇಕು ಎಂಬುದನ್ನು ಬರಹದ ಮೂಲಕ ತಿಳಿಸುತ್ತಿದ್ದಾರೆ ಎಂದಿದ್ದಾರೆ.

ಹದಿನಾಲ್ಕು ಗಂಟೆಯಲ್ಲಿ 24 ಹಾಡು ಹಾಡಿದ್ದ ಎಸ್‌ಪಿಬಿ

ಐಪಿಎಲ್​  ಆರಂಭವಾಗುತ್ತಿದ್ದು ಅದರ  ಅಪ್ ಡೇಟ್ ಗಳನ್ನು ಐಪ್ಯಾಡ್​ನಲ್ಲಿ ನೋಡುತ್ತಿದ್ದಾರೆ.  ನೆಗೆಟಿವ್​ ಬಂದಿದೆ ಎಂಬುದು ಖುಷಿಯ ವಿಚಾರವಾದರೂ, ಅವರ ಶ್ವಾಸ ಮೊದಲಿನಂತಾಗಬೇಕು. ಅವರೇ ಉಸಿರಾಡುವಂತಾಗಬೇಕು. ಸದ್ಯಕ್ಕೆ ನಮಗೆಲ್ಲ ಅದೇ ಮಹತ್ವದ್ದು ಎಂದು ಚರಣ್ ಹೇಳಿದ್ದಾರೆ.

ನಿಮ್ಮೆಲ್ಲರ ಪ್ರಾರ್ಥನೆ ಹೀಗೆ ಮುಂದುವರಿಯಲಿ. ಇನ್ನೊಂದು ವಾರದಲ್ಲಿ ಅಪ್ಪನ ವಿವಾಹ ವಾರ್ಷಿಕೋತ್ಸವ ಬರಲಿದ್ದು ಆ ಕ್ಷಣ ಸುಮಧುರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೆಂಟಿಲೇಟರ್ ನಲ್ಲೇ ಹಿರಿಯ ಗಾಯಕನಿಗೆ ಚಿಕಿತ್ಸೆ ಮುಂದುವರಿದಿದೆ. ಶೀಘ್ರ ಚೇತರಿಕೆಗಾಗಿ ಕನ್ನಡ ಚಿತ್ರರಂಗ ಸಹ ಒಂದು ಕಡೆ ಸೇರಿ ಪ್ರಾರ್ಥನೆ ಮಾಡಿತ್ತು. 

 

 

 

 
 
 
 
 
 
 
 
 
 
 
 
 
 
 

A post shared by S. P. Charan/Producer/Director (@spbcharan) on Sep 7, 2020 at 4:08am PDT