ಭಾರತದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕಾರಣ ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯಕ್ಕೆ ಗಂಭೀರ ಸ್ಥಿತಿಯಿಂದ ಹೊರ ಬಂದಿದ್ದಾರೆ. ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ. ಆದರೂ ಅವರ ಆರೋಗ್ಯದ ಬಗ್ಗೆ ಆಗಾಗ ವದಂತಿಗಳು ಕೇಳಿ ಬರುತ್ತಿವೆ. ಅವರ ವಿಧಿವಶರಾಗಿದ್ದಾರೆ ಎಂಬ ಸಂದೇಶಗಳು ಓಡಾಡುತ್ತಿವೆ. ಇದಕ್ಕೆ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಬೇಸರ ವ್ಯಕ್ತಪಡಿಸಿದ್ದಾರೆ.

ಗಾನಕೋಗಿಲೆ ಲತಾ ಮಂಗೇಶ್ಕರ್ ಗೆ 90 ರ ಸಂಭ್ರಮ

'ತಪ್ಪು ವದಂತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ತಪ್ಪು. ಎರಡು ದಿನಗಳಿಂದ ಲತಾ ಜೀ ಅವರ ಆರೊಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿ ತಪ್ಪು. ನಾನು ಅವರನ್ನು ಸಂಪರ್ಕಿಸಿ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ ಅವರು ಸುದಾರಿಸಿಕೊಳ್ಳುತ್ತಿದ್ದಾರೆ. ಈಗ ಆರೋಗ್ಯವಾಗಿದ್ದಾರೆ. ಕೋಟ್ಯಂತರ ಜನರ ಆಶೀರ್ವಾದ ಅವರ ಮೇಲಿದೆ. ದಯವಿಟ್ಟು ತಪ್ಪು ಸುದ್ದಿಯನ್ನು ಎಲ್ಲೆಡೆ ಶೇರ್ ಮಾಡಿಕೊಳ್ಳಬೇಡಿ' ಎಂದು ವಿಡಿಯೋ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

ಸೆ.28 ರಂದು, 1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್ ಹಿಂದಿ ಸೇರಿದಂತೆ 36 ಭಾಷೆಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಭಾರತದ ಗಾನ ಕೋಗಿಲೆ ಎನಿಸಿಕೊಂಡಿದ್ದಾರೆ.