ನವದೆಹಲಿ (ಸೆ. 28): ಸಂಗೀತ ಲೋಕದ ದಂತಕಥೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೆ ಇಂದಿಗೆ ಭರ್ಜರಿ 90 ವರ್ಷ ತುಂಬಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಗಾನಕೋಗಿಲೆ. ಸುಮಧುರವಾದ ಕಂಠದ ಮೂಲಕ ಮೋಡಿ ಮಾಡಿದ ಲತಾ ಎಲ್ಲಾ ಭಾಷೆಗಳಲ್ಲೂ ಸೇರಿ ಬರೋಬ್ಬರಿ 36 ಸಾವಿರ ಹಾಡುಗಳನ್ನು ಹೇಳಿದ್ದಾರೆ.

3 ನ್ಯಾಷನಲ್ ಅವಾರ್ಡ್, 6 ಫಿಲ್ಮ್ ಫೇರ್ ಅವಾರ್ಡನ್ನು ಗೆದ್ದಿದ್ದಾರೆ. 2001 ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನಕ್ಕೂ ಭಾಜನರಾಗಿದ್ದಾರೆ. 

 

ಲತಾ ಮಂಗೇಶ್ಕರ್ ತಂದೆ ದೀನಾನಾಥ್ ಮಂಗೇಶ್ಕರ್ ಕೂಡಾ ಗಾಯಕರಾಗಿದ್ದರು. ತಾಯಿಗೂ ಕೂಡಾ ಸಂಗೀತದಲ್ಲಿ ಆಸಕ್ತಿಯಿತ್ತು. ಕಲಾ ಸರಸ್ವತಿ ಸಹಜವಾಗಿ ಒಲಿದಿದ್ದಳು. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತಂದೆ ಅಕಾಲಿಕ ಮರಣವನ್ನಪ್ಪುತ್ತಾರೆ. ಆಗ ಲತಾ ಮಂಗೇಶ್ಕರ್ ಅನಿವಾರ್ಯವಾಗಿ ಸಂಗೀತ ಕ್ಷೇತ್ರಕ್ಕೆ ಕಾಲಿಡುತ್ತಾರೆ. 

60 ದಶಕದಲ್ಲಿ ಇವರ ಯಶಸ್ಸಿನ ಉತ್ತುಂಗಕ್ಕೇರುತ್ತಾರೆ. ಮಹಮ್ಮದ್ ರಫಿ, ಲತಾ ಕಾಂಬಿನೇಶನ್ ಸೂಪರ್ ಹಿಟ್ ಆಗುತ್ತದೆ. ಇವರಿಬ್ಬರ ನಡುವಿನ ಡ್ಯುಯೆಟ್ ಹಾಡುಗಳು ಅಂದಿಗೂ ಇಂದಿಗೂ ಎಂದೆಂದಿಗೂ ಸೂಪರ್ ಹಿಟ್ ಆಗುತ್ತದೆ. 

ಕನ್ನಡದಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರಕ್ಕಾಗಿ ‘ಬೆಳ್ಳನೆ ಬೆಳಗಾಯಿತು’ ಹಾಡನ್ನು ಹಾಡುತ್ತಾರೆ. ಇದು ಸಿಕ್ಕಾಪಟ್ಟೆ ಫೇಮಸ್ ಕೂಡಾ ಆಯಿತು. 

 

ಲತಾ ಜೀ ಬರ್ತಡೇಗೆ ಚಿತ್ರರಂಗದ ಗಣ್ಯರು ವಿಶ್ ಮಾಡಿದ್ದು ಹೀಗೆ.