ಕೊರೋನಾ ಟೆಸ್ಟ್ ನೆಗೆಟೀವ್; ಕನ್ನಿಕಾ ಕಪೂರ್ ಡಿಸ್ಚಾರ್ಜ್
ಬೇಬಿ ಡಾಲ್ ಖ್ಯಾತಿಯ ಕನ್ನಿಕಾ ಕಪೂರ್ ಕೊರೋನಾ ಟೆಸ್ಟ್ ನೆಗೆಟೀವ್ | ಆಸ್ಪತ್ರೆಯಿಂದ ಡಿಸ್ಚಾರ್ಜ್ | ಇನ್ನೂ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ
ಮುಂಬೈ (ಏ. 06): ಎರಡನೇ ಬಾರಿಗೆ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದ್ದು ಗಾಯಕಿ ಕನ್ನಿಕಾ ಕಪೂರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಾರ್ಚ್ 20 ರಂದು ಮೊದಲ ಬಾರಿ ಟೆಸ್ಟ್‌ನಲ್ಲಿ ಕನ್ನಿಕಾ ಕಪೂರ್‌ಗೆ ಕೊರೋನಾ ಪಾಸಿಟೀವ್ ಬಂದಿತ್ತು. ಆ ನಂತರ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ಎರಡನೇ ಬಾರಿ ಟೆಸ್ಟ್ ನಡೆದಿದ್ದು ನೆಗೆಟಿವ್ ಬಂದಿದೆ. ಕನ್ನಿಕಾ ಹಾಗೂ ಕುಟುಂಬದವರು ಫುಲ್ ಖುಷಿಯಾಗಿದ್ದಾರೆ. ಇನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿರಲಿದ್ದಾರೆ.
ಲಾಕ್‌ಡೌನ್: 1 ಲಕ್ಷ ದಿನಗೂಲಿ ಕಾರ್ಮಿಕರಿಗೆ 1 ತಿಂಗಳ ರೇಶನ್ ಕೊಡಲಿದ್ದಾರೆ ಬಿಗ್ ಬಿ
ಕನ್ನಿಕಾ ಕಪೂರ್ ಲಂಡನ್‌ನಿಂದ ವಾಪಸ್ಸಾದ ಬಳಿಕ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಫೈವ್ ಸ್ಟಾರ್ ಹೊಟೇಲ್‌ಗಳಲ್ಲಿ ತಂಗಿದ್ದರು. ಬೇಜವಾಬ್ದಾರಿಯುತ ವರ್ತನೆಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಲಕ್ನೋ ಪೊಲೀಸರು ಎಫ್‌ಐಆರ್‌ನ್ನು ದಾಖಲಿಸಿದ್ದಾರೆ.
"