ನೈಸರ್ಗಿಕ ವಿಕೋಪಗಳಾದಾಗ, ಸಾಮಾಜಿಕ ಸಮಸ್ಯೆಗಳೆದುರಾದಾಗ ಬಾಲಿವುಡ್ ಬಿಗ್ ಬಿ ಅಮಿತಾಬಚ್ಚನ್ ನೆರವಿಗೆ ಧಾವಿಸುತ್ತಾರೆ. ಸಂತ್ರಸ್ತರಿಗೆ ಸಹಾಯ ಮಾಡುತ್ತಾರೆ. ಇದೀಗ ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದು ಸಿನಿಮಾ ಕ್ಷೇತ್ರದಲ್ಲಿ ದಿನಗೂಲಿ ಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದಾರೆ. ಸುಮಾರು 1 ಲಕ್ಷ ದಿನಗೂಲಿ ಕಾರ್ಮಿಕರ ಕುಟುಂಬಗಳಿಗೆ 1 ತಿಂಗಳ ರೇಷನ್ ಕೊಡಲು ಮುಂದೆ ಬಂದಿದ್ದಾರೆ. 

ಲಾಕ್‌ಡೌನ್: 200 ಕುಟುಂಬಗಳನ್ನು ದತ್ತು ಪಡೆದ ಬಾಲಿವುಡ್ ನಟಿ

ಸೋನಿ ನೆಟ್‌ವರ್ಕ್ ಹಾಗೂ ಕಲ್ಯಾಣ್ ಜ್ಯವೆಲ್ಲರ್ಸ್ ಸಹಯೋಗದೊಂದಿಗೆ ಅಮಿತಾಬಚ್ಚನ್ ಕಾರ್ಮಿಕರಿಗೆ ರೇಷನ್ ಕೊಡಲಿದ್ದಾರೆ. ಹೈಪರ್ ಮಾರ್ಕೆಟ್, ದಿನಸಿ ಅಂಗಡಿಗಳ ಜೊತೆ ಟೈ ಅಪ್ ಮಾಡಿಕೊಳ್ಳಲಾಗಿದೆ.

ಫಿಲ್ಮ್ ಎಂಪ್ಲಾಯ್ಸ್ ಕಾನ್ಫಿಡರೇಶನ್ ಪಟ್ಟಿ ಮಾಡಿರುವ ಕಾರ್ಮಿಕರಿಗೆ ಕೂಪನ್‌ಗಳನ್ನು ನೀಡಲಾಗುತ್ತದೆ. ಅವರು ನಿಗದಿಪಡಿಸಿರುವ ಅಂಗಡಿಗೆ ಹೋಗಿ ಆ ಕೂಪನ್ನಿನ ಉಪಯೋಗ ಪಡೆದುಕೊಳ್ಳಬಹುದು.