Asianet Suvarna News Asianet Suvarna News

ನಿನಗೆ ಎಂದಿಗೂ ವಯಸ್ಸಾಗಲ್ಲ: ಸ್ವರ್ಗದಲ್ಲಿರೋ ಮಗಳ ನೆನೆದು ಖ್ಯಾತ ಗಾಯಕಿ ಚಿತ್ರಾ ಭಾವುಕ ಪೋಸ್ಟ್

ನಟಿ ಗಾಯಕಿ ಚಿತ್ರಾ ಸ್ವರ್ಗದಲ್ಲಿರುವ ಮಗಳನ್ನು ನೆನೆದು ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. 

Singer Chithra pens emotional note remembering her late daughter sgk
Author
First Published Dec 18, 2022, 5:41 PM IST

ತಮ್ಮ ಸುಮಧುರ ಕಂಠದಿಂದ ಮನೆಮಾತಾದವರು ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ. ಎಂತಹ ಕಷ್ಟದ ಹಾಡನ್ನೂ ಲೀಲಾಜಾಲವಾಗಿ ಹಾಡುವಷ್ಟು ಸಂಗೀತ ಶಕ್ತಿ ಅವರಿಗೆ ಒಲಿದಿದೆ. ಕೇರಳದಲ್ಲಿ ಹುಟ್ಟಿದ ಚಿತ್ರಾ ಅನೇಕ ಭಾಷೆಯ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅದರಲ್ಲೂ ಕನ್ನಡಿಗರ ಪಾಲಿಗೆ ಅವರು 'ಕನ್ನಡದ ಕೋಗಿಲೆ'. ಅವರ ಕಂಠ, ಕನ್ನಡ ಉಚ್ಚಾರಣೆ ಅವರು ಕನ್ನಡದವರೇ ಎನ್ನುವಷ್ಟು ಅವರನ್ನು ಜನರಿಗೆ ಹತ್ತಿರವಾಗಿಸಿದೆ.1986ರಿಂದ ಕನ್ನಡ ಹಾಡುಗಳಿಗೆ ಧ್ವನಿಯಾಗಿರುವ ಅವರು ನೂರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ 1979ರಿಂದ ಇಲ್ಲಿಯವರೆಗೆ ವಿವಿಧ ಭಾಷೆಗಳಲ್ಲಿ 25,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 

ದೊಡ್ಡ ಮಟ್ಟದ ಖ್ಯಾತಿಗಳಿಸಿರುವ ಚಿತ್ರಾ ವೈಯಕ್ತಿಕ ಬದುಕು ಅವರ ಸಂಗೀತದಷ್ಟೇ ನಾದಮಯವಾಗಿಲ್ಲ. ಬದುಕು ತುಂಬಾ ಸುಂದರವಾಗಿದೆ ಎಂದುಕೊಂಡಿದ್ದ ಚಿತ್ರ ಅವರಿಗೆ ಮಗಳ ಅಗಲಿಕೆ ಬರಸಿಡಿಲು ಬಡಿದಂತೆ ಆಗಿತ್ತು. ಹೌದು ಖ್ಯಾತ ಗಾಯಕಿ ಚಿತ್ರಾ ತಮ್ಮ ಮಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದರು. ಚಿತ್ರ ಅವರ ಮುದ್ದಾದ ಮಗಳು ನಂದನಾ 9 ವರ್ಷ ಇರುವಾಗಲೇ ಇಹಲೋಕ ತ್ಯಜಿಸಿದರು. ಪುಟ್ಟ ಹೆಜ್ಜೆಗಳನ್ನು ಇರಿಸುತ್ತಾ ಮನೆಯ ತುಂಬಾ ನಲಿದಾಡಿಕೊಂಡಿದ್ದ ನಂದನಾಳ ದಿಢೀರ್ ಅಗಲಿಕೆ ಚಿತ್ರ ಕುಟುಂಬಕ್ಕೆ ದೊಡ್ಡ ಶಾಕ್ ನೀಡಿತ್ತು. ಇಂದಿಗೂ ಮಗಳ ನೆನಪಲ್ಲೇ ಬದುಕುತ್ತಿದ್ದಾರೆ ಚಿತ್ರಾ. ಇದಕ್ಕೆ ಸಾಕ್ಷೆ ಎಂಬಂತೆ ಮಗಳ ಹುಟ್ಟುಹಬ್ಬಕ್ಕೆ ಖ್ಯಾತ ಗಾಯಕಿ ಶೇರ್ ಮಾಡಿರುವ ಭಾವುಕ ಪೋಸ್ಟ್. 

ಇಂದು (ಡಿಸೆಂಬರ್ 18) ಚಿತ್ರಾ ಅವರ ಮುದ್ದಾದ ಮಗಳು ನಂದನಾ ಹುಟ್ಟುಹಬ್ಬ. ಈ ವಿಶೇಷ ದಿನದೊಂದು ಚಿತ್ರಾ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯ ವಿಶ್ ತಿಳಿಸಿದ್ದಾರೆ. ಸ್ವರ್ಗದಲ್ಲಿರುವ ಮಗಳನ್ನು ನೆನೆದು ಮತ್ತೆ ಭಾವುಕರಾಗಿದ್ದಾರೆ. 'ನೀನು  ಸ್ವರ್ಗದಲ್ಲಿ ದೇವತೆಗಳೊಂದಿಗೆ ಆಚರಿಸುವ ಜನ್ಮದಿನಕ್ಕೆ ಶುಭಾಶಯಗಳು. ವರ್ಷಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ನಿನಗೆ ಎಂದಿಗೂ ವಯಸ್ಸಾಗುವುದಿಲ್ಲ. ನೀನು ದೂರದಲ್ಲಿದ್ದರೂ ನೀನು ಸುರಕ್ಷಿತವಾಗಿರುತ್ತೀಯಾ ಎಂದು ನನಗೆ ತಿಳಿದಿದೆ. ನಾನು ಇಂದು ನಿನ್ನನ್ನು ಸ್ವಲ್ಪ ಹೆಚ್ಚು ಪ್ರೀತಿಸುತ್ತೇನೆ ಮತ್ತು ಮಿಸ್ ಯೂ' ಎಂದು ಹೇಳಿದ್ದಾರೆ. 

ಕರುನಾಡ ಕಲ್ಲುಕಲ್ಲಿನಲೂ ಕನ್ನಡದ ನುಡಿ ಕೇಳಿಸಿದ ಗಾಯಕಿಗೆ ಹುಟ್ಟು ಹಬ್ಬದ ಶುಭಾಶಯಗಳು

2011ರಲ್ಲಿ ಮಗಳನ್ನು ಕಳೆದುಕೊಂಡ ಚಿತ್ರಾ 

ಚಿತ್ರಾ ಅವರ ಮುದ್ದಾದ ಮಗಳು ಅಗಲಿ 11 ವರ್ಷಗಳೇ ಕಳೆದಿದೆ. 2011ರ ಏಪ್ರಿಲ್ 14ರಂದು ದುಬೈನಲ್ಲಿ ನಡೆಯುತ್ತಿದ್ದ ಎ.ಆರ್. ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಚಿತ್ರಾ ಭಾಗವಹಿಸಿದ್ದರು. ಅಲ್ಲಿ ಹಾಡುತ್ತಾ ಸಭಿಕರನ್ನು ರಂಜಿಸುತ್ತಿರುವಾಗ ಊರಲ್ಲಿ ಮಗಳು ನಂದನಾ ಆಕಸ್ಮಿಕವಾಗಿ ಈಜುಕೊಳದಲ್ಲಿ ಬಿದ್ದು ಮುಳುಗಿ ಮೃತಪಟ್ಟ ಘಟನೆ ಬರಸಿಡಿಲಿನಂತೆ ಅಪ್ಪಳಿಸಿತ್ತು.

 
 
 
 
 
 
 
 
 
 
 
 
 
 
 

A post shared by K S Chithra (@kschithra)

KS Chithra Daughter Birthday: ಮಗಳು ಅಗಲಿ 10 ವರ್ಷ, ಬರ್ತ್‌ಡೇ ದಿನ ಭಾವುಕರಾದ ಚಿತ್ರ

ಮಗಳಿಗೆ ನಂದನಾ ಅಂತ ಹೆಸರಿಟ್ಟಿದ್ದೇಕೆ?

ಮಗಳಿಗೆ ನಂದನಾ ಅಂತ ಹೆಸರಿಡಲು ಕಾರಣ ಮಲಯಾಳಂ ಸಿನಿಮಾ. ಮಲಯಾಳಂನ ಜನಪ್ರಿಯ ಚಿತ್ರ ನಂದನಂ ನಂತರ ಚಿತ್ರಾ ತನ್ನ ಮಗಳಿಗೆ ನಂದನಾ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾದ ಹಾಡಿಗೆ ಚಿತ್ರಾ ಅವರಿಗೆ ಕೇರಳ ಸರ್ಕಾರದ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಗೆದ್ದರು. ಹಾಗಾಗಿ ಮಗಳಿಗೆ ಅದೇ ಹೆಸರನ್ನು ಇಟ್ಟಿದ್ದರು. 

 

Follow Us:
Download App:
  • android
  • ios