ಯುಟ್ಯೂಬರ್ ಮಾಡುತ್ತಿರುವ ಕಿತಾಪತಿಯಿಂದ ಬೇಸರ ಮಾಡಿಕೊಂಡ ಖ್ಯಾತ ಗಾಯಕ ಅರ್ಮಾನ್. ಟ್ವಿಟರ್‌ನಲ್ಲಿ ಬೇಸರದ ಟ್ವೀಟ್.... 

ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ರೊಮ್ಯಾಂಟಿಕ್ ಹಾಡುಗಳನ್ನು ಹಾಡಿರುವ ಗಾಯಕ ಅರ್ಮಾನ್ ಮಲಿಕ್ ಇಬ್ಬರು ಹೆಂಡಿರ ಮುದ್ದಿನ ಗಂಡ, ಇಬ್ಬರು ಹೆಂಡತಿಯರನ್ನು ಒಂದೇ ಸಮಯಕ್ಕೆ ಪ್ರೆಗ್ನೆಂಟ್ ಮಾಡಿದ ಭೂಪಾ, ಒಂದೇ ಸಲಕ್ಕೆ ಎರಡು ಲಡ್ಡು ಎಂದು ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಟ್ರೋಲ್ ಕ್ರಿಯೇಟ್ ಅಗುತ್ತಿದೆ. ಮದುವೆ ಆಗದೆ ಅದ್ಹೇಗೆ ಪ್ರಗ್ನೆಂಟ್ ಅಂತಾ? ಯುಟ್ಯೂಬ್ ಚಾನೆಲ್ ಯಾವಾಗ ಆರಂಭಿಸಿರು? ಬೆಳಂಬೆಳಗ್ಗೆ ಟ್ವೀಟ್ ಮಾಡುವ ಮೂಲಕ ಗಾಯಕ ಅಸಲಿ ಕಥೆ ತಿಳಿಸಿದ್ದಾರೆ. 

ಹೌದು! ಗಾಯಕ ಅರ್ಮಾನ ಮಲಿಕ್‌ ಮತ್ತು ಯುಟ್ಯೂಬರ್‌ ಅರ್ಮಾನ್ ಮಲಿಕ್ ನಡುವೆ ನೆಟ್ಟಿಗರು ಕೊಂಚ ಕನ್ಫ್ಯೂಸ್ ಆಗಿದ್ದಾರೆ. ಸಂದೀಪ್ ಹೆಸರಿನ ವ್ಯಕ್ತಿ ಇಬ್ಬರು ಪತ್ನಿಯರ ಜೊತೆ ಸೇರಿಕೊಂಡು ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ವಿಡಿಯೋಗಳು ವೈರಲ್ ಆಗಬೇಕು ಎನ್ನುವ ಕಾರಣ ವಿಚಿತ್ರ ವಿಚಿತ್ರ ಗಾಸಿಪ್‌ಗನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ಈ ಗಿಮಕ್‌ಗಳಿಂದ ಅವರಿಗೆ ಡಬಲ್ ಲಾಭವಾಗಿದೆ ಆದರೆ ಅಸಲಿ ಅರ್ಮಾನ್ ಮಲಿಕ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಒಳ್ಳೆ ವಿಚಾರಗಳಿಗೆ ನನ್ನ ಫೋಟೋ ಬಳಸುವುದಿಲ್ಲ ಇಂತಹ ವಿಚಾರಕ್ಕೆ ಟ್ರೋಲ್ ಮಾಡುವುದು ಸರಿ ಅಲ್ಲ ಎಂದಿದ್ದಾರೆ. 

ಇಬ್ಬರು ಹೆಂಡಿರ ಮುದ್ದಿನ ಯುಟ್ಯೂಬರ್:​ ವೆಲಂಟೈನ್ಸ್​ ಡೇ ಗಿಫ್ಟಿಗೆ ಪತ್ನಿಯರ ಹೊಡೆದಾಟ

'ಈ ವ್ಯಕ್ತಿಯನ್ನು ಅರ್ಮಾನ್ ಮಲಿಕ್‌ ಎಂದು ಕರೆಯುವುದನ್ನು ದಯವಿಟ್ಟು ನಿಲ್ಲಿಸಿ. ಈ ವ್ಯಕ್ತಿ ಹೆಸರು ಸಂದೀಪ್ ಎಂದು. ನನ್ನ ಹೆಸರನ್ನು ತಪ್ಪು ರೀತಿಯಲ್ಲಿ ಬಳಸಿಕೊಳ್ಳುವುದನ್ನು ಮೊದಲು ನಿಲ್ಲಿಸಿ. ಬೆಳಂಬೆಳಗ್ಗೆ ಎದ್ದು ಈ ರೀತಿ ಮದುವೆ ಪ್ರೆಗ್ನೆಂಟ್ ಮಕ್ಕಳು ಎನ್ನುವ ಆರ್ಟಿಕ್‌ಗಳನ್ನು ಓದುವುದಕ್ಕೆ ಬೇಸರವಾಗುತ್ತಿದೆ. ಅದರಲ್ಲೂ ಎರಡು ಹೆಂಡತಿ ಹಾಗೆ ಹೀಗೆ ಎನ್ನುವ ಕಾಮೆಂಟ್‌ಗಳನ್ನು ನೋಡುವುದಕ್ಕೆ ಅಸಹ್ಯವಾಗುತ್ತದೆ' ಎಂದು ಅರ್ಮಾನ್ ಮಲಿಕ್ ಟ್ವಿಟ್ ಮಾಡಿದ್ದಾರೆ. ಇದಕ್ಕೆ ನೂರಾರು ಕಾಮೆಂಟ್‌ಗಳು ಹರಿದು ಬಂದಿದೆ. 'ಪ್ರಪಂಚದಲ್ಲಿ ಅರ್ಮಾನ್ ಮಲಿಕ್ ಹೆಸರಿನ ವ್ಯಕ್ತಿಗಳು 1 ಲಕ್ಷಕ್ಕೂ ಹೆಚ್ಚಿಗೆ ಇರುತ್ತಾರೆ ನಿಮ್ಮಗಿಂತ ದೊಡ್ಡವರು ತುಂಬಾ ಜನರಿದ್ದಾರೆ ಅವರು ಬಂದು ನಿನ್ನ ಹೆಸರು ಬದಲಾಯಿಸಿಕೋ ಎಂದು ಹೇಳಿದ್ರಾ? ಇಲ್ಲ ಅಲ್ವಾ. ಪ್ರತಿಯೊಬ್ಬರಿಗೂ ಯಾವ ಹೆಸರು ಬೇಕಿದ್ದರೂ ಇಟ್ಟುಕೊಳ್ಳಬಹುದು ಅದಕ್ಕೆ ಪೇಟೆಂಟ್‌ ಇಲ್ಲ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಯಾರಿದು ಸಂದೀಪ್?

ಹಿಂದಿ ಯುಟ್ಯೂಬರ್‌ ಅರ್ಮಾನ್ ಮಲಿಕ್‌ ಇಬ್ಬರು ಪತ್ನಿಯರಾದ ಪಾಯಲ್ ಮಲಿಲ್ ಮತ್ತು ಲೃತಿಕಾ ಮಲಿಕ್‌ ಜೊತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇವರ ಪ್ರೀತಿ, ಜಗಳ ಇತ್ಯಾದಿ ವಿಷಯಗಳ ಕುರಿತು ಜಾಲತಾಣದಲ್ಲಿ ವಿಷಯಗಳನ್ನು ಬಿತ್ತರಿಸುತ್ತಾ ಜನರ ಗಮನ ಸೆಳೆಯುವಲ್ಲಿ ಇವರು ನಿಸ್ಸೀಮರು. ಅರ್ಮಾನ್ ಇಬ್ಬರು ಪತ್ನಿಯರು ಪ್ರೆಗ್ನೆಂಟ್ ಆಗಿದ್ದಾರೆ. ಇಬ್ಬರಿಗೂ ಕೆಲವು ವಾರಗಳಷ್ಟೇ ವ್ಯತ್ಯಾಸ ಇರುವುದು...ಹೀಗಾಗಿ ಒಂದೇ ತಿಂಗಳಿನಲ್ಲಿ ಇಬ್ಬರು ಹೆಂಡತಿಯರನ್ನು ತಂದೆ ಮಾಡಿದ ಪುಂಡ ಎಂದು ನೆಟ್ಟಿಗರು ಹಾಸ್ಯ ಮಾಡಿದ್ದಾರೆ. ಈ ವಿಚಾರದಿಂದ ಗಾಯಕ ಅರ್ಮಾನ್ ಬೇಸರ ಮಾಡಿಕೊಂಡಿದ್ದಾರೆ. 

ಬುಟ್ಟ ಬೊಮ್ಮ ಸಾಂಗ್‌ನ ಹಿಂದಿ ವರ್ಷನ್: ಅರ್ಮಾನ್ ಹೇಳಿದ್ದಿಷ್ಟು

ಗೂಗಲ್‌ನಲ್ಲಿ ಅರ್ಮಾನ್‌ ಎಂದು ಹುಡುಕಿದಾಗ ಆರಂಭದಲ್ಲಿ ಗಾಯಕ ಅರ್ಮಾನ್ ಹೆಸರು ಮತ್ತು ಮಾಹಿತಿ ಕೊಡುತ್ತಿದ್ದರು ಆದರೆ ಈಗ ಈ ಯುಟ್ಯೂಬರ್ ಹೆಸರು ಮತ್ತು ಗರ್ಭಿಣಿಯರ ಪೋಟೋ ಬರುತ್ತಿದೆ ಎಂದು ನೆಟ್ಟಿಗರ ಗಾಯಕನಿಗೆ ತಿಳಿಸಿದ್ದಾನೆ. 

ಗಾಯಕ ಅರ್ಮಾನ್ ಮಲಿಕ್ ಆರೋಪಕ್ಕೆ ಯುಟ್ಯೂಬ್ ಪತ್ನಿ ಕೃತಿಕಾ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಎಲ್ಲೂ ಗಾಯಕ ಅರ್ಮಾನ್ ಹೆಸರು ಬಳಸಿಕೊಂಡಿಲ್ಲ ಹಾಗೇ ಅವರ ಫೋಟೋನೂ ಹಾಕಿಲ್ಲ. ನಮ್ಮ ಹೆಸರು ನಮ್ಮ ಮುಖ ಹಾಕಿಕೊಂಡು ನಾವು ಹೆಸರು ಮಾಡಿರುವುದು. ನನ್ನ ಸಾಧನೆ ಬಗ್ಗೆ ಅಸೂಯೆ ಪಡೆ ಬೇಡಿ ಎಂದು ಎಂದಿದ್ದಾರೆ. 

Scroll to load tweet…