ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್(Sindhu Loknath) ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಡ್ರಗ್ ಅಡಿಕ್ಟ್(Drug Addict) ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಿಂಧು ತಯಾರಾಗಿದ್ದಾರೆ.
ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್(Sindhu Loknath) ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಕೆಲವು ವರ್ಷಗಳು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಸಿಂಧು ಇದೀಗ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಹೊಸ ಹೇರ್ ಸ್ಟೈಲ್ ಮೂಲಕ ಮಿಂಚುತ್ತಿದ್ದ ಸಿಂಧು ಇದೀಗ ಡ್ರಗ್ ಅಡಿಕ್ಟ್(Drug Addict) ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ತಯಾರಾಗಿದ್ದಾರೆ. ಪದ್ಮವ್ಯೂಹ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ಸಿಂಧು ಲೋಕನಾಥ್ ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ.
ಈ ಸಿನಿಮಾದಲ್ಲಿ ಸಿಂಧು ವಿಭಿನ್ನ ಪಾತ್ರದ ಮೂಲಕ ಅಭಿಮಾನ ಮುಂದೆ ಬರ್ತಿದ್ದಾರೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿಂಧು ಈ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ. ಈ ಚಿತ್ರಕ್ಕೆ ದಯಾನಂದ್(Dayanand) ಮತ್ತು ಅಮರ್(Amar) ಎನ್ನುವವರು ಆಕ್ಷನ್ ಕಟ್ ಹೇಳಿದ್ದಾರೆ. ರಾಕೇಶ್ ಅಡಿಗ( Rakesh Adiga), ಕುಶಾಂತ್(Khushanth) ಮತ್ತು ವಿನಯ್ ಗೌಡ(Vinay Gowda) ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಒಂದು ವಿಭಿನ್ನ ಪ್ರಯತ್ನ ಮಾಡಿರುವ ಸಿಂಧು ಲೋಕನಾಥ್ ಸಿನಿಮಾದ ಬಗ್ಗೆ ಮತ್ತು ಪಾತ್ರದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಸಿಂಧು ಲೋಕನಾಥ್, ನಾನು ಡ್ರಗ್ ಅಡಿಕ್ಟ್ ಆಗಿ ತಪ್ಪು ದಾರಿ ಹಿಡಿದಿರುವ ಶ್ರೀಮಂತ ಮನೆಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೀನಿ. ಟಾಮ್ ಬಾಯ್ ಮತ್ತು ಯಾರ ಬಗ್ಗೆಯೂ ಕಾಳಜಿ ತೋರದ ಹುಡುಗಿಯ ಪಾತ್ರವದು. ಇದೊಂದು ಆಸಕ್ತಿದಾಯಕ ಪಾತ್ರವಾಗಿತ್ತು. ನಟನೆಗೆ ಹೆಚ್ಚು ಅವಕಾಶ ಇದ್ದ ಸಿನಿಮಾವಾಗಿದೆ. ಡ್ರಗ್ ಎನ್ನುವುದು ಯೂನಿವರ್ಸಲ್ ವಿಷಯ, ಹಾಗಾಗಿ ಈ ವಿಷದ ಬಗ್ಗೆ ಕನೆಕ್ಟ್ ಆಗಲು ಸಾಧ್ಯವಾಯಿತು ಎಂದಿದ್ದಾರೆ.
Sindhu Loknath Photoshoot: ಅಬ್ಬಬ್ಬಾ..ಲಕಲಕ ಮಿಂಚಿದ ಸಿಂಧು!
ಈ ಪಾತ್ರಕ್ಕಾಗಿ ಸಿಂಧು ಅನೇಕ ದಿನಗಳಿಂದ ತಯಾರಿ ಕೂಡ ನಡೆಸಿದ್ದಾರಂತೆ. ಪಾತ್ರಕ್ಕಾಗಿ ಅನೇಕ ಸಿನಿಮಾಗಳನ್ನು ವೀಕ್ಷಿಸಿರುವುದಾಗಿ ಹೇಳಿದ್ದಾರೆ. ಕಂಗನಾ ರಣಾವತ್ ಫ್ಯಾಶನ್ ಚಿತ್ರದ ಕೆಲವು ಅಂಶಗಳನ್ನು ತಿಳಿದುಕೊಂಡಿದ್ದೇನೆ. ನಾನು ಆ ಪಾತ್ರಕ್ಕೆ ತನ್ನದೆ ಆದ ಸೂಕ್ಷ್ಮತೆಗಳನ್ನು ತಂದಿದ್ದೇನೆ. ಇದು ನನ್ನ ನಟನೆಯಲ್ಲಿ ಖಂಡಿತವಾಯಿಗೂ ಗಮನ ಸೆಳೆಯುತ್ತದೆ ಎಂದಿದ್ದಾರೆ.
ಸದ್ಯ ಚಿತ್ರೀಕರಣ ಮುಗಿಸಿರುವ ಸಿಂಧು ಲೋಕನಾಥ್ ತನ್ನ ಪಾತ್ರವನ್ನು ದೊಡ್ಡ ಪರದೆ ಮೇಲೆ ನೋಡಲು ಕಾತರರಾಗಿದ್ದಾರೆ. ಅಂದಹಾಗೆ ಸಿಂಧು ಲೋಕನಾಥ್ ಕೊನೆಯದಾಗಿ ಕೃಷ್ಣ ಟಾಕೀಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿಲ್ಲ. ಇದೀಗ ವಿಭಿನ್ನ ಪಾತ್ರದ ಮೂಲಕ ರಂಜಿಸಲು ಸಜ್ಜಾಗಿದ್ದಾರೆ.
ನಟಿ ಸಿಂಧು ಲೋಕನಾಥ್ ಪರಿಚಯ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಲೈಫು ಇಷ್ಟೇನೆ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಸಿಂಧು ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತು. ಬಳಿಕ ತಮಿಳು ಚಿತ್ರರಂಗದ ಕಡೆ ಮುಖ ಮಾಡಿದರು. ತಮಿಳಿನಲ್ಲಿ ಎರಡು ಸಿನಿಮಾ ಮಾಡಿರುವ ಸಿಂಧು ಬಳಿಕ ಮತ್ತೆ ಕನ್ನಡದಲ್ಲಿ ಬ್ಯುಸಿಯಾಗಿದ್ದರು. ಡ್ರಾಮ, ಯಾರೆ ಕೂಗಾಡಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮನಸ್ಥಿತಿ ಬಗ್ಗೆ ಮಾತನಾಡೋದು ಬೇಡ: ಸಿಂಧು ಹೀಗೆ ಹೇಳಿದ್ದೇಕೆ?
ಇತ್ತೀಚಿಗೆ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಅಲ್ಲದೆ ತನ್ನ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್ ವಿರುದ್ಧ ಸಿಂಧು ಸಿಡಿದೆದ್ದಿದ್ದರು. ವದಂತಿ ಹಬ್ಬಿಸುವವರ ಬಾಯಿ ಮುಚ್ಚಿಸಿದ್ದ ಸಿಂಧು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದರು. ತರಹೇವಾರಿ ಫೋಟೋಗಳನ್ನು ಶೇರ್ ಮಾಡುತ್ತಾ ಸಿಂಧು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಬಣ್ಣದ ಲೋಕದಿಂದ ದೂರ ಆಗಿದ್ದರು, ಸಾಮಾಜಿಕ ಜಾಲತಾಣದಲ್ಲಿ ಯಾಕ್ಟೀವ್ ಆಗಿದ್ದರು. ಇದೀಗ ಮತ್ತೆ ದೊಡ್ಡ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
