ಮದುವೆಗೂ ಮುನ್ನವೇ ಸೊಸೆ ಕಿಯಾರಾ ಅಡ್ವಾನಿ ಬಗ್ಗೆ ಕಾಮೆಂಟ್ ಮಾಡಿದ ಸಿದ್ಧಾರ್ಥ್‌ ತಾಯಿ ರಿಮ್ಮಾ

ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಸಿದ್ದು- ಕಿಯಾರಾ. ಜೈಸಲ್ಮೇರ್‌ಗೆ ಆಗಮಿಸಿದ ಕುಟುಂಬಸ್ಥರು ಸೊಸೆ ಬಗ್ಗೆ ಹೇಳಿದ್ದೇನು....

Sidharth Malhotra mother Rimma Malhotra excited to welcome Kiara Advani vcs

ಬಾಲಿವುಡ್‌ ಅಂಗಳದಲ್ಲಿ ಮತ್ತೊಂದು ಬಿಗ್ ಫ್ಯಾಟ್ ವೆಡ್ಡಿಂಗ್ ಜೈಸಲ್ಮೇರ್‌ನಲ್ಲಿ ನಡೆಯುತ್ತಿದೆ. ಹ್ಯಾಪೆನಿಂಗ್ ಪೇರ್‌ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ಫೆಬ್ರವರಿ 7ರಂದು ಅದ್ಧೂರಿಯಾಗಿ ಆಪ್ತ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗುತ್ತಿದ್ದಾರೆ. ಫೆಬ್ರವರಿ 4ರಿಂದ ಮೆಹೇಂದಿ, ಸಂಗೀತ್ ಮತ್ತು ಸಣ್ಣ ಪುಟ್ಟ ಶಾಸ್ತ್ರಗಳು ನಡೆಯುತ್ತಿದೆ. ಸಿನಿಮಾ ಮತ್ತು ರಾಜಕೀಯ ಗಣ್ಯರಿಗೆ ಟೈಟ್‌ ಸೆಕ್ಯೂರಿಟಿ ಅರೇಂಜ್‌ ಮಾಡಲಾಗಿದೆ. ಮೊಬೈಲ್ ನಿಷೇಧಿಸಿರುವ ಕಾರಣ ಪ್ಯಾಪರಾಜಿಗಳು ಕ್ಲಿಕ್ ಮಾಡುತ್ತಿರು ವಿಡಿಯೋಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಜೈಸಲ್ಮೇರ್‌ಗೆ ಆಗಮಿಸುತ್ತಿದ್ದಂತೆ ಪ್ಯಾಪರಾಜಿಗಳಿಗೆ ಎದುರಾದ ರಿಮ್ಮಾ ಮಗ-ಸೊಸೆ ಬಗ್ಗೆ ಮಾತನಾಡಿದ್ದಾರೆ. ಸೊಸೆಯನ್ನು ಬರ ಮಾಡಿಕೊಳ್ಳು ಎಷ್ಟು ಖುಷಿಯಾಗುತ್ತಿದೆ ಎಂದು ಪ್ರಶ್ನೆ ಮಾಡಿದಾಗ 'ನಮಗೆ ತುಂಬಾನೇ ಖುಷಿಯಾಗುತ್ತಿದೆ. ಮದುವೆ ಬಗ್ಗೆ ಮಾಹಿತಿ ನೀಡಲು ಆಗುವುದಿಲ್ಲ ಆದರೆ ಶೀಘ್ರದಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ' ಎಂದು ರಿಮ್ಮಾ ಹೇಳಿದ್ದಾರೆ. 

ತಾಯಿ ರಿಮ್ಮಾ ಜೊತೆ ಸಿದ್ಧು ತಂದೆ, ಸಹೋದರ ಮತ್ತು ಅತ್ತಿಗೆ ಆಗಮಿಸಿದ್ದರು. 'ಪ್ರೀತಿ ವಿಚಾರದ ಬಗ್ಗೆ ನಮಗೆ ತಡವಾಗಿ ತಿಳಿಯಿತ್ತು ಆದರೆ ನಮಗೆ ಅಷ್ಟೇ ಖುಷಿಯಾಗಿದ್ದೇವೆ' ಎಂದು ಅಣ್ಣ ಹರ್ಷದ್ ಹೇಳಿದ್ದಾರೆ. 'ನನಗೆ ತುಂಬಾ ಅಂದ್ರೆ ತುಂಬಾ ಖುಷಿಯಾಗುತ್ತಿದೆ. ಸಿದ್ಧಾರ್ಥ್‌ ಅವರ ಅಜ್ಜಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ' ಎಂದು ಅಜ್ಜಿ ಹೇಳಿದ್ದಾರೆ. 

Sidharth Malhotra mother Rimma Malhotra excited to welcome Kiara Advani vcs

ಕಿಯಾರಾ ಮತ್ತು ಸಿದ್ಧಾರ್ಥ್ ಪ್ರೀತಿ ವಿಚಾರವನ್ನು ತುಂಬಾನೇ ಸೀಕ್ರೆಟ್ ಮಾಡಿದ್ದರು. ಕೈ ಕೈ ಹಿಡಿದು ನಡೆದುಕೊಂಡು ಬರುವವರು ಕ್ಯಾಮೆರಾ ನೋಡುತ್ತಿದ್ದಂತೆ ದೂರ ಓಡುತ್ತಾರೆ. ಹೀಗಿರುವಾಗ ಒಮ್ಮೆ ಕಿಯಾರಾ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳ ಬಗ್ಗೆ ಸಿದ್ಧ್ ಕಾಮೆಂಟ್ ಮಾಡಿದ್ದರು. 'ಕಿಯಾರಾ ಅಡ್ವಾನಿ ಯಾವ ಸಿನಿಮಾ ನೋಡಿದ್ದರೂ ಅಳುತ್ತಿರುತ್ತಾಳೆ. ಅದು ನನಗೆ ಇಷ್ಟವಾಗುವುದಿಲ್ಲ. ಒಂದು ಅಳುತ್ತಿರುತ್ತಾಳೆ ಇಲ್ಲ ಅಂದ್ರೆ ಕಣ್ಣಲ್ಲಿ ನೀರು ತುಂಬಿಕೊಂಡು ಆಕ್ಟಿಂಗ್ ಮಾಡುತ್ತಾಳೆ' ಎಂದಿದ್ದರು ಸಿದ್ಧ್‌. 

ಕಿಯಾರಾರ ಲಕ್ಷುರಿಯಸ್‌ ಲೈಫ್‌ ಸ್ಟೈಲ್‌ ಹಾಗೂ ದುಬಾರಿ ವಸ್ತುಗಳು !

ಕಿಯಾರಾ ಕೋಟಿ ಒಡತಿ:

. ಜುಲೈ 31,1992ರಂದು ಮುಂಬೈನಲ್ಲಿ ಜನಿಸಿದ ಕಿಯಾರಾ, ಕಡಿಮೆ ಅವಧಿಯಲ್ಲಿ ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ಚೆಲುವೆ ಕೋಟಿ ಆಸ್ತಿಗಳ ಒಡತಿ.ಕಿಯಾರಾ  ಸುಮಾರು 23 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ. ವರದಿಗಳ ಪ್ರಕಾರ, ಅವರ ಗಳಿಕೆ ಪ್ರತಿ ವರ್ಷ ಸುಮಾರು 25% ಹೆಚ್ಚುತ್ತಿದೆ. ಸಿನಿಮಾಗಳ ಹೊರತಾಗಿ ನಟಿ  ಪ್ರಚಾರಗಳು ಮತ್ತು ಜಾಹೀರಾತುಗಳಿಂದ ಸಾಕಷ್ಟು ಗಳಿಸುತ್ತಾರೆ. ಹೀಗೆ ಪ್ರತಿ ತಿಂಗಳು ಆಕೆ ಸುಮಾರು 30 ರಿಂದ 40 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ.ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಗಟ್ಟಲೆ ಅನುಯಾಯಿಗಳನ್ನು ಹೊಂದಿರುವ ಕಬೀರ್‌ಸಿಂಗ್‌ ಫೆಮ್‌ನ ನಟಿ  ಬ್ರಾಂಡ್ ಪ್ರಚಾರಕ್ಕಾಗಿ ಲಕ್ಷ ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. 

ಕಿಯಾರಾ ಅಡ್ವಾಣಿ ಲಕ್ಷುರಿಯಸ್‌ ಲೈಫ್‌ಸ್ಟೈಲ್‌ ಮತ್ತು ನೆಟ್‌ ವರ್ತ್‌!

ಮಾಧ್ಯಮ ವರದಿಗಳ ಪ್ರಕಾರ, ನಟಿ  ಒಂದು ಜಾಹೀರಾತಿಗಾಗಿ 20 ಲಕ್ಷ ರೂಪಾಯಿಗಳ ಫೀಸ್‌ ಗಳಿಸುತ್ತಾರೆ.  ಈ ಮೂಲಗಳ ಅವರ ವಾರ್ಷಿಕ 2-3 ಕೋಟಿ ರೂ.ಸುದ್ದಿಯ ಪ್ರಕಾರ, ಸುಮಾರು 14 ರಿಂದ 15 ಕೋಟಿ ಬೆಲೆಯ ಕಿಯಾರಾದ ಈ ಐಷಾರಾಮಿ ಅಪಾರ್ಟ್ಮೆಂಟ್ 51 ಅಂತಸ್ತಿನ ಕಟ್ಟಡದಲ್ಲಿದೆ.ಕಿಯಾರಾ ಹೆಚ್ಚಾಗಿ ತನ್ನ ಮರ್ಸಿಡಿಸ್ ಬೆಂಜ್‌ E220D ಯಲ್ಲಿ  ಓಡಾಡುವುದು ಕಾಣಬಹುದಾಗಿದೆ. ಇದರ ಬೆಲೆ ಸುಮಾರು 60 ಲಕ್ಷ ರೂ. ಇದಲ್ಲದೆ  ಅವರು ಬಿಎಂಡಬ್ಲ್ಯು ಕಾರನ್ನೂ ಹೊಂದಿದ್ದಾರೆ.

Latest Videos
Follow Us:
Download App:
  • android
  • ios