ರೈತ ಪ್ರತಿಭಟನೆ ನಡುವೇ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದಲ್ಲಿ ಕ್ರಿಸ್ಮಸ್ ಆಚರಣೆ, ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಿರುವ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ದೆಹಲಿಯ ಕೋಟ್ಲಾ ಮೈದಾನದಲ್ಲಿ ಅರುಣ್ ಜೇಟ್ಲಿ ಪ್ರತಿಮೆ ಅನಾವರಣಕ್ಕೆ ಬಿಷನ್ ಸಿಂಗ್ ಬೇಡಿ ವಿರೋಧ ವ್ಯಕ್ತಪಡಿಸಿದ್ದಾರೆ. ರ್ಯಾಪರ್ ಜೊತೆ ರಶ್ಮಿಕಾ ಮಂದಣ್ಣ ಹೆಜ್ಜೆ, ಕುಸಿತ ಕಂಡ ಚಿನ್ನದ ದರ ಸೇರಿದಂತೆ ಡಿಸೆಂಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಪ್ರತಿಭಟನೆ ನಡುವೆ ರೈತರಿಗೆ ಸಿಹಿ ಸುದ್ದಿ; ಡಿ.25ರಂದು ರೈತರ ಖಾತೆಗೆ PM ಕಿಸಾನ್ ಯೋಜನೆ ಹಣ!...
ರೈತ ಪ್ರತಿಭಟನೆ ನಡುವೆ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಬಿಡುಗಡೆ ಮಾಡಲಿದ್ದಾರೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ: ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಕಂಪ್ಲೀಟ್ ಬ್ರೇಕ್ !...
ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ| ಹೊಸ ಮಾದರಿಯ ಕೊರೋನಾ ತಡೆಯಲು ರಾಜ್ಯದಿಂದ ಹೊಸ ನಿಯಮ| ಕ್ರಿಸ್‌ಮಸ್, ಹೊಸ ವರ್ಷಾಚರಣೆಗೂ ಬ್ರೇಕ್
ಕೋಟ್ಲಾದಲ್ಲಿ ಜೇಟ್ಲಿ ಪ್ರತಿಮೆ; DDCA ವಿರುದ್ಧ ಕಿಡಿಕಾರಿದ ಬಿಷನ್ ಸಿಂಗ್ ಬೇಡಿ...
ಡೆಲ್ಲಿ ಕ್ರಿಕೆಟ್ ಸಂಸ್ಥೆಯಲ್ಲಿ ನಡೆಯುತ್ತಿದೆ ಎನ್ನಲಾದ ಸ್ವಜನಪಕ್ಷಪಾತದ ವಿರುದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಬಾಲಿವುಡ್ Rapper ಜತೆ ಹೆಜ್ಜೆ ಹಾಕಿದ ರಶ್ಮಿಕಾ ಮಂದಣ್ಣ, ಫೋಟೋ ವೈರಲ್!...
ಬಾಲಿವುಡ್‌ನಲ್ಲಿ ಹವಾ ಎಬ್ಬಿಸುತ್ತಿರುವ ರಶ್ಮಿಕಾ ಮಂದಣ್ಣ ಫೋಟೋ ವೈರಲ್. ಆಲ್ಬಂ ಸಾಂಗ್‌ನ ಲುಕ್ ರಿವೀಲ್....
ವಾರೆವ್ಹಾ...! ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ, ಬಂಗಾರ ದರ ಕುಸಿತ, ಬೆಳ್ಳಿಯೂ ಅಗ್ಗ!...
ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ದರ ಮತ್ತೆ ನಿಧಾನವಾಗಿ ಇಳಿಯಲಾರಂಭಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ಭಾರತೀಯ ಮಾರುಕಟ್ಟೆ ಎರಡರಲ್ಲೂ ಚಿನ್ನ ಇಳಿಕೆ ದಾಖಲಿಸಿದೆ.
107 ಕೆಜಿ ತೂಕ ಇಳಿಸಿಕೊಂಡ ಬಾಲಕನ ಫಿಟ್ನೆಸ್ ಜರ್ನಿ !...
ಆರ್ಯ ಪರ್ಮನಾ ಎಂಬ ಈ ಹುಡುಗನಿಗೆ ವರ್ಲ್ಡ್‌ನ ಫ್ಯಾಟೇಸ್ಟ್ ಮಗು ಎಂಬ ಬಿರುದು ಸಿಕ್ಕಿತ್ತು. 14 ವರ್ಷದ ಬಾಲಕನ ತೂಕ 2016ರಲ್ಲಿ 190 ಕೆ.ಜಿ ಇತ್ತು. ಆದರೆ ಆತ 4 ವರ್ಷಗಳಲ್ಲಿ ಸುಮಾರು 107 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾನೆ.
80 ವರ್ಷದ ಹುಟ್ಟುಹಬ್ಬಕ್ಕೆ 80ನೇ ಪೊರ್ಶೆ ಕಾರು ಖರೀದಿ; ಕಾರು ಕ್ರೇಜ್‌ಗೆ ಸರಿಸಾಟಿ ಇಲ್ಲ!...
ವಯಸ್ಸು 80..ಅದೆಷ್ಟೇ ಶ್ರೀಮಂತನಾದರೂ ಹೆಚ್ಚೆಂದೆರೆ 10 ರಿಂದ 15 ಕಾರುಗಳು ಖರೀದಿಸಿರಬಹುದು, ಅಥವಾ ಬದಲಾಯಿಸರಬಹುದು. ಆದರೆ ಇಲ್ಲೊಬ್ಬರು 80ನೇ ಹುಟ್ಟು ಹಬ್ಬಕ್ಕೆ 80ನೇ ದುಬಾರಿ ಪೋರ್ಶೆ ಕಾರು ಖರೀದಿಸಿದ್ದಾರೆ.
'ಯಡಿಯೂರಪ್ಪ ತಡ ಮಾಡದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು'...
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.
ಆರಂಭದಲ್ಲಿಯೇ ವಿವಾದದಲ್ಲಿ ಸಿಲುಕಿಕೊಂಡಿತು ಮುತ್ತಪ್ಪ ಬಯೋಪಿಕ್!...
ರವಿ ಶ್ರೀವತ್ಸ ನಿರ್ದೇಶನಕ ಎಮ್‌ಆರ್ ಚಿತ್ರಕ್ಕೆ ಆರಂಭದಲ್ಲಿಯೇ ಸಂಕಷ್ಟ ಎದುರಾಗಿದೆ. ಮುತ್ತಪ್ಪ ರೈಗೆ ಆಪ್ತರಾಗಿದ್ದ ಪದ್ಮನಾಭ್ ಈ ಚಿತ್ರವನ್ನು ತಾವೇ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ. ಮುತ್ತಪ್ಪ ರೈ ಬಗ್ಗೆ ಯಾರೂ ಸಿನಿಮಾ ಮಾಡುವುದು ಬೇಡ ಎಂದೂ ಹೇಳಿದ್ದಾರೆ. ಹಾಗಾದ್ರೆ ಚಿತ್ರಕ್ಕೆ ಈಗ ಬಂಡವಾಳ ಯಾರು ಹಾಕುತ್ತಾರೆ?
ರಾಜ್ಯದಲ್ಲಿ ನೈಟ್ ಕರ್ಫ್ಯೂ: ರಾತ್ರಿ ಪ್ರಯಾಣಿಕರಿಗೆ ಸವದಿ ವಿಶೇಷ ಮನವಿ...
ಬ್ರಿಟನ್ ಕೊರೋನಾ ವೈರಸ್ ಇದೀಗ ದೇಶದೆಲ್ಲೆಡೆ ಬೀತಿ ಶುರುವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ಪ್ರಯಾಣಿಕರಿಗೆ ಸಚಿವರು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 23, 2020, 4:58 PM IST