ಸ್ಪಷ್ಟ ಕನ್ನಡ ಮಾತಾಡೋ ಶ್ವೇತಾ ಚಂಗಪ್ಪಗೇ 'ಕನ್ನಡ' ಕಲಿಸಿದ ಮಗ!
ಶ್ವೇತಾ ಚೆಂಗಪ್ಪ ತಮ್ಮ ಪುಟಾಣಿ ಮಗನೊಂದಿಗೆ ಕುಳಿತು ಅವನು ಮುದ್ದಾಗಿ ಮಾತನಾಡುವ ಕನ್ನಡ ಪದಗಳನ್ನು ತಮ್ಮ ಅಭಿಮಾನಿ ಬಳಗದ ಮಂದಿಟ್ಟಿದ್ದಾರೆ. ನೋಡಲು ಮುದ್ದಾಗಿರುವ ಶ್ವೇತಾ ಕಂದನನ್ನು, ಅವನ ಬಾಯಿಂದ ಹೊರಡುವ ಕನ್ನಡ ಪದಗಳನ್ನು ಕೇಳುವುದೇ ಚೆಂದ ಎಂದು ಹಲವು ಅಭಿಮಾನಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಿರುತೆರೆ ನಟಿ ಹಾಗೂ ನಿರೂಪಕಿ ಶ್ವೇತಾ ಚೆಂಗಪ್ಪ ಸೋಷಿಯಲ್ ಮೀಡಿಯಾ ಸ್ಟಾರ್ ಎನ್ನಬಹುದು. ಅವರು ಹೆಚ್ಚಾಗಿ ತಮ್ಮ ಫ್ಯಾನ್ಸ್‌ಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕನೆಕ್ಟ್ ಆಗಿರುತ್ತಾರೆ. ಹವ್ಯಾಸಗಳು, ವೃತ್ತಿ-ಪ್ರವೃತ್ತಿ ಮತ್ತು ಫ್ಯಾಮಿಲಿ ಮೆಂಬರ್ಸ್ ಎಲ್ಲವನ್ನೂ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುವ ಶ್ವೇತಾ ಚೆಂಗಪ್ಪ ಬಗ್ಗೆ ಹಲವರಿಗೆ ವಿಶೇಷ ಅಭಿಮಾನ ಹಾಗೂ ಅಕ್ಕರೆ.
ಇತ್ತೀಚೆಗೆ ಶ್ವೇತಾ ಚೆಂಗಪ್ಪ ತಮ್ಮ ಪುಟಾಣಿ ಮಗನೊಂದಿಗೆ ಕುಳಿತು ಅವನು ಮುದ್ದಾಗಿ ಮಾತನಾಡುವ ಕನ್ನಡ ಪದಗಳನ್ನು ತಮ್ಮ ಅಭಿಮಾನಿ ಬಳಗದ ಮಂದಿಟ್ಟಿದ್ದಾರೆ. ನೋಡಲು ಮುದ್ದಾಗಿರುವ ಶ್ವೇತಾ ಕಂದನನ್ನು, ಅವನ ಬಾಯಿಂದ ಹೊರಡುವ ಕನ್ನಡ ಪದಗಳನ್ನು ಕೇಳುವುದೇ ಚೆಂದ ಎಙಂದು ಹಲವು ಅಭಿಮಾನಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮತ್ತೊಬ್ಬ ತೆಲುಗು ಸ್ಟಾರ್ ಜತೆ ತೆರೆ ಮೇಲೆ ಮಿಂಚಲಿರುವ ರಶ್ಮಿಕಾ ಮಂದಣ್ಣ
"ಅಮ್ಮನಿಗೆ ಕನ್ನಡ ಪಾಠ ಮಾಡಿದ ನನ್ನ ಕಂದ ಜಿಯಾನ್ ಅಯ್ಯಪ್ಪ' ಎಂದು ತಮ್ಮ ಮಗನ ಹೆಸರೂ ಸೇರಿಸಿ ಮೆಸೇಜ್ ಮಾಡಿದ್ದಾರೆ. ಜತೆಗೆ 'ನಮ್ಮ ಕನ್ನಡ ಮೇಸ್ಟ್ರ ಬಾಯಿಲ್ಲಿ ಕನ್ನಡ ಕೇಳುವದೇ ಎಷ್ಟು ಚೆಂದ ಅಲ್ವಾ? ಈ ಒಂದು ಕ್ಷಣ ಹೆಮ್ಮೆ ಅನ್ನಿಸುತ್ತದೆ. ಮೊದಲು ನನ್ನ ತಾಯಿ ತಾರಾ ಚೆಂಗಪ್ಪಗೆ ಥ್ಯಾಂಕ್ಸ್. ನನ್ನ ಮಗುವಿಗೆ ಕನ್ನಡವನ್ನು ಸತತವಾಗಿ ಹೇಳಿಕೊಡುತ್ತಿರುವುದಕ್ಕೆ... ಈಗಿನ ಜನರೇಶನ್ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡುವ ಪ್ರತಿಯೊಬ್ಬ ಶಿಕ್ಷಕರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ನಾಡು ಕನ್ನಡ, ನುಡಿ ಕನ್ನಡ, ನಮ್ಮ ಭಾಷೆ ಕನ್ನಡ " ಎಂದು ಶ್ವೇತಾ ಚೆಂಗಪ್ಪ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ, ಕನ್ನಡದ ನಟಿ-ನಿರೂಪಕಿ ಆಗಿ ಜನಪ್ರಿಯತೆ ಗಳಿಸಿರುವ ಶ್ವೇತಾ ಚೆಂಗಪ್ಪ, ತಮ್ಮ ಮಗನೂ ಕನ್ನಡ ಕಲಿಯುವುದನ್ನು ಇಷ್ಟ ಪಡುತ್ತಿದ್ದಾರೆ ಎನ್ನಬಹುದು. ಬಹಳಷ್ಟು ಅಭಿಮಾನಿಗಳು ಅವರನ್ನು 'ಸಂತೂರ್ ಮಮ್ಮಿ' ಎಂದು ಕರೆಯುವ ಮೂಲಕ ಅವರ ಸೌಂದರ್ಯವನ್ನು ಸಹ ಇಷ್ಟಪಟ್ಟು ಹೊಗಳುತ್ತಾರೆ. ಅದೇನೇ ಇರಲಿ, ಶ್ವೇತಾ ತಮ್ಮ ಪಪ್ಯುಲಾರಿಟಿಯನ್ನು ದಿನದಿನಕ್ಕೆ ಹೆಚ್ಚಿಸಿಕೊಳ್ಳುತ್ತ ಹಲವರ ಅಸೂಯೆಗೂ ಕಾರಣರಾಗಿದ್ದಾರೆ ಎನ್ನಬಹುದೇ?
ನಾಗ ಚೈತನ್ಯ ಮುಂದಿನ ಚಿತ್ರಕ್ಕೆ ಬಲಗಾಲಿಟ್ಟು ಬಂದ 'ಲವ್ ಸ್ಟೋರಿ' ಬೆಡಗಿ!