ದೇವಸ್ಥಾನಕ್ಕೆ ಕದ್ದುಮುಚ್ಚಿ ಹೋಗ್ತಿದ್ರಂತೆ ಶ್ರುತಿ ಹಾಸನ್! ಕಮಲ್ ಹಾಸನ್ ಪುತ್ರಿಗೆ ಮನೆಯಿಂದ್ಲೇ ಇತ್ತು ಬೆದರಿಕೆ!
ದೇವಸ್ಥಾನಕ್ಕೆ ಕದ್ದುಮುಚ್ಚಿ ಹೋಗ್ತಿದ್ರಂತೆ ಶ್ರುತಿ ಹಾಸನ್! ಕಮಲ್ ಹಾಸನ್ ಪುತ್ರಿಗೆ ಮನೆಯಿಂದ್ಲೇ ಇತ್ತು ಬೆದರಿಕೆ. ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ನಟಿ..
ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್ ಅವರು ಇದಾಗಲೇ ತಮ್ಮ ಜೀವನದ ಹಲವು ಮಜಲುಗಳ ಬಗ್ಗೆ ಮಾತನಾಡಿದ್ದಾರೆ. ಅಪ್ಪ ಕಮಲ ಹಾಸನ್ ಮತ್ತು ಅಮ್ಮ ನಟಿ ಸಾರಿಕಾ ವಿಚ್ಛೇದನ ಆದ ಬಳಿಕ ತಮ್ಮ ಜೀವನದಲ್ಲಿ ಆಗಿದ್ದ ಕರಾಳ ಕಥೆಗಳನ್ನು ಅವರು ಇದಾಗಲೇ ತೆರೆದಿಟ್ಟಿದ್ದಾರೆ. ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಕುಗ್ಗಿ ಹೋಗಿದ್ದ ರೀತಿ ಹಾಗೂ ಮದ್ಯವ್ಯಸನಕ್ಕೆ ಅಂಟಿಕೊಂಡು ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಇದಾಗಲೇ ತಿಳಿಸಿದ್ದಾರೆ. ಇದೀಗ ನಟಿ ದೇವಸ್ಥಾನಕ್ಕೆ ತಾವು ಹೇಗೆ ಕದ್ದು ಮುಚ್ಚಿ ಹೋಗಬೇಕಿತ್ತು. ದೇವಸ್ಥಾನಕ್ಕೆ ಹೋಗಲು ಅಪ್ಪನಿಂದಲೇ ಹೇಗೆ ಬೆದರಿಕೆ ಇತ್ತು ಎನ್ನುವ ಬಗ್ಗೆ ಮಾತನಾಡಿದ್ದು, ಅದೀಗ ವೈರಲ್ ಆಗಿದೆ.
ಶ್ರುತಿ ಅವರ ತಾಯಿ ಸಾರಿಕಾ ಆಧ್ಯಾತ್ಮಿಕ ಚಿಂತಕಿಯಾಗಿದ್ದರೂ ಕಮಲ್ ಹಾಸನ್ ನಾಸ್ತಿಕರು. ಇದೇ ಕಾರಣಕ್ಕೆ ಮನೆಯಲ್ಲಿ ಯಾರಿಗೂ ದೇವಸ್ಥಾನಕ್ಕೆ ಹೋಗಲು ಕೊಡುತ್ತಿರಲಿಲ್ಲ. ಮೊದಲ ಬಾರಿಗೆ, ನಟಿ ಅಜ್ಜನೊಂದಿಗೆ ದೇವಸ್ಥಾನಕ್ಕೆ ಹೋಗಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಅಜ್ಜ ತಮ್ಮನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದರೂ, ತಮ್ಮ ಮಗ ಅಂದ್ರೆ ಕಮಲ ಹಾಸನ್ ಅವರಿಗೆ ಹೇಳಬಾರದು ಎಂದು ಷರತ್ತು ವಿಧಿಸಿದ್ದರು ಎಂಬುದಾಗಿ ತಿಳಿಸಿದ್ದಾರೆ. ಏಕೆಂದರೆ ಕಮಲ್ ಹಾಸನ್ ಅವರು ನಾಸ್ತಿಕರಾಗಿದ್ದರಿಂದ ಮನೆಯಲ್ಲಿ ಯಾರೂ ದೇವಸ್ಥಾನಕ್ಕೆ ಹೋಗುವಂತೆ ಇರಲಿಲ್ಲವಂತೆ!
ಹೊಸ ವರ್ಷಕ್ಕೆ ಹೊಸ ಹುಡುಗನ ಜೊತೆ ಫಾರಿನ್ನಲ್ಲಿ ನಿವೇದಿತಾ ಗೌಡ: ಮತಾಂತರಗೊಂಡ್ರಾ ಕೇಳ್ತಿರೋ ಫ್ಯಾನ್ಸ್!
ಪಿಂಕ್ವಿಲ್ಲಾ ಜೊತೆಗಿನ ಸಂದರ್ಶನದಲ್ಲಿ ನಟಿ, ’ನನಗೆ ದೇವರ ಮೇಲೆ ಅಪಾರ ನಂಬಿಕೆ. ಆದರೆ ಅಪ್ಪನ ಕಾರಣದಿಂದ ದೇವಸ್ಥಾನಕ್ಕೆ ಹೋಗುವಂತೆ ಇರಲಿಲ್ಲ. ಯಾರಿಗೂ ಅನುಮತಿ ಇರಲಿಲ್ಲ. ಆದ್ದರಿಂದ ಕದ್ದು ಮುಚ್ಚಿ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಆಗಾಗ್ಗೆ ಚರ್ಚಿಗೂ ಹೋಗುತ್ತಿದ್ದೆ. ಆದರೆ ಬಹಳ ಸಮಯದವರೆಗೆ ಇದು ಅಪ್ಪನಿಗೆ ತಿಳಿದಿರಲಿಲ್ಲ. ಅಜ್ಜನ ಜೊತೆ ಹೋದರೂ ಅದನ್ನು ಅಪ್ಪನಿಗೆ ಹೇಳುವಂತೆ ಇರಲಿಲ್ಲ’ ಎಂದಿದ್ದಾರೆ. ನಾನು ಇಂದು ಈ ಮಟ್ಟದಲ್ಲಿ ಇದ್ದೇನೆ, ಈ ಪರಿಯಲ್ಲಿ ಧೈರ್ಯದಿಂದ ಇದ್ದೇನೆ ಎಂದರೆ ಅದಕ್ಕೆ ಕಾರಣ, ದೇವರ ಮೇಲಿನ ನನ್ನ ನಂಬಿಕೆ. ಆದರೆ ಅಪ್ಪನಿಗೆ ಇದು ಇಷ್ಟವಿರಲಿಲ್ಲ. ನನ್ನ ಮನೆ ಸಂಪೂರ್ಣ ನಾಸ್ತಿಕವಾಗಿತ್ತು. ಅಮ್ಮ ದೈವ ಭಕ್ತೆ ಆದರೂ ಅದನ್ನು ಹೇಳುವಂತೆ ಇರಲಿಲ್ಲ. . ಹಾಗಾಗಿ ನಾನು ಬೆಳೆಯುತ್ತಿರುವಾಗ ನಮಗೆ ದೇವರ ಪರಿಕಲ್ಪನೆಯೇ ಇರಲಿಲ್ಲ. ಆದರೆ ದೇವರ ಬಗೆಗಿನ ಶಕ್ತಿಯನ್ನು ನಾನೇ ಕಂಡುಹಿಡಿದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ ಎಂದಿದ್ದಾರೆ ನಟಿ.
ಇನ್ನು ನಟಿಯ ಕುರಿತು ಹೇಳುವುದಾದರೆ, 1986ರಲ್ಲಿ ಹುಟ್ಟಿರೋ ಶ್ರುತಿ ಹಾಸನ್ ಅವರಿಗೆ ಅಪ್ಪ-ಅಮ್ಮ ಬೇರೆಯಾದಾಗ ಇನ್ನೂ 18 ವರ್ಷ ವಯಸ್ಸು. ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಹೇಗೆ ಕುಗ್ಗಿ ಹೋಗಿದ್ದೆ. ಈ ಘಟನೆಗಳಿಂದ ನಾನು ಮದ್ಯವ್ಯಸನಿಯಾಗಿದ್ದೆ. ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಸಂದರ್ಶನದಲ್ಲಿ ಹೇಳಿದ್ದಾರೆ. ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎನ್ನುವ ಸುದ್ದಿ ಆಗ ಹಬ್ಬಿತ್ತು. ಅದು ನಿಜವೂ ಆಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಅಪ್ಪ-ಅಮ್ಮನ ಡಿವೋರ್ಸ್ ವಿಚಾರವೇ ಆಗಿತ್ತು. ಇದು ನನ್ನ ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಶ್ರುತಿ ಹೇಳಿಕೊಂಡಿದ್ದರು.
ಸುಮ್ನೆ ನಿಂತಿದ್ದ ಪೊಲೀಸಪ್ಪನ ಪುಸಲಾಯಿಸಿದ ಸುಂದ್ರಿ: ಮುಂದಾದದ್ದು ಮಾತ್ರ ದುರಂತ! ವಿಡಿಯೋ ವೈರಲ್