Valentines day spl: ಗಾಳಿಸುದ್ದಿಗೆ ಬ್ರೇಕ್- ಬಾಯ್ಫ್ರೆಂಡ್ ಜೊತೆ ಶ್ರುತಿ ಹಾಸನ್ ಫೋಟೋ ಕ್ಲಿಕ್
ಪ್ರೇಮಿಗಳ ದಿನದಂದು ತಮ್ಮ ಬಾಯ್ಫ್ರೆಂಡ್ ಶಂಜನು ಜೊತೆ ನಟಿ ಶ್ರುತಿ ಹಾಸನ್ ಫೋಟೋ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾರೆ. ಈ ಮೂಲಕ ಗಾಳಿಸುದ್ದಿಗೆ ಬ್ರೇಕ್ ಕೊಟ್ಟಿದ್ದಾರೆ. ಏನದು ಸುದ್ದಿ?
ಇಂದು ಪ್ರೇಮಿಗಳ ದಿನ. (valentines day) ತಮ್ಮ ತಮ್ಮ ಪ್ರೇಮಿಗಳಿಗೆ ವಿಶೇಷ ರೀತಿಯಲ್ಲಿ ಸಂದೇಶ ಸಾರುವ ಭರಾಟೆ ಒಂದೆಡೆ ಜೋರಾಗಿದ್ದರೆ, ಚಿತ್ರ ತಾರೆಯರೂ ಸಾಮಾಜಿಕ ಜಾಲತಾಣದಲ್ಲಿ ಇಂದು ಬಹಳ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ತಮ್ಮ ಪ್ರಿಯತಮ, ಪ್ರಿಯಕರನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದು, ಪ್ರೇಮಿಗಳ ದಿನ ಶುಭಾಶಯ (wishes) ಹೇಳುತ್ತಿದ್ದಾರೆ. ಅದೇ ರೀತಿ ಇದೀಗ ನಟಿ ಶ್ರುತಿ ಹಾಸನ್ ಕೂ ಲವ್ವಿ-ಡವಿ ಚಿತ್ರದೊಂದಿಗೆ ತಮ್ಮ ಗೆಳೆಯ ಶಂತನು ಹಜಾರಿಕಾ ಅವರಿಗೆ ಶುಭ ಹಾರೈಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ (Instagram) ಅವರು ಕಪ್ಪು ಬಿಳುಪಿನ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇವರ ಸ್ನೇಹಿತ ಶಂತನು ಹಜಾರಿಕಾ ಅವರನ್ನು ಕಾಣಬಹುದು.
ಅಂದಹಾಗೆ ಕಮಲ್ ಹಾಸನ್ ಪುತ್ರಿಯಾಗಿರುವ ಶ್ರುತಿ (Shruthi Hassan), ಕಾಲಿವುಡ್, ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇವರು ತಮ್ಮ ಸ್ನೇಹಿತ ಶಂತನು ಹಜಾರಿಕಾ ಜೊತೆ ಬ್ರೇಕ್ ಅಪ್ ಆಗಿದ್ದರು ಎಂಬ ಸುದ್ದಿಯೂ ಕೆಲ ತಿಂಗಳಿನಿಂದ ಹರಿದಾಡುತ್ತಿತ್ತು. ಮುಂಬೈನಲ್ಲಿ ಪ್ರತ್ಯೇಕ ಫ್ಲಾಟ್ ತೆಗೆದುಕೊಂಡು ಇಬ್ಬರೂ ಜೊತೆಯಲ್ಲಿದ್ದಾರೆ ಎಂಬುದು ಬಿ-ಟೌನ್ನಲ್ಲಿ ಗುಟ್ಟಾಗಿ ಉಳಿದಿಲ್ಲ. ಆದರೆ ಇದರ ನಡುವೆಯೇ ಬ್ರೇಕ್ ಅಪ್ ಶಾಕಿಂಗ್ ನ್ಯೂಸ್ (Shocking news) ಕೂಡ ಬಂದಿತ್ತು. ಅದಕ್ಕೆ ಪುಷ್ಟಿ ನೀಡಿದ್ದ ಶ್ರುತಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್. 'ನಾನು ನನ್ನೊಂದಿಗೆ ಚೆನ್ನಾಗಿದ್ದೇನೆ. ನನ್ನೊಂದಿಗೆ ನಾನು ಎಂಜಾಯ್ ಮಾಡಬಹುದು. ನನ್ನ ಸಮಯದ ಮೌಲ್ಯ ನನಗೆ ತಿಳಿದಿದೆ. ನಾನು ನನ್ನ ಜೀವನವನ್ನು ಪ್ರೀತಿಸುತ್ತೇನೆ ಎಂದು ನಾನು ಅರಿತುಕೊಂಡಿದ್ದೇನೆ' ಎಂದು ಶ್ರುತಿ ಬರೆದುಕೊಂಡಿದ್ದರು.
Valentines Day: ಬೆಡ್ರೂಮಲ್ಲಿ ತಬ್ಬಿ ಮುದ್ದಾಡಿದ ವೀಡಿಯೋ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ!
ಆದರೆ ಇದೀಗ ಈ ಗಾಳಿ ಸುದ್ದಿಗೆ ಬ್ರೇಕ್ ಕೊಟ್ಟಿದ್ದಾರೆ ನಟಿ ಶ್ರುತಿ. ಪ್ರೇಮಿಗಳ ದಿನದಂದು ಶಂತನು ಅವರೊಂದಿಗೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ ಶಂತನು ಹಜಾರಿಕಾ (Shanthanu Hajarika) ಅವರು, ಡೂಡಲ್ ಕಲಾವಿದ ಮತ್ತು ವೃತ್ತಿಯಲ್ಲಿ ಸಚಿತ್ರಕಾರ. ಇವರ ಜೊತೆ ಕೆಲ ವರ್ಷಗಳಿಂದ ಶ್ರುತಿ ಸಂಬಂಧದಲ್ಲಿದ್ದಾರೆ. ಈ ಬಗ್ಗೆ ಖುಲ್ಲಂಖುಲ್ಲಾ ಆಗಿ ಈಗ ಹೇಳಿಕೊಂಡಿರುವ ನಟಿ, ಶಂತನು ಅವರನ್ನು ಹಾಡಿ ಹೊಗಳಿದ್ದಾರೆ. ನೀವು ತುಂಬಾ ಬೆಸ್ಟ್, ಯಾವಾಗಲೂ ನನ್ನವರು, ನಿಮ್ಮನ್ನು ಪಡೆಯಲು ನಾನು ಭಾಗ್ಯವಂತಳು ಎಂದು ಹೇಳಿಕೊಂಡಿದ್ದಾರೆ. ಈ ಏಕವರ್ಣದ (monochrome) ಚಿತ್ರವೀಗ ಭಾರಿ ವೈರಲ್ ಆಗಿದೆ. ಅಂದಹಾಗೆ ಶ್ರುತಿ ಹಾಸನ್ ಮತ್ತು ಶಂತನು ಹಜಾರಿಕಾ ಕಳೆದ ಕೆಲವು ವರ್ಷಗಳಿಂದ ಪ್ರೇಮಿಗಳಾಗಿದ್ದಾರೆ. ಅವರು ಒಟ್ಟಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಸಂಗೀತ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದಾಗಲೇ ಈ ಜೋಡಿ ಲಾಂಗ್ ಡ್ರೈವ್ಗೆ ಹೋದದ್ದು ಮತ್ತು ರಜಾದಿನಗಳಲ್ಲಿ ಒಟ್ಟಿಗೆ ಹೋಗಿರುವ ಬಗ್ಗೆಯೂ ತಿಳಿಸಿದ್ದಾರೆ.
ಇನ್ನು ಶ್ರುತಿಯವರ ಸಿನಿ ಪಯಣದ ಕುರಿತು ಹೇಳುವುದಾದರೆ, ಇವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ ಮತ್ತು ಹಿನ್ನಲೆ ಗಾಯಕಿ. ಹಲವಾರು ತಮಿಳು ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಪೃಥ್ವಿ' (Pruthwi) ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ.ಇವರು ಕೊನೆಯದಾಗಿ ಚಿರಂಜೀವಿ ಅಭಿನಯದ 'ವಾಲ್ಟೇರ್ ವೀರಯ್ಯ' (Waltair Veerayya) ಮತ್ತು ನಂದಮೂರಿ ಬಾಲಕೃಷ್ಣರ 'ವೀರ ಸಿಂಹ ರೆಡ್ಡಿ' ನಲ್ಲಿ ಕಾಣಿಸಿಕೊಂಡರು, ಇವೆರಡೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಅವರು ಮುಂದೆ ಪ್ರಶಾಂತ್ ನೀಲ್ ಅವರ ಹೈ-ವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಲಾರ್‌ನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಎದುರು ಕಾಣಿಸಿಕೊಳ್ಳಲಿದ್ದಾರೆ, ಇದು ಸೆಪ್ಟೆಂಬರ್ 28 ರಂದು ತೆರೆಗೆ ಬರಲಿದೆ.
ರಾಮ್ ಚರಣ್ಗೆ ಇಷ್ಟವಿಲ್ಲದಿದ್ರೂ ಲಿಪ್ಲಾಕ್ ಮಾಡಿದ್ರಾ ಸಮಂತಾ?