Shreya Dhanwanthary Photoshoot: ಕೋಟ್‌ನ ಆ ಬಟನ್ ಬಿಚ್ಬಿಡಿ... ನೋಡಿ ಧನ್ಯರಾಗ್ತೇವೆ ಎಂದ ಫ್ಯಾನ್ಸ್​!

ನಟಿ ಶ್ರೇಯಾ  ಧನ್ವಂತ್ರಿ ಬಟನ್​ ಬಿಚ್ಚುಕೊಂಡಿರುವ ಷರ್ಟ್​ನಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಕಮೆಂಟಿಗರು ಹಾಗೂ ಫ್ಯಾನ್ಸ್​ ಏನು ಹೇಳಿದ್ದಾರೆ? 
 

Shreya Dhanwantri gave a sizzling pose by opening the button of the shirt

ಇಂದು ಬಹುತೇಕ ನಟಿಯರು ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುತ್ತಿದ್ದಾರೆ. ಹಿಂದೊಮ್ಮೆ ದೇಹ ಪ್ರದರ್ಶನ ಮಾಡುವುದಕ್ಕಾಗಿಯೇ ಕೆಲವೊಂದು ನಟಿಯರನ್ನು ಚಿತ್ರರಂಗದಲ್ಲಿ ಇಟ್ಟುಕೊಳ್ಳಲಾಗುತ್ತಿತ್ತು. ಅಂಥ ಸಂದರ್ಭದಲ್ಲಿ ಕೂಡ ಅವರು ಒಳಗಡೆ ಮೈ ಬಣ್ಣದ ಬಟ್ಟೆಯನ್ನು ತೊಟ್ಟು ಹೊರಗಡೆ ಸೆಕ್ಸಿ ಕಾಣುವ ಡ್ರೆಸ್​ ಧರಿಸುತ್ತಿದ್ದರು. ಆದರೆ ಕೆಲ ದಶಕಗಳಿಂದ ಸಿನಿಮಾರಂಗದ ಚಿತ್ರ ಸಂಪೂರ್ಣ ಬದಲಾಗಿದೆ. ನಾಯಕಿಯರೇ ಮೈಚಳಿ ಬಿಟ್ಟು ನಟಿಸುತ್ತಿರುವುದರ ಜೊತೆಗೆ ದೇಹ ಪ್ರದರ್ಶನವನ್ನು ಅಶ್ಲೀಲ (vulgarity) ಎನ್ನುವ ಮಟ್ಟಿಗೆ ಕೊಂಡೊಯ್ಯುತ್ತಿದ್ದಾರೆ. ಅದರಲ್ಲಿಯೂ ಸಾಮಾಜಿಕ ಜಾಲತಾಣ ಬಂದ ಮೇಲಂತೂ ನಟಿಯರು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ನೋಡುಗರೇ ಕಣ್ಣುಮುಚ್ಚಿಕೊಳ್ಳುವಂಥ ಬಟ್ಟೆಗಳನ್ನು ಧರಿಸಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡಿದರೆ ಮಾತ್ರ ತಮಗೆ ಸಿನಿಮಾದಲ್ಲಿ ನೆಲೆ ನಿಲ್ಲಲು ಸಾಧ್ಯ ಎಂಬುದನ್ನು ಈ ನಟಿಯರು ತಿಳಿದಂತಿದೆ. ಅದಕ್ಕಾಗಿಯೇ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಇಂಥ ಫೋಟೋಶೂಟ್​ಗಳೇ ಹೆಚ್ಚಾಗಿವೆ.

ಇದೀಗ ನಟಿ ಶ್ರೇಯಾ ಧನ್ವಂತರಿ ಸರದಿ. ಶ್ರೇಯಾ ಧನ್ವಂತರಿ (Shreya Dhanwanthary) ಒಬ್ಬ ನಟಿ ಮಾತ್ರವಲ್ಲ ಖ್ಯಾತ ರೂಪದರ್ಶಿ ಆಗಿಯೂ ಕೆಲಸ ಮಾಡುತ್ತಾರೆ. ಅವರು ಮುಖ್ಯವಾಗಿ ತೆಲುಗು ಉದ್ಯಮದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಹಿಂದಿ ಚಿತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ, ಮನೋಜ್ ಬಾಜಪೇಯಿ ಅವರ ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್​ನಿಂದ ಶ್ರೇಯಾ ಧನ್ವಂತರಿ ಎಲ್ಲೆಡೆ ಖ್ಯಾತಿ ಪಡೆದವರು. ಈ ಸಿರೀಸ್​ನಲ್ಲಿ ಅವರ ನಟನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇಂತಿಪ್ಪ ನಟಿ ಕೆಲ ತಿಂಗಳ ಹಿಂದೆ,  ಸಮುದ್ರತೀರದಲ್ಲಿ ಬೋಲ್ಡ್ ಅವತಾರ ಬಿಟ್ಟು ಸೀರೆಯಲ್ಲಿ ಕಾಣಿಸಿಕೊಂಡು ಸಕತ್​ ವೈರಲ್​ ಆಗಿದ್ದರು. ಪ್ರಿಂಟೆಡ್ ಸೀರೆ ಉಟ್ಟು ಸೆರಗನ್ನು ಗಾಳಿಯಲ್ಲಿ ತೇಲಿಬಿಟ್ಟ ಸಮುದ್ರ ತೀರದ ಸಮಯವನ್ನು ಸಂಪೂರ್ಣವಾಗಿ ಆನಂದಿಸಿರುವ ಫೋಟೋ ಶೇರ್​ ಮಾಡಿಕೊಂಡು ಸುಂದರವಾಗಿ ಕಾಣಿಸುತ್ತಿದ್ದರು.ಜೊತೆಗೆ ಅವರ ಫ್ಯಾನ್ಸ್​ ಕೂಡ ಈ ಫೋಟೋಗೆ ತುಂಬಾ ಶ್ಲಾಘನೆ ವ್ಯಕ್ತಪಡಿಸಿದ್ದರು.

Ramya: ಡಾಲಿಗೆ ಭರ್ಜರಿ ಕಾರು ಗಿಫ್ಟ್​ ಸಿಗ್ತಿದ್ದಂತೆಯೇ ರಮ್ಯಾ ಇಟ್ರು ಹೊಸ ಕೋರಿಕೆ!

ಆದರೆ ಇಂದು ಶ್ರೇಯಾ ಅವರ ಅವತಾರ ನೋಡಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. ಮುಕ್ಕಾಲು ಭಾಗ ದೇಹ ಪ್ರದರ್ಶನ ಮಾಡುವ ಫೋಟೋಶೂಟ್​ ಮಾಡಿಸಿಕೊಂಡಿರುವ ನಟಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​  ಮಾಡಿಕೊಂಡಿದ್ದಾರೆ. ಬಿಳಿಯ ಷರ್ಟ್​ ಧರಿಸಿರುವ ಅವರು ಅದರಲ್ಲಿನ ಒಂದು ಬಟನ್​ ಅಷ್ಟೇ ಕ್ಲೋಸ್​ ಮಾಡಿಕೊಂಡಿದ್ದು, ಅಂಗ ಪ್ರದರ್ಶನ ಮಾಡಿದ್ದಾರೆ. ಮೈಮೇಲೆ ಬಟ್ಟೆ ನಿಲ್ಲದ ಸರದಿಗೆ ನೀವೂ ಸೇರಿದಿರಾ ಎಂದು ಹಲವು ಕಮೆಂಟಿಗರು ಶ್ರೇಯಾರನ್ನು ಪ್ರಶ್ನಿಸುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ನಿಮ್ಮದು ಈ ವೇಷನಾ ಎಂದು ಕೆಲವರು ಪ್ರಶ್ನಿಸಿದ್ದರೆ, ಬೇಸಿಗೆಯಲ್ಲಿ ಮೈ ಮೇಲೆ ಬಟ್ಟೆ ನಿಲ್ಲುತ್ತಿಲ್ಲವೇ ಎಂದು ವ್ಯಂಗ್ಯ ಮಾಡಿದ್ದಾರೆ. ಆ ಒಂದು ಬಟನ್​ (Button) ಏಕೆ ಹಾಕಿಕೊಂಡಿದ್ದೀರಿ, ಅದನ್ನೂ ಬಿಚ್ಚುಬಿಡಿ, ನೋಡಿ ಧನ್ಯವಾರುತ್ತೇವೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ! 

ಅಂದಹಾಗೆ ಶ್ರೇಯಾ ಧನ್ವಂತರಿ ಭಾರತೀಯ ನಟಿ, ಲೇಖಕಿ (Author) ಮತ್ತು ಉದ್ಯಮಿ. 35 ವರ್ಷದ ಶ್ರೇಯಾ  ಹೈದರಾಬಾದ್‌ನಲ್ಲಿ ಜನಿಸಿದವರು.  ಹೈದರಾಬಾದ್‌ನ ಮುಫಖಮ್ ಜಾಹ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಇಸಿಇಯಲ್ಲಿ ತಂತ್ರಜ್ಞಾನದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ನಂತರ, ಅವರು ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು.  2018 ರಲ್ಲಿ 'ದಿ ರಿಯೂನಿಯನ್' ವೆಬ್ ಸರಣಿಯೊಂದಿಗೆ ನಟನಾ ವೃತ್ತಿ ಪ್ರಾರಂಭಿಸಿದರು.  2019 ರಲ್ಲಿ ಅಮೆಜಾನ್ ಪ್ರೈಮ್ ವೆಬ್ ಸರಣಿ 'ದಿ ಫ್ಯಾಮಿಲಿ ಮ್ಯಾನ್' ನಲ್ಲಿ ಜೋಯಾ ಪಾತ್ರಕ್ಕಾಗಿ ಮನ್ನಣೆ ಗಳಿಸಿದರು.  ನಟನೆಯ ಹೊರತಾಗಿ ಶ್ರೇಯಾ  ಲೇಖಕಿಯೂ ಹೌದು. ಅವರು ತಮ್ಮ ಚೊಚ್ಚಲ ಪುಸ್ತಕ, 'ಫೇಡ್ ಟು ಬ್ಲೂ,' ಅನ್ನು 2020 ರಲ್ಲಿ ಪ್ರಕಟಿಸಿದರು. ಈ ಪುಸ್ತಕವು ಛಾಯಾಗ್ರಹಣದಲ್ಲಿ ತನ್ನ ಉತ್ಸಾಹವನ್ನು ಮುಂದುವರಿಸಲು ಬಯಸುವ ದಿಯಾ ಎಂಬ ಹುಡುಗಿಯ ಬಗೆಗಿನ  ಕಥೆಯಾಗಿದ್ದು, ಈ ಪುಸ್ತಕ ಸಾಕಷ್ಟು  ಗೌರವ ಗಳಿಸಿದೆ. ಅದೇ ಇನ್ನೊಂದೆಡೆ ಶ್ರೇಯಾ  ಉದ್ಯಮಿ ಕೂಡ. ಅವರು 'ಚಾಪ್ಟರ್​ ಫೈವ್​' ಎಂಬ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಯ ಸ್ಥಾಪಕಿಯಾಗಿದ್ದಾರೆ. ಇದು  ಜೀವನಶೈಲಿ,  ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ವಲಯಗಳಲ್ಲಿ ಗ್ರಾಹಕರಿಗೆ ಏಜೆನ್ಸಿ ಸೇವೆ ಸಲ್ಲಿಸುತ್ತದೆ. ಶ್ರೇಯಾ ಧನ್ವಂತರಿ ನಿಧಾನವಾಗಿ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾರೆ. ಅವರು ತೆಲುಗು ಚಲನಚಿತ್ರವಾದ ಜೋಶ್ (Josh) ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅವರು ಇಮ್ರಾನ್ ಹಶ್ಮಿಯವರ ವೈ ಚೀಟ್ ಇಂಡಿಯಾದಲ್ಲಿಯೂ ಕೆಲಸ ಮಾಡಿದ್ದಾರೆ.

ಶಾರುಖ್​- ಅಮಿತಾಭ್​ ಆಗಲಿದ್ದಾರಾ ಹತ್ತಿರದ ಸಂಬಂಧಿ? ಏನಿದು ಹೊಸ ವಿಷ್ಯ?

Latest Videos
Follow Us:
Download App:
  • android
  • ios