Asianet Suvarna News Asianet Suvarna News

ಶಿವಣ್ಣನಿಗೆ ಆಫರ್‌ಗಳ ಮೇಲೆ ಆಫರ್: ಕಮಲ್ ಹಾಸನ್ ಸಿನಿಮಾಗೂ ಬೇಕು ಸೆಂಚುರಿ ಸ್ಟಾರ್!

ಸೆಂಚುರಿ ಸ್ಟಾರ್ ಡಾಕ್ಟರ್ ಶಿವರಾಜ್ ಕುಮಾರ್.. ಸ್ಯಾಂಡಲ್ವುಡ್ಗೆ ಕರುನಾಡ ಚಕ್ರವರ್ತಿ. ಅಕ್ಕ ಪಕ್ಕದ ಟಾಲಿವುಡ್, ಕಾಲಿವುಡ್ ಮಂದಿಗೆ ದೊಡ್ಮನೆ ಮಗ. ಸ್ನೇಹಿತ, ಗೆಳೆಯ.. ಶಿವಣ್ಣ ಎಲ್ಲರ ಅಚ್ಚು ಮೆಚ್ಚು. ಶಿವಣ್ಣ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ. 
 

Shivarajkumar in another Kollywood film after Jailer gvd
Author
First Published Nov 8, 2023, 8:30 PM IST

ಸೆಂಚುರಿ ಸ್ಟಾರ್ ಡಾಕ್ಟರ್ ಶಿವರಾಜ್ ಕುಮಾರ್.. ಸ್ಯಾಂಡಲ್ವುಡ್ಗೆ ಕರುನಾಡ ಚಕ್ರವರ್ತಿ. ಅಕ್ಕ ಪಕ್ಕದ ಟಾಲಿವುಡ್, ಕಾಲಿವುಡ್ ಮಂದಿಗೆ ದೊಡ್ಮನೆ ಮಗ. ಸ್ನೇಹಿತ, ಗೆಳೆಯ.. ಶಿವಣ್ಣ ಎಲ್ಲರ ಅಚ್ಚು ಮೆಚ್ಚು. ಶಿವಣ್ಣ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಆದ್ರೆ ಅಕ್ಕ ಪಕ್ಕದ ಚಿತ್ರರಂಗದಲ್ಲಿ ಒಂದು ಕೈ ಹೆಚ್ಚೇ ಬ್ಯೂಸಿ ಆಗ್ತಿದ್ದಾರೆ ಶಿವಣ್ಣ. ಶಿವಣ್ಣನಿಗೆ ಕಾಲಿವುಡ್ನಲ್ಲಿ ಆಫರ್ಗಳ ಮೇಲೆ ಆಫರ್ ಬರುತ್ತಿವೆ. ಇದಕ್ಕೆ ಕಾರಣ ಒನ್ಸ್ ಅಗೈನ್ ಸೂಪರ್ ಸ್ಟಾರ್ ರಜನಿಕಾಂತ್ ರ ಜೈಲರ್ ಸಿನಿಮಾದ ನರಸಿಂಹ ಕ್ಯಾರೆಕ್ಟರ್. ಹ್ಯಾಟ್ರಿಕ್ ಹೀರೋಗೆ ಕಾಲಿವುಡ್ ಸಿನಿ ಜಗತ್ತಿನಿಂದ ಮತ್ತೊಂದು ಬಿಗ್ ಆಫರ್ ಬಂದಿದೆ. 

ಉಳಗ ನಾಯಗನ್ ಕಮಲ್ ಹಾಸನ್ ಹಾಗು ಮಣಿರತ್ನಂ ಕಾಂಬಿನೇಷನ್ನಲ್ಲಿ ಥಗ್ ಲೈಫ್ ಸಿನಿಮಾ ಬರ್ತಿದೆ. ಈ ಸಿನಿಮಾದ ಪ್ರಮುಕ ಪಾತ್ರವೊಂದಕ್ಕೆ ಶಿವಣ್ಣನೇ ಬೇಕು ಅಂತ ಕೂತಿದ್ದಾರಂತೆ ನಟ ಕಮಲ್ ಹಾಸನ್. ಶಿವಣ್ಣ ಜೈಲರ್ನಲ್ಲಿ ನಟಿಸಿದ ಮೇಲೆ ಕಾಲಿವುಡ್ನಲ್ಲಿ ಶಿವಣ್ಣ ಕ್ರೇಜ್ ಹೆಚ್ಚಾಗಿದೆ. ಇದನ್ನ ಗಮನದಲ್ಲಿಟ್ಟುಕೊಂಡಿರೋ ಕಮಲ್ ಹಾಸನ್ ತನ್ನ ಸಿನಿಮಾದಲ್ಲೂ ಶಿವರಾಜ್ ಕುಮಾರ್ ನಟಿಸಲಿ ಅಂದಿದ್ದಾರಂತೆ. ಜೈಲರ್ ಸಿನಿಮಾದಲ್ಲಿ 11 ನಿಮಿಷ ಬರೋ ಶಿವಣ್ಣನ ನರಸಿಂಹನ ಪಾತ್ರ ಎಷ್ಟು ಇಂಪ್ಯಾಕ್ಟ್ ಮಾಡಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ. ಇತ್ತೀಚೆಗಷ್ಟೆ ನಟ ಶಿವರಾಜ್ ಕುಮಾರ್ ಹಾಗು ಕಮಲ್ ಹಾಸರ್ ಮುಂಬೈನಲ್ಲಿ ಭೇಟಿ ಆಗಿದ್ರು. 

ನಾನು ಕಮಲ್ ಹಾಸನ್ರ ಒಬ್ಬ ಫ್ಯಾನ್ ಬಾಯ್ ತರ ಭೇಟಿ ಮಾಡಿ ಬಂದೆ ಅಂದಿದ್ರು ಶಿವಣ್ಣ. ಈಗ ಕಮಲ್ ಸಿನಿಮಾದಲ್ಲೇ ಶಿವಣ್ಣ ಕಾಣಿಸಿಕೊಳ್ಳಬೇಕು ಅಂತ ಮಾತುಕತೆ ಕೂಡ ಮಾಡಿದ್ದಾರೆ. ಸಧ್ಯ ತಮಿಳಿನಲ್ಲಿ ಧನುಷ್ ಜೊತೆ ಶಿವಣ್ಣ ನಟಿಸಿರೋ ಕ್ಯಾಪ್ಟರ್ ಮಿಲ್ಲರ್ ಸಿನಿಮಾ ಬಿಡುಗಡೆ ಆಗಬೇಕಿದೆ. ಶಿವಣ್ಣನ ಗ್ಯಾಂಗ್ಸ್ಟರ್ ಪಾತ್ರಕ್ಕೆ ಕಳೆ ಹೆಚ್ಚಿದ್ದೆ ಓಂ ಸಿನಿಮಾದ ಸತ್ಯ ಕ್ಯಾರೆಕ್ಟರ್. ಶಿವಣ್ಣ ಲಾಂಗ್ ಹಿಡಿದ್ರೆ ಸಾಕು ಸಿನಿಮಾ ಹಿಟ್ ಅನ್ನೋ ನಂಬಿಕೆ ಜಾಸ್ತಿಯಾಗಿದ್ದು ಜೋಗಿ ಸಿನಿಮಾದಿಂದಿಂದ. ಹಳ್ಳೀಯಿಂದ ಬಂದು ದಿಲ್ಲೀಗೆ ಗ್ಯಾಂಗ್ ಸ್ಟರ್ ಆಗೋ ಹೀರೋ ಕತೆಗಳಲ್ಲಿ ಮತ್ತೊಮ್ಮೆ ಶಿವಣ್ಣನನ್ನು ಜನ ಒಪ್ಪಿಕೊಂಡಿದ್ದು ಇದೇ ಜೋಗಿ ಸಿನಿಮಾದಿಂದ. 

37 ವರ್ಷದ ಬಳಿಕ ಒಂದಾದ ಮಣಿರತ್ನಂ-ಕಮಲ್: ಥಗ್ ಲೈಫ್‌ನಲ್ಲಿ ತ್ರಿಮೂರ್ತಿಗಳ ಸಮಾಗಮ.!

ದುನಿಯಾ ಸೂರಿ ಕೂಡ ಶಿವಣ್ಣನ ಮೇಲೆ ಈ ಡಕ್ಸ್ಪರಿಮೆಂಟ್ ಮಾಡಿ ಗೆದ್ದಿದ್ರು.ಕಡ್ಡಿಪುಡಿ ಅದಕ್ಕೊಂದು ಎಕ್ಸಾಂಪಲ್. ಇಲ್ಲೂ ರೌಡಿಸಂ ಕಥೆ ಇತ್ತು. ಶಿವರಾಜ್ ಕುಮಾರ್ ಇಲ್ಲೂ ಲಾಂಗ್ ಹಿಡಿದು ಅಬ್ಬರಿಸಿದ್ದರು. ತಣ್ಣನೆಯ ಗ್ಯಾಂಗ್ಸ್ಟರ್ ಕಣ್ಣಲ್ಲೆ ಫೈರ್ ತೋರಿಸಬಲ್ಲ ಕ್ಯಾರೆಕ್ಟರ್ ಅದು ಬೈರತಿ ರಣಗಲ್ ಕ್ಯಾರೆಕ್ಟರ್ ಮಫ್ತಿ ಚಿತ್ರದಲ್ಲಿರೋ ಶಿವಣ್ಣನ ಪಾತ್ರ ಇವತ್ತಿಗೂ ಅವ್ರ ಫ್ಯಾನ್ಸ್ ಫೇವರಿಟ್. ಇದೀಗ ಮಫ್ತಿ ಮುಂದುವರಿದ ಭಾಗ ಭೈರತಿ ರಣಗಲ್ ಕ್ಯಾರೆಕ್ಟರ್ ಮೇಲೇನೆ ಇದರ ಪ್ರೀಕ್ವೆಲ್ ಸಿನಿಮಾ ಬರ್ತಿದೆ. ಇದೀಗ ನರಸಿಂಹ ಟೈಟಲ್ನಲ್ಲೆ ಸಿನಿಮಾ ಬಂದ್ರೂ ಅಚ್ಚರಿಯಿಲ್ಲ. ಸದ್ಯ ಘೋಸ್ಟ್ ಫೀವರ್ನಲ್ಲಿ ಮುಳುಗಿದೆ ಶಿವಣ್ಣನ ಫ್ಯಾನ್ಸ್.

Follow Us:
Download App:
  • android
  • ios