Asianet Suvarna News Asianet Suvarna News

37 ವರ್ಷದ ಬಳಿಕ ಒಂದಾದ ಮಣಿರತ್ನಂ-ಕಮಲ್: ಥಗ್ ಲೈಫ್‌ನಲ್ಲಿ ತ್ರಿಮೂರ್ತಿಗಳ ಸಮಾಗಮ.!

ದೊಡ್ಡ ಬಯಲು ಪ್ರದೇಶ.. ಕಣ್ಣು ಹಾಯಿಸಿದಷ್ಟೂ ಕಾಣುವ ಖಾಲಿ ಪ್ರದೇಶ. ಕಪ್ಪು ಮಣ್ಣಿನ ಆ ಜಾಗದಲ್ಲಿ ಒಂದು ಬದಿ ಶಾಲು ಹೊದ್ದು ಪಕ್ಕಾ ಮಾಸ್ ಅವತಾರದಲ್ಲಿ ನಂತಿರೋ ವ್ಯಕ್ತಿ. ಅವನ ಎದುರು ಕತ್ತಿ ಗರಾಣಿ ಹಿಡಿದು ನುಗ್ಗಿ ಬರುತ್ತಿರೋ ವೈರಿಗಳ ಗುಂಪು.

Kamal Haasan Jayam Ravi Dulquer Salmaan Starrer Thug Life Movie Teaser Released gvd
Author
First Published Nov 8, 2023, 8:20 PM IST

ದೊಡ್ಡ ಬಯಲು ಪ್ರದೇಶ.. ಕಣ್ಣು ಹಾಯಿಸಿದಷ್ಟೂ ಕಾಣುವ ಖಾಲಿ ಪ್ರದೇಶ. ಕಪ್ಪು ಮಣ್ಣಿನ ಆ ಜಾಗದಲ್ಲಿ ಒಂದು ಬದಿ ಶಾಲು ಹೊದ್ದು ಪಕ್ಕಾ ಮಾಸ್ ಅವತಾರದಲ್ಲಿ ನಂತಿರೋ ವ್ಯಕ್ತಿ. ಅವನ ಎದುರು ಕತ್ತಿ ಗರಾಣಿ ಹಿಡಿದು ನುಗ್ಗಿ ಬರುತ್ತಿರೋ ವೈರಿಗಳ ಗುಂಪು. ಈ ದೃಶ್ಯ ನೋಡ್ತಿದ್ರೆ ಯಾವ್ದೋ ಹಾಲಿವುಡ್ ಸಿನಿಮಾ ಇರಬೇಕು ಅನ್ನಿಸುತ್ತೆ. ಕಾಲಿವುಡ್‌ನ ಉಳಗ ನಾಯಗನ್ ಕಮಲ್ ಹಾಸನ್ಗೆ ಹುಟ್ಟುಹಬ್ಬ. ಈ ಹುಟ್ಟುಹಬ್ಬದಂದೇ ಕಮಲ್ ಹಾಸನ್ ಮಾಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಆ ಸಿನಿಮಾವೇ ಥಗ್ ಲೈಫ್. 

ಕಮಲ್ ಹುಟ್ಟುಹಬ್ಬಕ್ಕೆ ಈ ಥಗ್ ಲೈಫ್ ಟೈಟಲ್ ಟೀಸರ್ ರಿಲೀಸ್ ಆಗಿದೆ. ಉಳಗ ನಾಯಕನ್ ಈಗ 'ರಂಗರಾಯ ಶಕ್ತಿವೇಲ್ ನಾಯಕರ್ ಆಗಿದ್ದಾರೆ. ಥಗ್ ಲೈಫ್ ಅಂದ್ರೆ ದರೋಡೆ ಕೋರರ ಜೀವನ. ಥಗ್ ಅಂತ ಕಳ್ಳರಿಗೆ ಕರೆಯುತ್ತಾರೆ. ಇಲ್ಲಿ ರಂಗರಾಯ ಶಕ್ತಿವೇಲ್ ನಾಯಕರ್ ರೋಲ್ ಮಾಡ್ತಿರೋ ಕಮಲ್ ದರೋಡೆಕೋರದ ಲೈಫ್ ಸ್ಟೋರಿ ಹೇಳ್ತಿರೋ ಹಾಗೆ ಕಾಣುತ್ತೆ. ಜಪಾನಿನ ದರೋಡೆಕೋರ ಕಥೆ ಈ ಸಿನಿಮಾ. ಈ ಟೀಸರ್ನಲ್ಲಿ ಕಮಲ್ ದರೋಡೆಕೋರರ ಗುಂಪಿನ ಜೊತೆ ಭರ್ಜರಿಯಾಗಿ ಕಾದಾಡಿದ್ದಾರೆ. ಥಗ್‌ ಲೈಫ್ ನಲ್ಲಿ ಕಮಲ್ರ ಆ್ಯಕ್ಷನ್ ಧಮಾಕ ನೋಡಿ ಫ್ಯಾನ್ಸ್ ಬೆರಗಾಗಿದ್ದಾರೆ. 

ಕಾಲಿವುಡ್‌ನಲ್ಲಿ 1987ರಲ್ಲಿ ಕಮಲ್ ಹಾಸನ್ರ ಗ್ಯಾಂಗ್ಸ್ಟರ್ ಕತೆಯ ನಾಯಕನ್ ಸಿನಿಮಾ ಬಂದಿತ್ತು. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಮಣಿರತ್ನಂ. ಈಗ ಇದೇ ಕಮಲ್ ಹಾಗು ಮಣಿರತ್ನಂ ಜೋಡಿ ಮತ್ತೆ ಒಂದಾಗಿದೆ. ಈಗ ಥಗ್ ಲೈಫ್ ಮೂಲಕ ಅದೇ ಹಳೇ ವೈಭವ ಮತ್ತೆ ಸೃಷ್ಟಿಸಲು ಈ ಸೂಪರ್ ಹಿಟ್ ಜೋಡಿ ಪ್ಲ್ಯಾನ್ ಮಾಡಿದ್ದಾರೆ ಅನ್ನೋದು ಈ ಟೀಸರ್ ನೊಡಿದ್ರೆ ಗೊತ್ತಾಗುತ್ತೆ. ಹಾಲಿವುಡ್ ರೇಂಜ್ ಮೇಕಿಂಗ್, ಭರ್ಜರಿ ಆಕ್ಷನ್, ಥ್ರಿಲ್ ಕೊಡೋ ಡೈಲಾಗ್ ಜೊತೆಗೆ ವಾವ್ ಅನ್ನಿಸೋ ಮ್ಯೂಸಿಕ್ ಥಗ್ ಲೈಫ್ನ ಹೈಲೆಟ್. 

ರಾಕಿ ಬಾಯ್ ಬಗ್ಗೆ ಸಿಕ್ತು ಮತ್ತೊಂದು Exclusive: ಆ ಡೈರೆಕ್ಟರ್‌ಗೆ ಸಿಕ್ಕೇ ಬಿಡ್ತು ಯಶ್ ಕಾಲ್ ಶೀಟ್!

ಎ, ಆರ್ ರೆಹೆಮಾನ್ ಮ್ಯೂಸಿಕ್ ಥಗ್ ಲೈಫ್ಗೆ ಸಿಕ್ಕಿದೆ. ಒಂದ್ ಕಡೆ ಲೆಜೆಂಡ್ ಹೀರೋ ಕಮಲ್ ಹಾಸನ್, ಮತ್ತೊಂದ್ ಕಡೆ ಲೆಜೆಂಡ್ ಡೈರೆಕ್ಟರ್ ಮಣಿರತ್ನಂ ಮೊಗದೊಂದು ಕಡೆ ಲೆಜೆಂಡ್ ಮ್ಯೂಸಿಕ್ ಡೈರೆಕ್ಟರ್ ಎ. ಆರ್ ರೆಹಮಾನ್.. ಈ ಮೂರು ಜನ ತ್ರಿಮೂರ್ತಿಗಳು ಥಗ್ ಲೈಫ್ನಲ್ಲಿ ಒಟ್ಟಾಗಿರೋದ್ರಿಂದ ಈ ಸಿನಿಮಾ  ಭಾರಿ ನಿರೀಕ್ಷೆ ಮೂಡಿಸಿದೆ. ಇನ್ನು ಥಗ್ ಲೈಫ್ನ ಮತ್ತೊಂದು ಹೈಲೆಟ್ ಸ್ಟಾರ್ ಕಾಸ್ಟ್. ಕಮಲ್ ಹಾಸನ್ ಜೊತೆ ದುಲ್ಕರ್ ಸಲ್ಮಾನ್, ಜಯಂ ರವಿ, ಮತ್ತು ತ್ರಿಶಾ ಕೂಡ ಇದ್ದಾರೆ. ಹೀಗಾಗಿ ಇದು ಮಲ್ಟಿ ಸ್ಟಾರ್ಸ್ ಸಿನಿಮಾ ರೀತಿ ಕಾಣಿಸುತ್ತಿದೆ. 

Follow Us:
Download App:
  • android
  • ios