ಕ್ಯಾನ್ಸರ್ ಗೆದ್ದ ನಟ ಶಿವರಾಜ್ ಕುಮಾರ್, ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೆದುಳಿನ ಶಸ್ತ್ರಚಿಕಿತ್ಸೆ, ಹೃದಯದ ಸ್ಟೆಂಟ್, ಮತ್ತು ಹಲವು ಮೂಳೆ ಮುರಿತಗಳ ನಡುವೆಯೂ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಪತ್ನಿ ಗೀತಾ ಅವರ ರಾಜಕೀಯ ಆಸಕ್ತಿಗೆ ಬೆಂಬಲ ನೀಡಿದ್ದಾರೆ. ಮಗಳು ನಿವೇದಿತಾ ನಿರ್ಮಾಣದ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ನಟ ಶಿವರಾಜ್ ಕುಮಾರ್ ಕ್ಯಾನ್ಸರ್ ಗೆದ್ದು, ಸಿನಿಮಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯಿಂದ ಕೆಲ ಕಾಲ ರೆಸ್ಟ್ ತೆಗೆದುಕೊಂಡಿದ್ದ ಶಿವಣ್ಣ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಕಿಮೋ ಥೆರಪಿ ಬಳಿಕವೂ ಸ್ವಲ್ಪವೂ ಅಚಲರಾಗದೇ ನಟ ಫಿಟ್ ಆ್ಯಂಡ್ ಫೈನ್ ಆಗಿದ್ದ ಕಾರಣ, ಅವರು ಅನಾರೋಗ್ಯದಿಂದ ಬಳಲುತ್ತಿದ್ದುದು ಬಹುತೇಕರಿಗೆ ತಿಳಿದೇ ಇರಲಿಲ್ಲ. ಕಳೆದ ನಾಲ್ಕೈದು ತಿಂಗಳುಗಳ ಹಿಂದೆಯೇ ಅವರಿಗೆ ಈ ಸಮಸ್ಯೆಯ ಅರಿವು ಇತ್ತು. ಆದರೆ, ಅಮೆರಿಕಕ್ಕೆ ಚಿಕಿತ್ಸೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಮಾತ್ರ ಬರಸಿಡಿಲಿನಂತೆ ಬಡಿದಿತ್ತು. ಮೊದಲ ಕಿಮೋ ಥೆರಪಿ ಮಾರನೆಯ ದಿನವೇ ಶಿವಣ್ಣ, ಶೂಟಿಂಗ್ನಲ್ಲಿ ಭಾಗಿಯಾಗಿದ್ದು ಆ್ಯಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಆದ್ದರಿಂದ ಅವರ ಒಳಗೇ ಅನುಭವಿಸುತ್ತಿದ್ದ ನೋವು ಅವರ ಕುಟುಂಬಸ್ಥರಿಗೆ ಮಾತ್ರ ತಿಳಿದಿತ್ತು. ಇದೀಗ ಎಲ್ಲಾ ನೋವನ್ನು ನುಂಗಿ ಮತ್ತೆ ಕೆಲಸ ಶುರು ಮಾಡಿದ್ದಾರೆ.
ಇದೀಗ ಅವರು ಮಾಧ್ಯಮವೊಂದಕ್ಕೆ ನೀಡಿರುವ ಶಾಕಿಂಗ್ ಸಂದರ್ಶನವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಶಿವರಾಜ್ ಕುಮಾರ್ ಅವರು, ನನಗೆ ಮೈತುಂಬಾ ಸಮಸ್ಯೆ ಇದೆ. ನಾನೂ ಮನುಷ್ಯನೇ ಸಮಸ್ಯೆ ಬಂದೇ ಬರುತ್ತದೆ. ಹಾಗೆ ನೋಡುವುದಾದರೆ ಈಗ ಕ್ಯಾನ್ಸರ್ ಚಿಕಿತ್ಸೆ ಆಗಿದೆ. ಆದರೆ ಅದಕ್ಕೂ ಮೊದಲು ಪ್ಯಾರೀಸ್ನಲ್ಲಿ ಮೆದುಳಿನ ಸರ್ಜರಿಯಾಗಿತ್ತು (anausysm operation). ಆಸೆಗೊಬ್ಬ ಮೀಸೆಗೊಬ್ಬ ಚಿತ್ರೀಕರಣದ ಸಮಯದಲ್ಲಿ ಕೈಗೆ ಫ್ರಾಕ್ಚರ್ ಆಗಿತ್ತು. ಕಾಲಿಗೆ ಅದೆಷ್ಟು ಸಲ ಫ್ರಾಕ್ಚರ್ ಆಗಿದ್ಯೋ ಗೊತ್ತಿಲ್ಲ. ಭುಜದಲ್ಲಿಯೂ ಸಮಸ್ಯೆ ಇದೆ. ಬಲ ಭುಜಕ್ಕೆ rotator cuff ನಿಂದ ಬಳಲುತ್ತಿದ್ದೇನೆ. ಹೃದಯಕ್ಕೂ ಸ್ಟೆಂಟ್ ಹಾಕಿದ್ದಾರೆ ಎನ್ನುವ ಶಾಕಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ.
ಅಪ್ಪ ಅವಳನ್ನು ಹಿಡ್ಕೊಂಡಾಗ ನಂಗೆ ಹೊಟ್ಟೆಕಿಚ್ಚಾಗಿತ್ತು: ಶಿವಣ್ಣ ಪುತ್ರಿ ಓಪನ್ ಮಾತು
ಇದನ್ನು ಕೇಳಿದವರು ಅಬ್ಬಾ ಎನ್ನುವಂತಿದೆ. ಆ್ಯಕ್ಷನ್ ಕಿಂಗ್ ಎಂದೇ ಫೇಮಸ್ ಆಗಿರೋ ಶಿವಣ್ಣಗೆ ಇಷ್ಟೆಲ್ಲಾ ಸಮಸ್ಯೆ ಇವೆಯಾ? ಆದರೂ ಯಾವುದನ್ನೂ ತೋರಗೊಡದೇ ಅದ್ಹೇಗೆ ಈ ವಯಸ್ಸಿನಲ್ಲಿಯೂ ಅಷ್ಟೊಂದು ಆ್ಯಕ್ಟೀವ್ ಆಗಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಅಷ್ಟಕ್ಕೂ, ಶಿವರಾಜ್ ಕುಮಾರ್ ಅವರು ಅನಾರೋಗ್ಯವಿದ್ದರೂ ಈ ಹಿಂದೆ ಪತ್ನಿ ಗೀತಾ ಅವರಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಕೆಲ ದಿನಗಳ ಹಿಂದೆ ಇದರ ಬಗ್ಗೆಯೂ ಅವರು ಮಾತನಾಡಿದ್ದರು. ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ ಶಿವರಾಜ್ ಕುಮಾರ್ ಅವರು, ಈ ಬಗ್ಗೆ ಕಮೆಂಟ್ಗಳು ಬರುವುದನ್ನು ನಾನು ಫೇಸ್ ಮಾಡುತ್ತೇನೆ. ಏಕೆಂದರೆ ಗೀತಾ ನನ್ನ ಪತ್ನಿ. ಅವರು ಸದಾ ನನಗೆ ಬೆನ್ನೆಲುಬಾಗಿ ನಿಂತವರು. ಅವರಿಗೆ ರಾಜಕೀಯಕ್ಕೆ ಹೋಗಬೇಕು ಎನ್ನುವ ಆಸೆ ಇತ್ತು, ಅದಕ್ಕೆ ನಾನು ಸಪೋರ್ಟ್ ಮಾಡಿದ್ದೇನೆ ಅಷ್ಟೇ. ಅವರು ಇದನ್ನೂ ಮಾಡಬಹುದು ಎಂದು ನಾನು ಸಪೋರ್ಟ್ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ. ನಾಳೆ ಅವರು ಬೇರೆ ಪಾರ್ಟಿಗೆ ಹೋದರೂ ನೀವು ಸಪೋರ್ಟ್ ಮಾಡುವಿರಾ ಎನ್ನುವ ಪ್ರಶ್ನೆಗೆ, ಶಿವಣ್ಣ ಅವರು ಹೌದು, ಅಷ್ಟೆನೇ.. ನಾನು ಯಾವ ಪಕ್ಷಕ್ಕೆ ಹೋದರೂ ಸಪೋರ್ಟ್ ಮಾಡುತ್ತೇನೆ ಅಷ್ಟೇ ಎಂದಿದ್ದಾರೆ.
ಇನ್ನು ಈಗ ಶಿವರಾಜ್‌ಕುಮಾರ್ ಮಗಳು ನಿವೇದಿತಾ ತಮ್ಮ ಮೊದಲ ನಿರ್ಮಾಣದ ಸಿನಿಮಾ ಫಯರ್ ಫ್ಲೈ ರಿಲೀಸ್‌ಗೆ ಸಜ್ಜಾಗಿದೆ. ಶ್ರೀ ಮುದ್ದು ಪ್ರೊಡಕ್ಷನ್ ಹೌಸ್‌ನಲ್ಲಿ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಭರ್ಜರಿ ಪ್ರಮೋಷನ್ ನಡೆಯುತ್ತಿದೆ. ಇಷ್ಟು ದಿನ ಕ್ಯಾಮೆರಾ ಹಿಂದೆ ಇದ್ದ ನಿರ್ಮಾಪಕ ಈಗ ಕ್ಯಾಮೆರಾ ಮುಂದೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇದೀಗ ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ.
ಗೀತಾ ಬೇರೆ ಪಕ್ಷಕ್ಕೆ ಹೋದ್ರೂ ಸಪೋರ್ಟ್ ಮಾಡುವೆ: ರಾಜಕೀಯ ಎಂಟ್ರಿ ಕುರಿತು ಶಿವರಾಜ್ ಕುಮಾರ್ ಹೇಳಿದ್ದೇನು?
