Samisha Shetty: ಅಣ್ಣನ ಜೊತೆ ಹಬ್ಬದ ಮೂಡ್‌ನಲ್ಲಿ ಶಿಲ್ಪಾ ಶೆಟ್ಟಿ ಮಗಳು ಶಮಿತಾ ಶೆಟ್ಟಿ ಕುಂದ್ರಾ  ಕ್ಯೂಟ್ ವಿಶಿಂಗ್ ವಿಡಿಯೋ(Video)

ಇಂದು ಭಾಯ್ ದೂಜ್ ಹಬ್ಬದ ಸಂದರ್ಭ ಶಿಲ್ಪಾ ಶೆಟ್ಟಿ(Shilpa Shety) ಅವರು ತಮ್ಮ ಮಗ ವಿಯಾನ್ ರಾಜ್ ಕುಂದ್ರಾ ಮತ್ತು ಸಮೀಶಾ ಶೆಟ್ಟಿ ಕುಂದ್ರಾ ಅವರ ಮುದ್ದಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಒಡಹುಟ್ಟಿದ ಅಣ್ಣ ತಂಗಿ ಜೋಡಿಯು ಒಂದೇ ಪ್ರಿಂಟ್‌ನ ಕೆಂಪು ಕುರ್ತಾಗಳಲ್ಲಿ ಅವಳಿಯಾಗಿ ಶೈನ್ ಆಗುವುದನ್ನು ಕಾಣಬಹುದು. ವಿಯಾನ್ ವೀಡಿಯೊದಲ್ಲಿ(Video) ನಿಜವಾದ ಬಿಗ್‌ ಬ್ರದರ್‌ನಂತೆ ವರ್ತಿಸುತ್ತಾನೆ. ಅವರಿಬ್ಬರು ಮುದ್ದಾಗಿ ಹ್ಯಾಪಿ ಭಾಯಿ ದೂಜ್ ಹೇಳುತ್ತಾರೆ.

ಶಿಲ್ಪಾ ಶೆಟ್ಟಿ ಆಗಾಗ್ಗೆ ತಮ್ಮ ಮಕ್ಕಳಾದ ವಿಯಾನ್ ರಾಜ್ ಕುಂದ್ರಾ ಮತ್ತು ಸಮೀಶಾ ಶೆಟ್ಟಿ ಕುಂದ್ರಾ ಅವರ ಮುದ್ದಾದ ವೀಡಿಯೊಗಳು ಮತ್ತು ಫೋಟೋಗಳನ್ನು(Photos) ಹಂಚಿಕೊಳ್ಳುತ್ತಾರೆ. ಇಂದು, ಭಾಯಿ ದೂಜ್‌ನಲ್ಲಿ, ಮಕ್ಕಳು ಒಟ್ಟಿಗೆ ಎಂಜಾಯ್ ಮಾಡುತ್ತಿರುವ ಮತ್ತೊಂದು ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ಭಾಯಿ ದೂಜ್‌ಗಾಗಿ(Bhai Dooj) ವಿಯಾನ್ ಮತ್ತು ಸಮೀಶಾ ಪ್ರಿಂಟೆಡ್ ಕೆಂಪು ಕುರ್ತಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಅಭಿಮಾನಿಗಳಿಗೆ ಭಾಯಿ ದೂಜ್ ಶುಭಾಶಯಗಳನ್ನು ತಿಳಿಸಿದ್ದಾರೆ.

ಗಂಡನ ಬಿಡುಗಡೆಗೆ ಹರಕೆ ಹೊತ್ತು ಮುಡಿ ಕೊಟ್ಟರಾ ಶಿಲ್ಪಾ ಶೆಟ್ಟಿ ?

ವೀಡಿಯೊವನ್ನು ಹಂಚಿಕೊಂಡ ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ, ಒಡಹುಟ್ಟಿದವರ(Sibling) ನಡುವಿನ ಬಾಂಧವ್ಯವನ್ನು ಎಂದಿಗೂ ವಿವರಿಸಲಾಗುವುದಿಲ್ಲ, ಆದರೆ ಇದು ಯಾವಾಗಲೂ ನನ್ನನ್ನು ಬೆರಗುಗೊಳಿಸುತ್ತದೆ! ಸಮಿಶಾ ಮತ್ತು ಅವರ ಪಾಜಿ, ವಿಯಾನ್-ರಾಜ್ ಅವರಿಂದ ನಿಮ್ಮೆಲ್ಲರಿಗೂ ಭಾಯಿ ದೂಜ್ ಶುಭಾಶಯಗಳು ಎಂದು ಬರೆದಿದ್ದಾರೆ ಶಿಲ್ಪಾ.

Scroll to load tweet…

ಇತ್ತೀಚೆಗೆ, ಶಿಲ್ಪಾ ಶೆಟ್ಟಿ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದರು. ಇದರಲ್ಲಿ ವಿಯಾನ್ ಮತ್ತು ಸಮೀಶಾ ಒಟ್ಟಿಗೆ ಯೋಗ ಮಾಡುತ್ತಿರುವುದನ್ನು ಕಾಣಬಹುದು. ತನ್ನ ಪೋಸ್ಟ್‌ನಲ್ಲಿ, ಸಮತೋಲಿತ ಆಹಾರವನ್ನು ಆನಂದಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದರ ಪ್ರಯೋಜನಗಳನ್ನು ಮತ್ತು ಚಿಕ್ಕ ವಯಸ್ಸಿನಿಂದಲೂ ಫಿಟ್ ಆಗಿ ಉಳಿಯುವುದರ ಬಗ್ಗೆ ನಟಿ ವಿವರಿಸಿದ್ದಾರೆ.

ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ ರಾಜ್ ಕುಂದ್ರಾ!

ವೀಡಿಯೊದಲ್ಲಿ, ಪುಟ್ಟ ಹುಡುಗ ವಿಯಾನ್ ತನ್ನ ಚಿಕ್ಕ ತಂಗಿಗೆ ಯೋಗ(Yoga) ಮಾಡುವುದನ್ನು ಕಲಿಸುವುದನ್ನು ನೋಡಬಹುದು. ತಾಯಿ ಶಿಲ್ಪಾ ಶೆಟ್ಟಿ ತುಂಬಾ ಹೆಮ್ಮೆಪಡುತ್ತಾರೆ. ಮಕ್ಕಳು ಒದ್ದೆ ಮಣ್ಣಿನಂತೆ. ಆರೋಗ್ಯಕರ ಜೀವನಶೈಲಿಯ ಕಡೆಗೆ ಅವರ ವಿಧಾನವನ್ನು ನಾವು ಮೊದಲೇ ರೂಪಿಸಬೇಕು. ಸಮತೋಲಿತ ಆಹಾರವನ್ನು ಆನಂದಿಸುವ ಅಭ್ಯಾಸವನ್ನು ಬೆಳೆಸುವುದು, ಫಿಟ್ ಆಗಿ ಉಳಿಯುವುದು ಮತ್ತು ಮನಸ್ಸು ಮತ್ತು ಆತ್ಮದ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯ. ನಾನು ವಿಯಾನ್ (Viaan) ನೊಂದಿಗೆ ಮಾಡಲು ಪ್ರಯತ್ನಿಸಿದ್ದು ಅದನ್ನೇ. ಈಗ ವಿಯಾನ್ ತನ್ನ ಪುಟ್ಟ ಫಾಲೋವರ್(Follower) ಸಮಿಷಾಗೆ ಇದನ್ನೇ ಕಲಿಸುವುದು ನನಗೆ ತುಂಬಾ ಹೆಮ್ಮೆ ತಂದಿದೆ ಎಂದು ಬರೆದಿದ್ದರು.

Scroll to load tweet…

ನಟಿ ಶಿಲ್ಪಾ ಶೆಟ್ಟಿ ಅವರು ದೀಪಾವಳಿಯ ಒಂದು ದಿನದ ನಂತರ ಹಲವಾರು ವೀಡಿಯೊ ತುಣುಕುಗಳನ್ನು ಹಂಚಿಕೊಂಡಿದ್ದಾರೆ. Instagramನಲ್ಲಿ ಶಿಲ್ಪಾ ಅವರು ತಮ್ಮ ಮಗಳು ಸಮೀಶಾ ಶೆಟ್ಟಿ ಕುಂದ್ರಾ ಅವರೊಂದಿಗೆ ದೆಹಲಿಗೆ(Delhi) ಪ್ರಯಾಣಿಸಿದ ನಂತರ ರಸಗುಲ್ಲಾವನ್ನು ಆನಂದಿಸುತ್ತಿರುವ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ.

View post on Instagram

ವೀಡಿಯೊದಲ್ಲಿ, ಶಿಲ್ಪಾ ಶೆಟ್ಟಿ ಡೈನಿಂಗ್ ಟೇಬಲ್‌ನಲ್ಲಿ ಬಳಿ ತನ್ನ ಬಳಿ ರಸಗುಲ್ಲಾಗಳ ದೊಡ್ಡ ಬಟ್ಟಲಿನೊಂದಿಗೆ ಕುಳಿತಿದ್ದರು. ಅವಳು ಒಂದು ತುಂಡು ತಿನ್ನುತ್ತಿದ್ದಂತೆ, ಇದು ಭಾನುವಾರವಲ್ಲ ಆದರೆ ಹೊಸ ವರ್ಷ. ದೀಪಾವಳಿ ಶುಭಾಶಯಗಳು(Happy Diwali). ದೀಪಾವಳಿ(Diwali) ಆಚರಿಸಿ. ಆಮೇಲೆ ವರ್ಕೌಟ್(Workout) ಮಾಡಿ ಎಂದಿದ್ದಾರೆ. ನಟಿ ದೇಸೀ ಶೈಲಿ ಆಹಾರ ಸೇವಿಸುವ ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ.